
ಧಾರವಾಡ,ಆ27: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಹಸ್ರಾರುದೇಶಭಕ್ತರತ್ಯಾಗ ಹಾಗೂ ಬಲಿದಾನವನ್ನು ಇಂದಿನ ಯುವಕರು ಅರ್ಥೈಯಿಸಿಕೊಳ್ಳಬೇಕು ಎಂದುಧಾರವಾಡಆಕಾಶವಾಣಿಕೇಂದ್ರದ ಹಿರಿಯರಂಗಕರ್ಮಿಡಾ. ಶಶಿಧರ ನರೇಂದ್ರ ಹೇಳಿದರು.ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ನಗರದ ವಿದ್ಯಾರಣ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಆ ದಿನಗಳು' ಸ್ಮರಣೆಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರಡಿಗುಡ್ಡ ಸರಕಾರಿ ಪ. ಪೂ. ಮಹಾವಿದ್ಯಾಲಯದಉಪನ್ಯಾಸಕ ಪ್ರಕಾಶ ಸುಣಗಾರ್
ಕರ್ನಾಟಕದಲ್ಲಿಅಸಹಕಾರ ಚಳುವಳಿ ಪ್ರಖರತೆ’ ಕುರಿತುಉಪನ್ಯಾಸ ನೀಡಿ ಮಾತನಾಡಿ, 1919 ರಲ್ಲಿ ಬ್ರಿಟಿಷರುಜಾರಿಗೆತಂದ `ರೌಲೆಟ್ ಶಾಸನ’ ಜಲಿಯನ್‍ವಾಲಾಬಾಗ್ ದುರಂತಗಳು ಭಾರತೀಯರಲ್ಲಿ ಆಳರಸರ ವಿರುದ್ಧ ಪ್ರತಿಕಾರ ಭಾವನೆ ಮೂಡಿಸಿದವು. ಗಾಂಧೀಜಿಯವರುರಾಜಕೀಯದಲ್ಲಿದುಮುಕಿಸತ್ಯಾಗ್ರಹ ಎಂಬ ಹೊಸ ಪರಿಕಲ್ಪನೆಯ ಮೂಲಕ ಶಾಂತಿಯುತ ಹೋರಾಟ ಪ್ರಾರಂಭಿಸಿದರು. ಇದೇ ಸಮಯದಲ್ಲಿ ಪಂಜಾಬದಜಲಿಯನ್‍ವಾಲಾ ಬಾಗ್‍ದಲ್ಲಿ ಪ್ರತಿಭಟನಾಕಾರರ ವಿರುದ್ಧಜನರಲ್‍ಡಯರಗುಂಡಿನ ಮಳೆ ಸುರಿಸಿದರು.ಈ ಹತ್ಯಾಕಾಂಡದಲ್ಲಿ378 ಜನ ಸಾವನ್ನಪ್ಪಿ 1200 ಜನರುಗಾಯಗೊಂಡರು.
ಉತ್ತರ ಪ್ರದೇಶದಚೌರಿಚೌರಾದಲ್ಲಿಉದ್ರಿಕ್ತಜನ ಪೊಲೀಸ್ ಸ್ಟೇಶನ್‍ಗೆ ಬೆಂಕಿಹಚ್ಚಿ 22 ಜನ ಪೊಲೀಸರನ್ನುಕೊಂದರು.ಗಾಂಧೀಜಿಯವರುಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡರು.ಯಾಕೆಂದರೆ ಹೋರಾಟಅವರತತ್ವ ನಿಷ್ಠೆಯ ವಿಷಯವಾಗಿತ್ತು.ಕರ್ನಾಟಕದಲ್ಲೂಅಸಹಕಾರ ಚಳುವಳಿ ಪ್ರಖರತೆಯಿಂದಕೂಡಿತ್ತು.ಗಂಗಾಧರ್‍ರಾವ್‍ದೇಶಪಾಂಡೆ, ಆರ್.ಆರ್.ದಿವಾಕರ, ಕಡಪಾರಾಘವೇಂದ್ರರಾಯ, ಬಳ್ಳಾರಿ ಸಿದ್ಧಮ್ಮ, ಶಕುಂತಲಾಕುರ್ತಕೋಟಿ, ಯಶೋಧರಾದಾಸಪ್ಪ ಮುಂತಾದವರುಅಸಹಕಾರ ಚಳುವಳಿ ಸಮರ್ಥವಾಗಿ ನಡೆಸಿಕೊಂಡು ಬಂದರು.ನಾ. ಸು.ಹರ್ಡೀಕರ ಹಿಂದುಸ್ಥಾನ ಸೇವಾದಳ ಸ್ಥಾಪಿಸಿ ಸ್ವಯಂ ಸೇವಕರನ್ನು ಸಿದ್ಧಗೊಳಿಸಿದರು.ಆ ನಾಯಕರದೇಶಭಕ್ತಿ ಸ್ವಾತಂತ್ರ್ಯ ಪ್ರಿಯತೆಅರಿಯಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾರಣ್ಯ ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ.ಶರಣಮ್ಮ ಗೋರೆಬಾಳ ಮಾತನಾಡಿ, ಅನೇಕ ಮಹನೀಯರತ್ಯಾಗ, ಬಲಿದಾನದಿಂದ ಪಡೆದ ಸ್ವಾತಂತ್ರ್ಯವನ್ನು ಸರಿಯಾದ ಮಾರ್ಗದಲ್ಲಿ ನಡೆದು ಉಳಿಸಿಕೊಂಡು ಹೋಗಬೇಕೆಂದರು.
ಪ್ರಾಚಾರ್ಯ ನಂದೀಶ ಕಾಖಂಡಕಿ ಮಾತನಾಡಿದರು.ಶಿಕ್ಷಣ ಮಂಟಪ ಸಂಚಾಲಕ ವೀರಣ್ಣಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿಡಾ.ಡಿ. ಜಿ. ಶೆಟ್ಟಿ, ಎಂ.ಎಸ್. ನರೇಗಲ್ಲಇದ್ದರು.ಶಿವಕುಮಾರ ಗಾಣಿಗೇರ ಸ್ವಾಗತಿಸಿದರು.ಸದಾನಂದ ಶಿಂತ್ರಿ ನಿರೂಪಿಸಿದರು.ಡಾ. ಸುರೇಶ ಹಾನಗಲ್ಲ ವಂದಿಸಿದರು.ಡಾ. ಭರತ ನಾಯಕ, ರಮೇಶ ಮಾಂಗ, ಶಕುಂತಲಾ, ಜ್ಯೋತಿ, ಕರುಣಾಕುಲಕರ್ಣಿ, ವಾಣಿಶ್ರೀ ಇದ್ದರು.