ದೇಶಪ್ರೇಮ ಪ್ರತಿಯೊಬ್ಬರೂ ಬೆಳೆಸಿಕೋಂಡಾಗ ನಿಜವಾದ ಸ್ವಾತಂತ್ರ್ಯ ದಿನ ಆಚರಣೆ- ಷಡಾಕ್ಷರಿ


ಸಂಡೂರು:ಅ: 16: 2ನೇ ಪ್ರಪಂಚ ಯುದ್ದದಲ್ಲಿ ಹಿರೋಸೀಮಾ ನಾಗಸಾಕಿಯ ಮೇಲೆ ಬಿದ್ದ ಅಣುಬಾಂಬ್ ಇಡೀ ಜಪಾನ್ ರಾಷ್ಟ್ರನಶಿಸಿಹೋಗುವಂತೆ ಮಾಡಿತ್ತು, ಅದರೆ ಅವರಲ್ಲಿಯ ದೇಶಪ್ರೇಮ ಇಂದು ಇಡೀ ಜಗತ್ತಿನ ಶ್ರೇಷ್ಠ ರಾಷ್ಟ್ರವಾಗುವಂತೆ ಮಾಡಿದ್ದಾರೆ, ಅದೇ ರೀತಿಯ ಭಾರತೀಯರಾದ ನಾವು ದೇಶಪ್ರೇಮವನ್ನು ಬೆಳಸಿಕೊಳ್ಲುವ ಮೂಲಕ ಜಗತ್ತಿನ ಉತ್ತಮ ರಾಷ್ಟ್ರವನ್ನಾಗಿಸೋಣ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಷಡಾಕ್ಷರಿ ತಿಳಿಸಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿ ಅವರಣದಲ್ಲಿ ಗೃಹರಕ್ಷಕದಳ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನೋತ್ಸದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ನಮ್ಮ ನಾಡು ಇಡೀ ಜಗತ್ತಿನ ಶ್ರೇಷ್ಠನಾಡಾಗಿತ್ತು, ನಳಂದಂತಹ ವಿಶ್ವವಿದ್ಯಾಲಯದಲ್ಲಿ ಸಾವಿರಾರು ವಿದ್ವಾಂಸರು ವಿದೇಶಗಳಿಂದ ಬಂದು ಶಿಕ್ಷಣ ಕಲಿಯುತ್ತಿದ್ದರು, ಕಾರಣ ನಾವು ಪಾಶ್ಚ್ಯತ್ಯ ರಾಷ್ಟ್ರಗಳಿಗಿಂತಲೂ ಪ್ರಗತಿಯಲ್ಲಿದ್ದೆವು, ಅದರೆ ಇಂದು ನಾವು ಇನ್ನೂ ಪ್ರಗತಿಯಲ್ಲಿ ಹಿಂದೆ ಬೀಳುತ್ತಿದ್ದೇವೆ ಕಾರಣ ನಮ್ಮಲ್ಲಿಯ ದೇಶಪ್ರೇಮದ ಕೊರತೆ, ಇಂದು ನಮ್ಮ ಮಕ್ಕಳಿಗೆ ದೇಶಪ್ರೇಮದ ಬಗ್ಗೆ, ನೈತಿಕತೆ, ಸಂಶೋಧನೆ ಬಗ್ಗೆ ತಿಳಸಬೇಕಾಗಿದೆ, ಕಾರಣ ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಯುವಕರು ಈ ದೇಶಕ್ಕಾಗಿಯೇ ನಮ್ಮ ತನು,ಮನಧನಗಳನ್ನು ಅರ್ಪಿಸಿದ್ದಾರೆ , ಅಂತಹ ಮಹಾನ್ ವ್ಯಕ್ತಿಗಳ ಅದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಘಟಕಾಧಿಕಾರಿ ನರಿಮಲ್ಲಿಕಾರ್ಜುನ, ತಾಲೂಕು ಪಂಚಾಯಿತಿಯ ಎಲ್ಲಾ ಸಿಬ್ಬಂದಿವರ್ಗದವರು, ಅಕ್ಷರದಾಸೋಹ ಯೋಜನೆಯ ಅಧಿಕಾರಿಗಳು ಎಲ್ಲರೂ ಉಪಸ್ಥಿತರಿದ್ದರು.