ದೇಶಪ್ರೇಮಿಗಳ ಸ್ಮರಿಸಿದ ಪ್ರಧಾನಿ

ನವದೆಹಲಿ,ಮಾ.೨೩- ಇಂದು ದೇಶಾದ್ಯಂತ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ. ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ,ದೇಶಪ್ರೇಮಿ ಭಗತ್‌ಸಿಂಗ್ ಸುಖ್‌ದೇವ್ ಮತ್ತು ರಾಜ್‌ಗುರುವನ್ನು ಸ್ಮರಿಸಿದ್ದಾರೆ.
ಅವರ ತ್ಯಾಗ,ಬಲಿದಾನಗಳು ತಲೆತಲಾಂತರದವರೆಗೆ ಜನರಿಗೆ ಸ್ಫೂರ್ತಿಯಾಗಿ ಉಳಿಯಲಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಭಗತ್‌ಸಿಂಗ್ ಮತ್ತು ರಾಜ್‌ಗುರು ಅವರಿಗೆ ಹುತಾತ್ಮರ ದಿನದ ವಂದನೆಗಳು. ಈ ದೇಶಪ್ರೇಮಿಗಳ ತ್ಯಾಗ ಪ್ರತಿಯೊಂದು ಪೀಳಿಗೆಗೆ ಸ್ಫೂರ್ತಿಯಾಗಿ ಉಳಿಯಲಿದೆ. ಜೈ ಹಿಂದ್ ಶಹಿದ್ ದಿವಸ್ ಎಂದು ಹೇಳಿದ್ದಾರೆ.
ಬ್ರಿಟೀಷ್ ಸರ್ಕಾರದಿಂದ ಗಲ್ಲಿಗೇರಿಸಿದ ದೇಶಪ್ರೇಮಿ ಭಗತ್‌ಸಿಂಗ್, ರಾಜ್‌ಗುರು ಮತ್ತು ಸುಖ್‌ದೇವ್ ಅವರಿಗೆ ಗೌರವ ಸಲ್ಲಿಸಲು ಮಾ. ೨೩ ರಂದು ಶಹೀದ್ ದಿವಸ್‌ನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಈ ಮೂವರು ೧೯೨೮ ರಲ್ಲಿ ಉಪಪೊಲೀಸ್ ಅಧೀಕ್ಷಕ ಜೆ.ಪಿ ಸೌಂದರ್ ಅವರನ್ನು ಅಪರಾಧಿಗಳೆಂದು ಘೋಷಿಸಿದ್ದರು.