ದೇಶಪಾಂಡೆಯವರಿಗೆ ವಿಪ್ರಶ್ರೀ ಪ್ರಶಸ್ತಿ

ಕಲಬುರಗಿ:ನ.2: ಇತ್ತೀಚೆಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಡಾ.ಎಸ್ .ಎಂ. ಪಂಡಿತ್ ರಂಗಮಂದಿರದಲ್ಲಿ “ವಿಪ್ರ ಪ್ರತಿಭೋತ್ಸವ ” ಬೃಹತ್ ಸಮಾರಂಭ ಜರುಗಿತ್ತು. ಈ ಸಮಾರಂಭದಲ್ಲಿ ಪ್ರಹ್ಲಾದ್ ಜೋಶಿ ಕೇಂದ್ರ ಮಂತ್ರಿಗಳು ಸೇರಿದಂತೆ ಅನೇಕ ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಜೊತೆಗೆ ವಿಪ್ರಶ್ರೀ ಪ್ರಶಸ್ತಿ ಪುರಸ್ಕಾರವೂ ಜರುಗಿತು.

ಇದೇ ಸಂದರ್ಭದಲ್ಲಿ ಪ್ರಹ್ಲಾದ್ ಜೋಷಿ ಸಂಸದೀಯ ವ್ಯವಹಾರ ಹಾಗೂ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ನವದೆಹಲಿ ಇವರ ವತಿಯಿಂದ ಬೀದರ್ ಜಿಲ್ಲೆಯ ಸಾಹಿತಿ ಡಾ. ಎಂ.ಜಿ.ದೇಶಪಾಂಡೆಯವರಿಗೆ ರಾಜ್ಯ ಮಟ್ಟದ “ವಿಪ್ರ ಶ್ರೀ ” ಪ್ರಶಸ್ತಿ ಪ್ರದಾನ ಮಾಡಲಾಯಿತು ಈ ಕುರಿತು ಬೀದರಿನ ಉಪೇಂದ್ರ ದೇಶಪಾಂಡೆ, ಬಾಬುರಾವ ಮದಕಟ್ಟಿ, ಕಿರಣ್ ಮಹಾರಾಜ, ಶ್ರಿಕಾಂತ್ ಪಾಟೀಲ್, ನರೇಶ ಪಾಠಕ್ , ದೇವೆಂದ್ರ ವಲ್ಲೇಪುರೆ, ಬಾಬುರಾವ ಗೊಂಡಾ, ಆರ್. ಎಸ್ .ಬಿರಾದಾರ, ಸಂಜೀವಕುಮಾರ ಅತಿವಾಳೆ, ಗೋಪಾಲಕೃಷ್ಣ ವಂಡ್ಸೆ , ಬಸವರಾಜ್ ಜಿ .ಎಂ. ಸುಮೀತ್ ಗಣೂರೆ, ಡಾ. ಚಂದ್ರಶೇಖರ ಮುಂತಾದವರು ಅಭಿನಂದಿಸಿದ್ದಾರೆ.