ದೇಶಪಾಂಡೆಗೆ ರಾಜ್ಯ ಪ್ರಶಸ್ತಿ ಗೌರವ

ಬೀದರ:ಎ.30:ಇತ್ತೀಚೆಗೆ ಉಡುಪಿ ಜಿಲ್ಲೆಯ ಉಪ್ಪುಂದ ತಾಲ್ಲೂಕಿನಲ್ಲಿ ಜರುಗಿದ ರಾಜ್ಯಮಟ್ಟದ ಕನ್ನಡ ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲೆಯ ಖ್ಯಾತ ಸಾಹಿತಿಗಳಾದ ಡಾ. ಎಂ. ಜಿ .ದೇಶಪಾಂಡೆ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ” ಕಡಲತಡಿಯ ಭಾರ್ಗವ ಶಿವರಾಮ ಕಾರಂತ ಪ್ರಶಸ್ತಿ”ಯನ್ನು ಪ್ರದಾನ ಮಾಡಿ ಗೌರವಿಸಲಾಯಿತು .ಶ್ರೀಮತಿ ಲಕ್ಷ್ಮೀ ನಾಗಪ್ಪಯ್ಯ ನಾಯಕ್ ಸದ್ಭಾವನಾ ವೇದಿಕೆ ನಾಯ್ಕನಕಟ್ಟೆ ಬೈಂದೂರು ತಾಲೂಕಿನಲ್ಲಿಜರುಗಿದ ಕಾರ್ಯಕ್ರಮ ” ಕೃತಿಗಳ ಬಿಡುಗಡೆ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ವೇದಿಕೆ”ಯಲ್ಲಿ ಈ ಪ್ರಶಸ್ತಿ ನೀಡಲಾಗಿದ್ದು ಬೀದರಿನ ಸಾಹಿತಿಗಳಾದ ಹಂಶಕವಿ, ಡಾ. ರಾಮಚಂದ್ರ ಗಣಾಪುರ ,ಡಾ. ಜಗದೇವಿ ತಿಬಶೆಟ್ಟಿ, ಓಂಕಾರ್ ಪಾಟೀಲ್ ,ದೇವೇಂದ್ರಕುಮಾರ ವಲ್ಲೇಪುರೆ, ಅರವಿಂದ ಕುಲಕರ್ಣಿ, ಸಂಜಯಕುಮಾರ್ ಮೈನಳ್ಳಿ , ವೀರಭದ್ರಪ್ಪ ಉಪ್ಪಿನ್, ಕಿರಣ್ ಮಹಾರಾಜ, ಕಲ್ಯಾಣ್ ರಾವ ಮರಕುಂದಾ ಕಾಡವಾದ, ಅಶೋಕ್ ಕುಮಾರ್ ಬೂದಿಹಾಳ್ , ಬಾಬುರಾವ್ ಮುಧಾಳೆ , ಪ್ರಕಾಶ್ ಕುಲಕರ್ಣಿ ಮುಗನೂರ್ , ರೂಪಾ ಪಾಟೀಲ್ , ಶ್ರೀಕಾಂತ್ ಪಾಟೀಲ್ , ಡಾ. ಶ್ರೆ?ಯಾ ಮಹೀಂದ್ರಕರ್ ಮುಂತಾದವರು ಹರ್ಷ ವ್ಯಕ್ತಪಡಿಸಿದ್ದಾರೆ .