ದೇಶದ 2 ನೇ ಸಂತನೆಂದರೆ ರೈತ

ಇಂಡಿ:ಫೆ.12:ದೇಶದಲ್ಲಿ ಆರೋಗ್ಯಯುತ,ಸತ್ವಯುತ ಭೂಮಿಯ ಮಣ್ಣಿನಿಂದ ರೈತರು ವಂಚಿತರಾಗುತ್ತಿದ್ದು, ಅದಕ್ಕಾಗಿ ರೈತರು ಮುಂದಿನ ಪೀಳಿಗೆಗೆ ಸತ್ವಯುತ ಭೂಮಿ ಬಿಟ್ಟು ಹೋಗಬೇಕಾದರೆ ಕೃಷಿಯಲ್ಲಿ ಜಾನುವಾರುಗಳನ್ನು ಸಾಕಬೇಕು. ಅದರಲ್ಲಿ ಎತ್ತುಗಳನ್ನು ಸಾಕುವುದಕ್ಕೆ ಮೊದಲ ಪ್ರಾಶಸ್ಯ ನೀಡಬೇಕು.ಜಾನುವಾರುಗಳ ಸಗಣಿಯನ್ನು ಜಮೀನಕ್ಕೆ ಹಾಕಿದರೆ ಗೊಬ್ಬರವಾಗಿ ಇಳುವರಿ ಹೆಚ್ಚಿಗೆ ಪಡೆಯುವುದರ ಜೊತೆಗೆ ಸತ್ವಯುತ ಮಣ್ಣು ಉಳಿಸಿಕೊಳ್ಳಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪೌಂಢೇಷನದ ಸಂಸ್ಥಾಪಕ ಬಸವರಾಜ ಬಿರಾದಾರ ಹೇಳಿದರು.
ಅವರು ಶನಿವಾರ ಸಿದ್ದೇಶ್ವರ ಮಹಾಸ್ವಾಮೀಜಿ ಅವರ ಜನ್ಮಸ್ಥಳ ಬಿಜ್ಜರಗಿ ಗ್ರಾಮದಿಂದ ನಂದಿಯಾತ್ರೆ ಪ್ರಾರಂಭಗೊಂಡು ಮಣ್ಣು ಉಳಿಸಿ ಎತ್ತುಗಳನ್ನು ಬೆಳೆಸಿ ಜಾಗ್ರತಿ ಜಾಥಾ ಸಾಲೋಟಗಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಸರ್ಕಾರ ಕೃಷಿಯಲ್ಲಿ ಜಾನುವಾರು ಅದರಲ್ಲೂ ಎತ್ತುಗಳನ್ನು ಸಾಕುವವರಿಗೆ ವಿಶೇಷ ಸೌಲಭ್ಯಗಳನ್ನು ನೀಡಬೇಕು. ದೇಶದಲ್ಲಿ 2 ನೇ ಸಂತನೆಂದರೆ ರೈತ.ಅದಕ್ಕಾಗಿಯೇ ಪೂಜೆ ಸಿದ್ದೇಶ್ವರ ಮಹಾಸ್ವಾಮೀಜಿ ಅವರು ರೈತರ ಬಗ್ಗೆ ಸದಾ ಕಳಕಳಿ ಹೊಂದಿದ್ದು,ಅವರ ಬಳಿ ಯಾರಾದರೂ ರಾಜಕಾರಣಿಗಳು ಬಂದರೆ ಅವರಿಗೆ ಮೊದಲು ಹೇಳುವುದು ನೀವು ರೈತರಿಗೆ ನೀರು ಕೊಡಿ, ಅವರು ಬಂಗಾರ ಬೆಳೆದು ಬಂಗಾರ ನೀಡುತ್ತಾರೆ. ಮರಗಿಡಗಳನ್ನು ಬೆಳೆಸಬೇಕು,ಜಾನುವಾರುಗಳನ್ನು ಸಾಕಿ ಸಾವಯವ ಕೃಷಿಯಲ್ಲಿ ಹೆಚ್ಚು ಒತ್ತು ನಿಡುವಂತೆ ರೈತರಿಗೆ ತಿಳುವಳಿಕೆ ಹೇಳುತ್ತಿದ್ದರು. ಅಲ್ಲದೆ ಕೃಷಿಯ ಜೊತೆಗೆ ಹೈನುಗಾರಿಕೆ, ಜಾನುವಾರುಗಳನ್ನು ಸಾಕುವುದು ಮಾಡಬೇಕು ಎಂದು ಸಲಹೆ ನೀಡುತ್ತಿದ್ದರು ಎಂದು ಹೇಳಿದರು.
ಪ್ರಗತಿಪರ ರೈತರಾದ ಸೋಮನಾಥ ಶಿವೂರ ಮಾತನಾಡಿ, ಅರಣ್ಯ ಪ್ರದೇ
ಶದಲ್ಲಿನ ಗಿಡ,ಮರಗಳು, ಪಕ್ಷಿಗಳು ಇಂಪಾಗಿ ಚಿಲಿಪಿಲಿಗುಟ್ಟುವುದನ್ನು ಕಿವಿಯಿಂದ ಕೇಳಿ, ಕಣ್ಣಾರೆ ಕಂಡು ಸಂತಸ ಪಟ್ಟು,ಸೃಷ್ಠಿ,ನಿಸರ್ಗದಲ್ಲಿ ದೇವರನ್ನು ಕಾಣಿ ಎಂದು ಉದೇಶ ಮಾಡಿದ ಸಂತ,ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಇಂದು ನಮ್ಮೊಟ್ಟಿಗೆ ಇಲ್ಲವಾದರೂ, ಅವರು ಬದುಕಿನ ಮಾರ್ಗ,ನಡೆ,ನುಡಿ,ಸತ್ಸಂಗ ಇಂದಿನ ಯುವ ಸಮೂಹಕ್ಕೆ ದಾರಿದೀಪವಾಗಿವೆ. ವೃಕ್ಷವನ್ನು ಪ್ರೀತಿಸಿದರೆ ದೇಶವನ್ನು ಪ್ರೀತಿಸಿದಂತೆ.ಭೂಮಂಡಲವನ್ನೇ ಸ್ವರ್ಗ ಮಾಡಬೇಕೇ ವಿನ,ಸ್ವರ್ಗಕ್ಕೆ ನಾವೆ ಹೋಗುವುದಲ್ಲ.ವೃಕ್ಷವನ್ನು ಪ್ರೀತಿಸುವುದು,ರಕ್ಷಿಸುವುದು ಅದುವೇ ಧರ್ಮ ಎಂದು ಹೇಳಿದ ನಿಸರ್ಗ ಪ್ರೇಮಿ ಸಿದ್ದೇಶ್ವರ ಶ್ರೀಗಳು ಆಗಿದ್ದರು.ದೇವರ ದರ್ಶನವಾಗಲು, ಪ್ರಕೃತಿಯಲ್ಲಿ ದೇವರನ್ನು ತೊರಿಸಿದ ಸಾತ್ವಿಕತೆಯ ಸಂತರಾಗಿ ಬೆಳೆದು ಬಂದ ಸಿದ್ದೇಶ್ವರ ಶ್ರೀಗಳು, ಅರಣ್ಯ,ಗಿಡಮರಗಳಿಂದ ಸ್ವಚ್ಚಂದವಾದ ಗಾಳಿಯನ್ನು ಬಯಸಿದವರು, ರೈತರಿಗಾಗಿ ನೀರಾವರಿಯನ್ನು ಮಾಡಬೇಕು ಎಂಬ ಉಪದೇಶವನ್ನಿತ್ತ,ರೈತಪ್ರೇಮಿ ಇವರಾಗಿದ್ದರು ಎಂದು ಹೇಳಿದರು.
ಸೋಮಯ್ಯ ಚಿಕ್ಕಪಟ್ಟ ಸಾನಿಧ್ಯ ವಹಿಸಿದ್ದರು.ಸೋಮನಾಥ ಶಿವೂರ,ವಿನೋದ ದೊಡ್ಡಗಾಣಿಗೇರ, ಶ್ರೀಶೈಲ ನಾಗರಳ್ಳಿ, ಶಿವಾನಂದ ಮನಗೊಂಡ, ರಾಮಗೊಂಡ ಮನಗೊಂಡ, ಪಾಂಡು ಪ್ಯಾಟಿ ಮೊದಲಾದವರು ಜಾಗ್ರತಿ ಸಭೆಯಲ್ಲಿ ಇದ್ದರು.ವಿ.ಕೆ.ದೊಡ್ಡಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಂ.ಎಸ್.ಬಡಿಗೇರ ನಿರೂಪಿಸಿ,ವಂದಿಸಿದರು.
ಮಣ್ಣು ಉಳಿಸುವುದು ,ಕೃಷಿಯಲ್ಲಿ ಎತ್ತುಗಳನ್ನು ಬೆಳೆಸುವುದು ನಂದಿಯಾತ್ರೆಯ ಮುಖ್ಯ ಉದ್ದೇಶವಾಗಿದ್ದು,ಸಾಲೊಟಗಿ ಗ್ರಾಮದಲ್ಲಿ ಅದ್ದೂರಿಯಲ್ಲಿ ಸ್ವಾಗತಿಸಲಾಯಿತು.