
ಗುವಹಟಿ, ಆ.೨೨- ದೇಶದ ಅತ್ಯಂತ ಹಳೆಯ ಸೆರೆಯಾದ ಆನೆ ಎನ್ನುವ ಹಿರಿಮೆಗೆ ಪಾತ್ರವಾಗಿದ್ದ ಬಿಜುಲಿ ಪ್ರಸಾದ್ , ಅಸ್ಸಾಂ ಚಹಾ ತೋಟದಲ್ಲಿ ತನ್ನ ೮೯ ನೇ ವಯಸ್ಸಿನಲ್ಲಿ ಸಾವನ್ನಪ್ಪಿದೆ.ದಂತ ಕಳ್ಳಸಾಗಾಣಿಕೆದಾರರನ್ನು ಹಿಮ್ಮೆಟ್ಟಿಸುವಲ್ಲಿ ಜುಬಿಲಿ ಪ್ರಸಾದ್, ಶಕ್ತಿ ಮತ್ತು ಚಹಾ ಪೊದೆಗಳನ್ನು ತೆರವುಗೊಳಿಸುವ ಸಾಮರ್ಥ್ಯಕ್ಕಾಗಿ ಖ್ಯಾತಿ ಪಡೆದಿತ್ತು.
ಅಸ್ಸಾಂನ ಸೋನಿತ್‌ಪುರದ ವಿಸ್ತಾರವಾದ ಟೀ ಎಸ್ಟೇಟ್‌ನಲ್ಲಿ ೮೯ ನೇ ವಯಸ್ಸಿನಲ್ಲಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಿಜುಲಿ ಪ್ರಸಾದ್ ದೇಶದ ಅತ್ಯಂತ ಹಳೆಯ ಸೆರೆಯಾಳು ಆನೆ ಎನ್ನಲಾಗಿದೆ. ಮಾವುತ, ಬಿಜುಲಿಯ ಚಲನರಹಿತನಾಗಿ ಕಂಡ ಬಳಿಕ ತಪಾಸಣೆ ನಡೆಸಿದ ವೇಳೆ ಸಾವನ್ನಪ್ಪಿರುವುದು ಖಚಿತವಾಗಿದೆ.೧೯೪೦ ರ ದಶಕದಲ್ಲಿ ಕಾಡಿನಿಂದ ರಕ್ಷಿಸಲ್ಪಟ್ಟ ಬಿಜುಲಿ ಪ್ರಸಾದ್ ಅವರನ್ನು ಪ್ರಸ್ತುತ ಸ್ಥಳೀಯ ಶಾಸಕ ರಂಜೀತ್ ದತ್ತಾ ಅವರ ಕುಟುಂಬ ೧೯೫೦ ರ ದಶಕದಲ್ಲಿ ವಿಲಿಯಮ್ಸನ್ ಮಾಗೊರ್ ಅಂಡ್ ಕೋ ಲಿಮಿಟೆಡ್‌ಗೆ ಸರಿಸುಮಾರು ೩,೦೦೦ ರೂ.ಗಳಿಗೆ ಮಾರಾಟ ಮಾಡಿದ್ದರು
ಆನೆ, ತೋಟದಲ್ಲಿ ಕೆಲಸಗಾರನಾಗಿ ಸೇವೆ ಸಲ್ಲಿಸುತ್ತಿತ್ತು.ಇದರ ಕೆಲಸ ೧೯೫೦ ರಿಂದ ೨೦೧೮ ರವರೆಗೆ ವ್ಯಾಪಿಸಿದೆ ಮತ್ತು ಅಂತಿಮವಾಗಿ ಅವರನ್ನು ಹತ್ತಿರದ ಬೆಹಾಲಿ ಟೀ ಎಸ್ಟೇಟ್‌ಗೆ ಸ್ಥಳಾಂತರಿಸಲಾಯಿತು.”ಬಿಜುಲಿ ಪ್ರಸಾದ್ ನಮ್ಮ ಕಂಪನಿಗೆ ಹೆಮ್ಮೆಯ ಮೂಲವಾಗಿದ್ದರು. ಅದರ ಪೂಜೆಗೆ ಅರ್ಚಕರನ್ನು ಮತ್ತು ಅವರ ಆರೈಕೆಗಾಗಿ ಇಬ್ಬರು ಮಾವುತರನ್ನು ನೇಮಿಸಿಕೊಂಡಿದ್ದೆವು ಎಂದು ಬೆಹಾಲಿ ಟೀ ಎಸ್ಟೇಟ್‌ನ ಉಪ ವ್ಯವಸ್ಥಾಪಕ ಉಜ್ಜಲ್ ಬಾಸ್ನೆಟ್ ಹೇಳಿದ್ದಾರೆ.
ಕಾಡು ಆನೆಗಳು ೬೨-೬೫ ವರ್ಷಗಳವರೆಗೆ ಬದುಕುತ್ತವೆ, ಬಿಜುಲಿ ಪ್ರಸಾದ್ ಅವರ ಅಸಾಧಾರಣ ಪ್ರಯಾಣದಿಂದ ಅದರ ಜೀವನ ಸಾಮಾನ್ಯಕ್ಕಿಂತ ವಿಸ್ತರಿಸಿತ್ತು.ಜೀವನದುದ್ದಕ್ಕೂ ಆನೆಪಡೆದ ಕಾಳಜಿ ಮತ್ತು ಮೆಚ್ಚುಗೆಗೆ ಸಾಕ್ಷಿಯಾಗಿದೆ.
ಬಿಜುಲಿ ಪ್ರಸಾದ್ ಟೀ ಎಸ್ಟೇಟ್‌ಗೆ ಹೆಚ್ಚಿನ ಪ್ರಾಮುಖ್ಯತೆ ಗಳಿಸಿಕೊಡುವಲ್ಲಿ ಯಶಸ್ವಿಯಾಗಿತ್ತು ಆನೆಯಿಂದ ಆಶೀರ್ವಾದ ಪಡೆಯುವ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಬಾಸ್ನೆಟ್ ಹೇಳಿದ್ದಾರೆ.ಕೊನೆಯವರೆಗೂ ಬಿಜುಲಿ ಪ್ರಸಾದ್‌ಗೆ ಹಾರೈಕೆ ಮಾಡಲು ಒತ್ತು ನೀಡಲಾಗಿತ್ತು ಎಂದು ಸರ್ಕಾರಿ ವನ್ಯಜೀವಿ ಪಶುವೈದ್ಯ ಡಾ. ದಿಗಂತ ಶರ್ಮಾ ಅವರು ಹೇಳಿದ್ದಾರೆ.