ದೇಶದ ಹಸಿವನ್ನು ನೀಗಿಸಿದ ಮಹಾನ್ ನಾಯಕ ಡಾ. ಬಾಬು ಜಗಜೀವನರಾಮ್

ಹುಬ್ಬಳ್ಳಿ ಏ 5 : ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರು ಈ ದೇಶದ ಹಸಿರು ಕ್ರಾಂತಿಗೆ ದುಡಿದು ದೇಶದ ಹಸಿವನ್ನು ನೀಗಿಸಿದ ಮಹಾನ್ ನಾಯಕ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.
ಡಾ. ಬಾಬು ಜಗಜೀವನರಾಮ್ ಅವರ 114 ನೇ ಜಯಂತಿ ಅಂಗವಾಗಿ ನಗರದ ಇಂದಿರಾ ಗಾಜಿನ ಆವರಣದಲ್ಲಿರುವ ಅವರ ಪುತ್ಥಳಿಗೆ ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ವಿ.ಪ ಸದಸ್ಯ ಶ್ರೀನಿವಾಸ ಮಾನೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದರು.
ಈ ವೇಳೆ ಮಾತನಾಡಿದ ಶಾಸಕ ಪ್ರಸಾದ್ ಅಬ್ಬಯ್ಯ ಅವರು, ದೇಶದ ಪ್ರಗತಿಯಲ್ಲಿಯೇ ನಮ್ಮ ಪ್ರಗತಿಯಿದೆ. ಅದರ ಉದ್ಧಾರದಲ್ಲಿಯೇ ನಮ್ಮ ಉದ್ಧಾರವಿದೆ. ಅದರ ವಿಮೋಚನೆಯಲ್ಲಿಯೇ ನಮ್ಮ ವಿಮೋಚನೆಯಿದೆ ಎಂಬ ಮಹತ್ತರ ಸಂದೇಶವನ್ನು ಡಾ.ಬಾಬು ಜಗಜೀವನರಾಮ ಅವರು ಸಾರಿದ್ದಾರೆ. ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯೋಣ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಅಧಿಕಾರವಧಿಯಲ್ಲಿನ ಉತ್ತಮ ಕಾರ್ಯಗಳು ಹಾಗೂ ದೇಶಕ್ಕಾಗಿ ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಎಲಿಗಾರ್, ಮಾಜಿ ಪಾಲಿಕೆ ಸದಸ್ಯ ಗಣೇಶ ಟಗರಗುಂಟಿ, ಸಮತಾಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಮಹೇಶ್ ದಾಬಡೆ, ಅಬ್ದುಲ್ ಗಣಿ ವಕಿ ಅಹ್ಮದ್, ಇಮ್ರಾನ್ ಮುಧೋಳ, ಯಮನೂರ ಗುಡಿಹಾಳ, ಯಮನೂರ ಜಾಧವ್, ಪರಶುರಾಮ ಕಾಳೆ, ವಿಜನಗೌಡ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.