ದೇಶದ ಹಲವೆಡೆ ವಾರಾಂತ್ಯ ಕರ್ಫ್ಯೂ ಬಣಗುಡುತ್ತಿರುವ ರಸ್ತೆಗಳು

ನವದೆಹಲಿ,ಏ.೧೮- ಕೊರೊನಾ ಸೋಂಕು ತಡೆಗೆ ದೇಶದ ಅನೇಕ ನಗರಗಳಲ್ಲಿ ವಾರಾಂತ್ಯದ ಕರ್ಫ್ಯೂ ಹೇರಲಾಗಿದ್ದು, ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿವೆ.
ವಾರಾಂತ್ಯದ ಕರ್ಫ್ಯೂ ಇಂದು ೨ನೇ ದಿನವಾಗಿದ್ದು, ದೆಹಲಿ, ಮುಂಬೈ, ಪುಣೆ, ಭೂಪಾಲ್, ಲಖನೌ ಮತ್ತು ಇತರ ನಗರಗಳಲ್ಲಿ ಕಟ್ಟುನಿಟ್ಟಾಗಿ ವಾರಾಂತ್ಯದ ಕರ್ಫ್ಯೂಗೆ ಸಾಕ್ಷಿಯಾಗಿದೆ.
ಈ ನಗರಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ ಹೆಚ್ಚಳವಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ರಾತ್ರಿ ಕರ್ಫ್ಯೂಗೆ ಮೊರೆ ಹೋಗಿದೆ. ಅಗತ್ಯ ವಸ್ತುಗಳ ಸೇವೆಯನ್ನೊರತುಪಡಿಸಿ ಉಳಿದೆಲ್ಲ ವಾಣಿಜ್ಯ ವಹಿವಾಟುಗಳು ಬಂದ್ ಆಗಿವೆ. ಅವಶ್ಯಕ ವಸ್ತುಗಳಾದ ಔಷಧಿ, ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ.
ಚಂಡೀಗಢ ಮಾರುಕಟ್ಟೆಯಂತೂ ಮರುಭೂಮಿಯಂತಾಗಿದೆ. ಜನರು ಮನೆಯಿಂದಲೇ ಹೊರ ಬರುತ್ತಿಲ್ಲ. ಮಧ್ಯಪ್ರದೇಶದಲ್ಲಿ ಏ. ೨೬ರವರೆಗೂ ಕರ್ಫ್ಯೂ ವಿಧಿಸಲಾಗಿದೆ. ಮಧ್ಯ ಪ್ರದೇಶದಲ್ಲಿ ನಿನ್ನೆ ಒಂದೇ ದಿನ ೧೧,೨೬೯ ಪ್ರಕರಣಗಳು ದಾಖಲಾಗಿದ್ದವು.
ನಿನ್ನೆಯೂ ೪೮೩ ಹೊಸ ಪ್ರಕರಣಗಳು ದಾSಲಾಗಿವೆ.