ದೇಶದ ಸ್ವಾತಂತ್ರ್ಯಕ್ಕೆ ಫಡ್ಕೆ ಕೊಡುಗೆ ಅಮೋಘ

ಕಲಬುರಗಿ :ನ.4: ಭಾರತದ ಸ್ವಾತಂತ್ರ್ಯಕ್ಕೆ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ. ಕ್ರಾಂತಿಕಾರಿ ಹೋರಾಟಗಾರರಲ್ಲಿ ವಾಸುದೇವ ಬಲವಂತ ಫಡ್ಕೆ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ಅತ್ಯಂತ ಶೂರ, ದೇಶಭಕ್ತನಾಗಿ ಬ್ರಿಟಿಷರ ವಿರುದ್ಧ ನಿರಂತರವಾಗಿ ಕೆಚ್ಚೆದೆಯ ಹೋರಾಟ ಮಾಡಿ, ನಮ್ಮ ದೇಶದ ಸ್ವಾತಂತ್ರ್ಯವನ್ನು ದೊರಕಿಸಿಕೊಡುವಲ್ಲಿ ತಮ್ಮದೇ ಆದ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ಅವರು ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪ್ಲೆಕ್ಸ್‍ನಲ್ಲಿರುವ ‘ಬಸವೇಶ್ವರ ಪದವಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ವಾಸುದೇವ ಬಲವಂತ ಫಡ್ಕೆ ಅವರ 175ನೇ ಜನ್ಮ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ನಂತರ ಮಾತನಾಡುತ್ತಿದ್ದರು.

ಫಡ್ಕೆ ಅವರು ರಾನಡೆ ಅವರ ಮಾರ್ಗದರ್ಶನದಲ್ಲಿ ಬ್ರಿಟಿಷರ ವಿರುದ್ಧ ಹೋರಾಟವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ. ಬ್ರಿಟಿಷರು ಬಡವರಿಗೆ ವಿವಿಧ ರೀತಿಯಿಂದ ಮಾಡುತ್ತಿರುವ ಶೋಷಣೆಯ ವಿರುದ್ಧ ಹೋರಾಟಿ ಬಡವರಿಗೆ ನ್ಯಾಯವನ್ನು ಒದಗಿಸಿಕೊಟ್ಟರು. ಹೀಗೆ ನಿರಂತರವಾಗಿ ಹೋರಾಟ ಮಾಡುವ ಮೂಲಕ ಬ್ರಿಟಿಷರ ನಿದ್ದೆಗೆಡಿಸಿದ ಫಡ್ಕೆ ಅವರು ನ್ಯಾಯ, ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡುತ್ತಲೇ ಹುತಾತ್ಮರಾದದ್ದು ಮರೆಯುವಂತಿಲ್ಲವೆಂದು ನುಡಿದರು.

  ಸಂಸ್ಥೆಯ ಅಧ್ಯಕ್ಷ ಡಾ.ಅಂಬಾರಾಯ ಎಸ್.ಹಾಗರಗಿ ಮಾತನಾಡಿ, ಫಡ್ಕೆ ಅವರಲ್ಲಿರುವ ಸಾಮಾಜಿಕ ಕಾಳಜಿ, ದೇಶಪ್ರೇಮ ಈಗಿನ ಎಲ್ಲಾ ಯುವಕರಿಗೆ ಮಾದರಿಯಾಗಿದೆ. ಇಂತಹ ಅಪ್ಪಟ ದೇಶಭಕ್ತರ ಕೊಡುಗೆಯನ್ನು ತಿಳಿದುಕೊಂಡು ದೇಶ ಸೇವೆಯನ್ನು ಮಾಡಬೇಕೆಂದರು.

   ಕಾರ್ಯಕ್ರಮದಲ್ಲಿ ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ನಾಗೇಶ ತಿಮಾಜಿ ಬೆಳಮಗಿ, ಶರಣು ತುಳಾಜಿ, ಪ್ರೀತಿ ಶೀಲವಂತ, ಶ್ರೀಮಂತ ಕೋಟನೂರ, ಸಿದ್ದಾರೂಢ ಬಳಬಟ್ಟಿ ಸೇರಿದಂತೆ ಮತ್ತಿತರರಿದ್ದರು.