ದೇಶದ ಸ್ವಾತಂತ್ರ್ಯಕ್ಕೆ ಜನಪದರ ಕೊಡುಗೆ ಅಮೋಘ

ಕಲಬುರಗಿ,ಸೆ.26: ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನಪದರು ತಮ್ಮ ಹಾಡುಗಳ ಮೂಲಕ ಎಲ್ಲೆಡೆ ವ್ಯಾಪಕವಾದ ಜನಜಾಗೃತಿಯ ಮೂಲಕ ದೇಶಭಕ್ತಿ ಮೂಡಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಧುಮಕುವಂತೆ ಮಾಡಿದ್ದಾರೆ. ಮುಂದೆ ಅದು ಸಾಗರೋಪಾದಿಯಲ್ಲಿ ಹೋರಾಟ ಮಾಡುವಂತೆ ಜನಪದರು ಪ್ರೇರಣೆ ನೀಡುವ ಮೂಲಕ ದೇಶದ ಸ್ವಾತಂತ್ರ್ಯಕ್ಕೆ ಜನಪದರು ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅಭಿಮತ ವ್ಯಕ್ತಪಡಿಸಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಮದ ನಗರದ ಜಗತ್ ಪ್ರದೇಶದಲ್ಲಿರುವ ‘ಬಸವೇಶ್ವರ ಕಲ್ಯಾಣ ಮಂಟಪ’ದಲ್ಲಿ ಭಾನುವಾರ ಏರ್ಪಡಿಲಾಗಿದ್ದ ‘ವಿಶ್ವ ಜಾನಪದ ದಿನಾಚರಣೆ’ಯ ನಿಮಿತ್ಯ ವಿಶೇಷ ಉಪನ್ಯಾಸ, ಜಾನಪದ ಕಲಾವಿದರಿಗೆ ಸತ್ಕಾರ ಮತ್ತು ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಭಂಕೂರ್‍ನ ಕರ್ನಾಟಕ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎಸ್.ಕೂಕಟನೂರ್, ಜಾನಪದ ನಮ್ಮ ದೇಶದ ಮೂಲ ಸಂಸ್ಕøತಿ, ಪರಂಪರೆಯಾಗಿದೆ. ಅದು ನಮ್ಮತನವನ್ನು ಕಾಪಾಡುತ್ತದೆ. ಇದರಲ್ಲಿ ಎಲ್ಲಾ ಮೌಲ್ಯಗಳು, ಬದುಕುವ ಕಲೆ ಅಡಕವಾಗಿದೆ. ಪ್ರತಿಯೊಬ್ಬರು ಜಾನಪದ ಸಂಸ್ಕøತಿ ಮೈಗೂಡಿಸಿಕೊಳ್ಳಬೇಕು. ನಮ್ಮ ದಿನನಿತ್ಯದ ಆಚರಣೆಯಲ್ಲಿ ಜನಪದ ಹಾಸುಹೊಕ್ಕಾಗಿದೆ. ಇದನ್ನು ಮರೆತರೆ ನಮಗೆ ಉಳಿಗಾಲವಿಲ್ಲ. ಇದನ್ನು ಮನಗಂಡ ಕನ್ನಡ ಜಾನಪದ ಪರಿಷತ್ ಜಾನಪದ ಸಂಸ್ಕøತಿಯ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಜಾನಪದ ಕಲಾವಿದರಾದ ಸಿದ್ದಪ್ಪ ಅವಂಟಗಿ, ಶಿವಶರಣಪ್ಪ ಹಾಳೊಳ್ಳಿ, ಭೀಮಣ್ಣ ಕಟ್ಟಿಮನಿ, ಮಲ್ಲಿಕಾರ್ಜುನ ಸೋಮಾ, ಶಾಂತಾಬಾಯಿ ಅಗಸ್ಥ್ಯತೀರ್ಥ, ರಾಜೇಶ್ವರಿ ಕಾಳಗಿ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು. ನಂತರ ಕಲಾ ಪ್ರದರ್ಶನ ಜರುಗಿತು.
ಕಾರ್ಯಕ್ರಮದಲ್ಲಿ ಕ.ಜಾ.ಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಸಮಾಜ ಸೇವಕರಾದ ಸುನೀಲಕುಮಾರ ವಂಟಿ, ಸುಭಾಷ ಪೂಜಾರಿ, ಸದಸ್ಯ ಈರಗಪ್ಪ ಬರ್ಗಲಿ, ಪ್ರಮುಖರಾದ ಸಿದ್ದಣ್ಣ ಗುಡ್ಡಾ, ಪ್ರಶಾಂತ ಗುಡ್ಡಾ, ರಾಜಶೇಖರ ಬಿ.ಮರಡಿ, ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ಸಿದ್ದರಾಮ ತಳವಾರ, ನಾಗಭೂಷಣ ಅಗಸ್ಥ್ಯತೀರ್ಥ, ಚನ್ನವೀರ ಕಾಳಗಿ, ಶರಣಪ್ಪ ಬುಳ್ಳಾ, ಭೀಮಣ್ಣ ಕಟ್ಟಿಮನಿ, ದೇವಣ್ಣ ಗಂಜಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಪರಿಷತ್ ಸದಸ್ಯ ಶಿವಶಂಕರ ಬಿ. ಪ್ರಾರ್ಥಿಸಿದರು. ಅಧ್ಯಕ್ಷ ಎಂ.ಬಿ.ನಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕರಾದ ನರಸಪ್ಪ ಬಿರಾದಾರ ದೇಗಾಂವ ಸ್ವಾಗತಿಸಿದರು. ವೀರೇಶ ಬೋಳಶೆಟ್ಟಿ ನಿರೂಪಿಸಿದರು. ಸಾಹಿತಿ ಧರ್ಮಣ್ಣ ಧನ್ನಿ ವಂದಿಸಿದರು.