ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ನೇತಾರರು ಹೋರಾಡಿ ಹುತಾತ್ಮರಾಗಿದ್ದಾರೆ. 

ಸಂಜೆವಾಣಿ ವಾರ್ತೆ

ಹರಿಹರ.ಆ.೨೧;  ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದ  ಮಹಾನೀಯರನ್ನು  ಸ್ಮರಿಸುತ್ತಾ , ಗಳಿಸಿದ ಸ್ವಾತಂತ್ರ್ಯವನ್ನು ಸದ್ಬಳಕೆ ಮಾಡಿಕೊಳ್ಳುವುದು ಎಲ್ಲಾ ಭಾರತೀಯರ ಕರ್ತವ್ಯವೆಂದು ಸಾರ್ವಜನಿಕ ಆಸ್ಪತ್ರೆಯ  ತುರ್ತು ವೈದಾಧಿಕಾರಿಗಳಾದ  ರಾಘವೇಂದ್ರ ದುಗೋಜಿ ಹೇಳಿದರು.ಮಹಾತ್ಮ ಗಾಂಧಿ ಕ್ರೀಡಾಂಗಣ ಮುಂಭಾಗದಲ್ಲಿ ಗ್ರಾಮ ದೇವತೆ ಎಗ್ ಫ್ರೈಡ್ ರೈಸ್ ಚಿಕನ್ ಕಬಾಬ್ ವ್ಯಾಪಾರಸ್ಥರ ಸಂಘದಿಂದ ಸ್ವಾತಂತ್ರ ಮಹೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸಾವಿರಾರು  ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನದ ಬಗ್ಗೆ ಕಾಳಜಿ ವಹಿಸಲಿಲ್ಲ. ಅವರು ತಮ್ಮ ಜೀವನವನ್ನು ಭಾರತ ಮಾತೃಭೂಮಿಗೆ ಮುಡಿಪಾಗಿಟ್ಟರು. ಇಡೀ ದೇಶ  ಸಂಭ್ರಮದಲ್ಲಿ ತೊಡಗಿದ್ದು, ಈ ನಗು, ಖುಷಿಯ ಹಿಂದೆ ಸಾವಿರಾರು ಸಾವು, ನೋವು, ತ್ಯಾಗ, ಬಲಿದಾನಗಳು ನಡೆದಿವೆ ಎಂಬುದನ್ನು ಪ್ರತಿಯೊಬ್ಬ ಭಾರತೀಯನು ಮರೆಯಬಾರದು. ಎಂದು ಹೇಳಿದರುಸಾಹಿತಿ ಕಾರ್ಮಿಕ ಮುಖಂಡ ಹೆಚ್‍ಕೆ ಕೊಟ್ರಪ್ಪ ಮಾತನಾಡಿ ಸ್ವಾತಂತ್ರ್ಯ ಚಳವಳಿಯಲ್ಲಿದ್ದ ರಾಷ್ಟ್ರಪ್ರೇಮ, ತ್ಯಾಗ, ಶಿಸ್ತು, ದೇಶ ಸೇವೆಯ ಮನೋಭಾವ, ಪ್ರಾಮಾಣಿಕತೆ, ಸಾಮಾಜಿಕ ಕಳಕಳಿ ಮೊದಲಾದ ಮೌಲ್ಯಗಳು ಇಂದು ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಎಲ್ಲ ಭಾರತೀಯರು ಸ್ವಾತಂತ್ರ್ಯ ಚಳವಳಿಯಲ್ಲಿ ಕಂಡು ಬಂದಿದ್ದ ಮೌಲ್ಯಗಳನ್ನು ಸ್ಮರಿಸಿ ಅನುಸರಿಸಬೇಕಿದೆ.ಭಾರತ ಅನೇಕ ಭಿನ್ನತೆಯನ್ನು ಒಳಗೊಂಡಿರುವ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ನೇತಾರರು ಹೋರಾಡಿ ಹುತಾತ್ಮರಾಗಿದ್ದಾರೆ. ಜಾತಿ, ಧರ್ಮ, ಪ್ರಾಂತ್ಯ ಪ್ರೇಮಕ್ಕಿಂತ ರಾಷ್ಟ್ರಪ್ರೇಮ ಹಿರಿದು ಮತ್ತು ಶ್ರೇಷ್ಠವಾದದ್ದು ಎಂದು ತೋರಿಸಿದ್ದಾರೆ. ಹೋರಾಟದಿಂದ ಗಳಿಸಿದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸುವುದು ಎಲ್ಲ ಭಾರತೀಯರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ವೈದ್ಯರದ ರಾಘವೇಂದ್ರ ಅವರು ಕಡು ಬಡತನ ಕುಟುಂಬದಲ್ಲಿ ಜನಿಸಿ ಕಷ್ಟಗಳನ್ನು ಎದುರಿಸಿ ಉತ್ತಮವಾದ ಶಿಕ್ಷಣ ಪಡೆದ ಹೆಸರಾಂತ ವೈದ್ಯರಾಗಿ ಹರಿಹರ ಹರಪನಹಳ್ಳಿ ಸುತ್ತಮುತ್ತಲು ಗ್ರಾಮಗಳಲ್ಲಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಬಡವರ ಡಾಕ್ಟರಂದೆ ಪ್ರಸಿದ್ಧವಾಗಿರುವ ರಾಘವೇಂದ್ರ ರವರ ಸೇವೆ ಇನ್ನೂ ಜನರಿಗೆ ದೊರಕುವಂತಾಗಲಿ ಎಲೆ ಮರೆ ಕಾಯಿಗೆ ಕರ್ತವ್ಯ ನಿರ್ಮಿಸುತ್ತಿರುವ ಕಾರ್ಯ ಶ್ಲಾಘನೀಯ ಆದದ್ದು ಎಂದು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಕೋರಿದರು.ಈ ವೇಳೆ ಪತ್ರಕರ್ತ ಪಂಚಾಕ್ಷರಿ.ರಘು  ಎಮ್.ಅಲ್ತಾಫ್.ಮೈನುಶ್ರೀನಿವಾಸ್.ರಮೇಶ್.ಪ್ರಥಮ್  ಗಾಂಧಿವೇಷ ಅಕ್ಕಮ್ಮ.ಈಶ್ವರ್.ರಾಧಾ. ಸಂಘದ ಪದಾಧಿಕಾರಿಗಳು  ಭಾಗವಹಿಸಿದ್ದರು