ದೇಶದ ಸೈನಿಕರಿಗಾಗಿ ದೀಪ ಬೆಳಗಿಸುವುದು ಹೆಮ್ಮೆಯ ಸಂಗತಿ

ಸುರಪುರ;ನ.15: ಈ ದೀಪಾವಳಿಯಂದು ಒಂದು ದೀಪ ಸೈನಿಕರಿಗಾಗಿ ಬೆಳಗಿಸಿ ಎಂದು ದೇಶದ ಪ್ರಧಾನ ಮಂತ್ರಿಗಳು ಕರೆ ನೀಡಿದ ಹಿನ್ನೆಲೆಯಲ್ಲಿ ನಗರದ ಗಂಜ್ ಪ್ರದೇಶದಲ್ಲಿರುವ ಶ್ರೀ ಮೌನೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿ ದೀಪ ಬೆಳಗಿಸಲಾಯಿತು.

ದೇವಸ್ಥಾನ ಸಮಿತಿ ಅಧ್ಯಕ್ಷ ರಾಜು ಹೆಂದೆ ದೀಪ ಬೆಳಗುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೇಶದ ಪ್ರಧಾನ ಮಂತ್ರಿಗಳು ಕರೆ ನೀಡಿದ ಹಿನ್ನೆಲೆಯಲ್ಲಿ ದೀಪ ಬೆಳಗಿಸಿ ನಮ್ಮ ದೇಶದ ಹೆಮ್ಮೆಯ ಸೈನಿಕರಿಗೆ ಆತ್ಮಬಲ ತುಂಬುವ ಕೆಲಸ ಮಾಡಲು ಹೆಮ್ಮೆ ಎನಿಸುತ್ತಿದೆ ಎಂದು ತಿಳಿಸಿದರು.
ದೇಶದ ಗಡಿಯಲ್ಲಿ ಪ್ರಾಣವನ್ನು ಒತ್ತೆ ಇಟ್ಟು ನಮ್ಮೆಲ್ಲರ ನೆಮ್ಮದಿಗೆ ಕಾರಣೀಕರ್ತರಾದ ಸೇನೆಯ ಜವಾನಗಿಗಾಗಿ ದೀಪ ಬೆಳಗಿಸುವುದು ಮನಸ್ಸಿಗೆ ಅಮಿತಾನಂದ ನೀಡುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ದೇಶದ ಸೈನಿಕರ ಜೈಕಾರ ಹಾಕಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ವಿಶ್ವನಾಥ ಸಿರವಾರ, ಸೂರ್ಯಕಿರಣ ಹೆಂದೆ, ರಾಜಶೇಖರ ದೊರೆ, ಗಂಗಣ್ಣ ಸಜ್ಜನ್, ಚಂದಣ್ಣ ಹಾಲಬಾವಿ, ಶರಣಪ್ಪ ಪಡಶೆಟ್ಟಿ, ಲಕ್ಷ್ಮೀಕಾಂತ ಹೆಂದೆ, ಕೃಷ್ಣಾ ಹೆಂದೆ, ಮನಿಷ ಹೆಂದೆ, ನಾಗೇಂದ್ರ ವಿಶ್ವಕರ್ಮ, ಮಲ್ಲಿಕಾರ್ಜುನ ಅಲ್ಲಿಪುರ ಸೇರಿದಂತೆ ಅನೇಕರು ಇದ್ದರು.