ದೇಶದ ಸುಭಿಕ್ಷೆಗಾಗಿ ಸಜ್ಜನ್ ಕುಟುಂಬದಿಂದ  ಮೃತ್ಯುಂಜಯ ಹೋಮ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು. 29: – ದೇಶದ ಸರ್ವರೂ ಸುಭಿಕ್ಷೆಯಿಂದ ಇರಲು ಹಾಗೂ ಕಾಲಕಾಲಕ್ಕೆ ಮಳೆ, ಬೆಳೆಯ  ಸಮೃದ್ಧಿಗಾಗಿ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಸಜ್ಜನ್ ಕುಟುಂಬದವರಿಂದ ಮೃತ್ಯುಂಜಯ ಹೋಮ ಗುರುವಾರ ಭಕ್ತಿ ಪ್ರಧಾನವಾಗಿ ನೆರವೇರಿತು.
ತಾಲೂಕಿನ ಹುಲಿಕೆರೆ ಗ್ರಾಮದ  ಸಾವಯವ ಕೃಷಿ ತಜ್ಞ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಎಚ್.ವಿ.ಸಜ್ಜನ್, ನಿವೃತ್ತ ಶಿಕ್ಷಕ ಶೇಖರಪ್ಪ, ಶರಣಪ್ಪ ಅವರ ಪೌರೋಹಿತ್ಯದಲ್ಲಿ ನಡೆದ ಮೃತ್ಯುಂಜಯ ಹೋಮದಲ್ಲಿ ಗುರು ಪೂಜೆ, ಮನೆದೇವರ ಪೂಜೆ ಸೇರಿ ಮೃತ್ಯುಂಜಯ ಜಪ, ಗಾಯತ್ರಿ ಮಂತ್ರ ಪಠಿಸಲಾಯಿತು. ನಂತರ ಪೂರ್ಣಾಹುತಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಸೇರಿ ಅನೇಕ ಹಳ್ಳಿಗಳ ಜನರು ಭಾಗವಹಿಸಿ ಹೋಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಕಾನಮಡಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ. ಐಮಡಿ ಶರಣಾರ್ಯ, ರೇಖಾ ಐಮಡಿ ಶರಣಾರ್ಯ,  ಕಾನಾಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಬೊಮ್ಮಯ್ಯ, ಜಿಪಂ ಮಾಜಿ ಸದಸ್ಯ ಕಾನಮಡುಗು ಕೆ.ಎಂ.ಶಶಿಧರ, ನಿವೃತ್ತ ಉಪನ್ಯಾಸಕ ಎಚ್.ವಿ.ವಸಂತ ಸಜ್ಜನ್, ಕರುನಾಡು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಕವಿತಾ ಕೃಷ್ಣಮೂರ್ತಿ, ಹುಲಿಕೆರೆ ಎನ್.ಜಿ.ರಮೇಶ್ ಗೌಡ, ಸಕಲಾಪುರಹಟ್ಟಿ ಚಿನ್ನಾಪ್ರಪ್ಪ, ಸಂಕಲ್ಪ ಸಂಸ್ಥೆಯ ಮುಖ್ಯಸ್ಥ ಕೆ.ಸೋಮಶೇಖರ, ಗ್ರಾಪಂ ಮಾಜಿ ಸದಸ್ಯ ಕೆಂಚಮಲ್ಲನಹಳ್ಳಿ ಕೆ.ಜಿ.ಬಸವರಾಜ, ಪೂಜಾರಹಳ್ಳಿ ತಿಪ್ಪೇಸ್ವಾಮಿ, ಬಸವಸ್ವಾಮಿ,  ತೊರೆಕೋಲಮ್ಮನಹಳ್ಳಿ ರಾಜಣ್ಣ, ಪತ್ರಕರ್ತರಾದ ಬಯಲುತುಂಬರಗುದ್ದಿ ಅಜಯ್, ಹುಡೇಂ ಕೃಷ್ಣಮೂರ್ತಿ, ದಯಾನಂದ ಸಜ್ಜನ್, ಶಿಕ್ಷಕ ಮಹೇಶ್, ಸುಲೋಚನಾ ಸಜ್ಜನ್, ಅರವಿಂದ ಸಜ್ಜನ್, ವಿವೇಕ್ ಸಜ್ಜನ್ ಸೇರಿ ಇತರರು ಇದ್ದರು.