ದೇಶದ ಸರ್ವಾಂಗೀಣ ಅಭಿವೃದ್ದಿಗೆ ಮೋದಿ ಸರ್ಕಾರ ಶ್ರಮಿಸುತ್ತಿದೆ:ಶಿವರಾಜಸಿಂಗ ಚೌಹಾಣ

ಬೀದರ:ಫೆ.23:ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವೂ ಬಡ ಕೂಲಿ ಕಾರ್ಮಿಕರ ಏಳಿಗೆಗಾಗಿಹಗಲಿರುಳು ಶ್ರಮಿಸುತ್ತಿದೆ. ನಮ್ಮ ಸರಕಾರವೂ ಎಲ್ಲಾ ಸಮಾಜ ಬಾಂಧವರಿಗೂ ಸಹಕಾರಿಯಾಗುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಸಬಕಾ ಸಾಥs ಸಬಕಾ ವಿಕಾಸ ಧೈಯವಾಕ್ಯದೊಂದಿಗೆ ದೇಶದ ಸವಾರ್ಂಗೀಣ ಅಭಿವೃದ್ಧಿಗೆ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ ಎಂದು ಮಧ್ಯ ಪ್ರದೇಶದ ಮಾಜಿ ಸಿಎಂ ಶಿವರಾಜಸಿಂಗ ಚೌಹಾಣ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಎಖ್ಖೇಳ್ಳಿ ಗ್ರಾಮದ ಝರಣಪ್ಪ ಹಂದಿಕೇರಾ ಅವರ ಮನೆಗೆ ಭೇಟಿ ನೀಡಿ ಕೇಂದ್ರ ಸರಕಾರದ ವಿವಿಧ ಯೋಜನೆಯಡಿಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಪಿಎಂ ಕಿಸಾನ ಸಮ್ಮಾನ ಯೋಜನೆ, ಉಜ್ವಲ ಯೋಜನೆ, ಜಲ ಜೀವನ ಯೋಜನೆ, ಮುದ್ರಾ ಯೋಜನೆ ಸೇರಿದಂತೆ ವಿವಿಧ ಯೋಜನೆಯ ಸದುಪಯೋಗವಾಗುತ್ತಿದೇ ಎಂದು ಸ್ಥಳದಲ್ಲಿದ್ದ ಹತ್ತಾರು ಮಹಿಳೆಯರೊಂದಿಗೆ ಚರ್ಚಿಸಿದರು. ಕೇಂದ್ರ ಸರಕಾರದ ಯಾವುದೇ ಯೋಜನೆಯನ್ನು ಸದುಪಯೋಗವನ್ನು ಪಡೆದುಕೊಳ್ಳಲು ಸಮಸ್ಯೆಯಾಗುತ್ತಿದೆಯೇ, ಕೇಂದ್ರ ಸರಕಾರದ ವಿವಿಧ ಯೋಜನೆಗಳಿಂದ ತಮಗೆ ಆಗುತ್ತಿರುವ ಉಪಯೋಗ ಹಾಗೂ ಇತರೆ ಮಾಹಿತಿಯನ್ನು ಹಂಚಿಕೊಂಡರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಆರಿಸೋಣ ಎಂದರು.
ಇದೆ ಸಮಯದಲ್ಲಿ ಶಿವರಾಜಸಿಂಗ ಚೌಹಾಣ ಅವರು ಎಲ್ಲಾ ಮಹಿಳೆಯರೊಂದಿಗೆ ಅಕ್ಕ ಮತ್ತು ತಂಗಿಯರೆ ಎಂದು ಕನ್ನಡದಲ್ಲಿ ಕರೆದು ಮೇರಾ ಲಾಡ್ಲಿ ಬಹೇನಾಯೇ ಎಲ್ಲರೂ ಸಂತೋಷದಿಂದ ಇರೋಣ ಎಂದರು.

ಶಾಸಕಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ನಮ್ಮ ಬೀದರ ದಕ್ಷಿಣದಲ್ಲಿ ಜಾತಿ ಮತ ಎನ್ನದೇ ಎಲ್ಲರೂ ಒಂದಾಗಿ ಪ್ರೀತಿ ವಿಶ್ವಾಸದಿಂದ ಬಾಳುವ ಮಾದರಿ ಕ್ಷೇತ್ರವಾಗಿದೆ. ಇಲ್ಲಿ ಜಾತಿ ಮತ ಭೇದವಿಲ್ಲದೇ ನನಗೆ ಆರ್ಶೀವದಿಸಿದ ಕಾರಣದಿಂದ ಇಲ್ಲಿ ಇವರ ಆರ್ಶೀವಾದಿಂದಲ್ಲೇ ನಾನು ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ದೊರೆತಿದೆ ನಮ್ಮ ಕ್ಷೇತ್ರದಲ್ಲಿ ಕೇಂದ್ರ ಸರಕಾರದ ಹಲವು ಯೋಜನೆಗಳು ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸಿದ್ದೇವೆ ಮುಂಬರವು ಲೋಕಸಭಾ ಚುನಾವಣೆಯಲ್ಲಿ ಜನರು ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ತಮ್ಮ ಅಮೂಲ್ಯವಾದ ಮತ ನೀಡಲು ಕಾತುರದಲ್ಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಕಲಬುರಗಿ ಸಂಸದÀರಾದ ಉಮೇಶ ಜಾಧವ, ಮಾಜಿ ಜಿಪಂ ಸದಸ್ಯೆ ಶಕುಂತಲಾ ಬೆಲ್ದಾಳೆ, ರಾಜರೆಡ್ಡಿ ಶಾಬಾದ, ಸುರೇಶ್ ಮಾಶೆಟ್ಟಿ, ಜಗನಾಥ ಪಾಟೀಲ, ಚಂದ್ರಯ್ಯಾ ಸ್ವಾಮಿ, ಬಾಬು ಮಲ್ಕಾಪುರ, ಶಿವಕುಮಾರ ಸ್ವಾಮಿ ಬಂಬಳಗಿ, ಚಂದು ಪಾಟೀಲ್, ಪ್ರಶಾಂತ ಸಿಂಧೋಲ, ಬಸವರಾಜ ಸಿಂದಬಂದಗಿ, ಸಂತೋಷ ಸೋರಳ್ಳಿ, ಜಗನ್ನಾಥ ಮಜಗೆ, ರಾಜಕುಮಾರ ಪಸಾರ, ಜನಾರ್ಧನ್ ರೆಡ್ಡಿ, ಹೇಮಾ ತುಕ್ಕಾರೆಡ್ಡಿ, ರಾಜಕುಮಾರ ಪಂಚಾಳ, ಸಂತೋಷ ರೆಡ್ಡಿ, ಸಂತೋಷ ಹಳ್ಳಿಖೇಡ, ಸಂಗ್ರಾಮ ಬಿರಾದರ, ವೀರಶೆಟ್ಟಿ ಮಡಿವಾಳ, ಓಂಪ್ರಕಾಶ ಮಜಗೆ, ರಾಜಶೇಖರ್ ನೌಬಾದೆ, ಬಸು ಹಿಲಾಲಪುರ, ಆಬೇದಲಿ, ಮೊಹನ, ಖದೀರ್, ಸೇರಿದಂತೆ ನೂರಾರು ಕಾರ್ಯಕರ್ತರು, ಪ್ರಮುಖರು ಹಾಜರಿದ್ದರು.