ದೇಶದ ಸರ್ವತೋಮುಖ ಪ್ರಗತಿಯಲ್ಲಿ ಭಾಗಿಯಾಗಿರುವ ನಾವು ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮದಲ್ಲಿದ್ದೇವೆ: ಕೆ.ವೆಂಕಟೇಶ್

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.16:- ದೇಶದ ಸರ್ವತೋಮುಖ ಪ್ರಗತಿಯಲ್ಲಿ ಭಾಗಿಯಾಗಿರುವ ನಾವೆಲ್ಲರೂ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮದಲ್ಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತಿಳಿಸಿದರು.
ಅವರು ನಗರದ ಡಾ|| ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿಮಾತನಾಡಿದ ಅವರು, ಮಹಾತ್ಮ ಗಾಂಧೀಜಿ, ಸುಭಾಷ ಚಂದ್ರಬೋಸ್, ಜವಹರ್ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತಿ ವೀರ ಸಾವರ್ಕರ್, ಚಂದ್ರಶೇಖ ಆಜಾದ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಮುಂತಾದ ಲಕೋಪಲಕ್ಷ ದೇಶಭಕ್ತರ ತ್ಯಾಗ, ಬಲಿದಾನ, ಸಮರ್ಪಣೆಯ ಫಲವಾಗಿ ದೊರೆತ ಅಮೂಲ್ಯ ಸ್ವಾತಂತ್ರ್ಯಕ್ಕೆ ಈಗ 77 ಸಂವತ್ಸರಗಳ ಸಂಭ್ರಮ.
ಚಾಮರಾಜನಗರ ಜಿಲ್ಲೆಯೂ ಸಹ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೇ ಆದ ಕೊಡುಗೆ ನೀಡಿರುವುದು ಹೆಮ್ಮೆಯ ಸಂಗತಿ, ಜಿಲ್ಲೆಯ ಹಲವಾರು ಅಪ್ರತಿಮ ದೇಶಭಕ್ತರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಜಿಲ್ಲೆಗೆ ಗೌರವ ತಂದಿದ್ದಾರೆ. ಈ ಎಲ್ಲಾದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರಿಗೆಗೌರವಪೂರಕ ನಮನಗಳನ್ನು ಅರ್ಪಿಸೋಣ. ಸ್ವಾತಂತ್ರ್ಯ ಮಹೋತ್ಸವದ ಈ ಸಂದರ್ಭದಲ್ಲಿಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ಜಿಲ್ಲಾಡಳಿತವು ಸನ್ಮಾನಿಸಿದೆ.
ಭಾರತ ನಮಗೆ ಕೇವಲ ಒಂದು “ಭೂಪ್ರದೇಶ” ಮಾತ್ರವಲ್ಲ, ಬದಲಿಗೆಇದು ನಮ್ಮ ಮಾತೃಭೂಮಿ. ನಮ್ಮನ್ನು ಹೊತ್ತತಾಯಿ ಈ ತಾಲದಜೊತೆ ಭಾವನಾತ್ಮಕ ಬೆಸುಗೆಯೊಂದಿಗೆ ಬೆಳೆದ ನಮಗೆ ದೇಶ ಪ್ರೇಮವೆನ್ನುವುದು ಮಾತೃಪ್ರೇಮದರೂಪದಲ್ಲಿ ಹುಟ್ಟಿನಿಂದಲೂ ಬೆಳೆದು ಬಂದ ಸಹಜ ಸ್ವಭಾವ.
ಒಂದು ಕಾಲಕ್ಕೆ ಸಂಪದ್ಭರಿತವಾಗಿದ್ದ ನಮ್ಮದೇಶದಅಪಾರ ಸಂಪತ್ತು, ಸಂಸ್ಕøತಿ ಪರಕೀಯರ ದಾಳಿಯಿಂದ ನಾಶವಾದರೂಅದನ್ನು ಮರಳಿಕಟ್ಟಿದ ಧೀಮಂತ ಸಂಸ್ಕೃತಿ ಭಾರತದ್ದಾಗಿದೆ. ನಾವಿಂದುರಾಷ್ಟ್ರೀಯಏಕತೆ ಮತ್ತು ಭಾವೈಕ್ಯತೆಯನ್ನು ಸಾಧಿಸುವುದರಜೊತೆಜೊತೆಗೆಎಲ್ಲಾ ಕ್ಷೇತ್ರಗಳಲ್ಲೂ ಇರುವ ವಿಪುಲ ಅವಕಾಶಗಳನ್ನು ಬಳಸಿಕೊಂಡು ದೇಶದ ಸವಾರ್‍ಂಗೀಣಅಭಿವೃದ್ಧಿಯತ್ತ ವಿಶೇಷ ಗಮನ ಹರಿಸಬೇಕಾಗಿದೆ.
1997 ನೇ ಸಾಲಿನ ಆಗಸ್ಟ್ 02 ರಂದು ಚಾಮರಾಜನಗರವು ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆಯಾಗಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 5 ತಾಲ್ಲೂಕುಗಳಿರುತ್ತವೆ. ಜಿಲ್ಲೆಯಲ್ಲಿ ಪ್ರಮುಖಧಾರ್ಮಿಕ ಸ್ಥಳಗಳಾದ ಶ್ರೀ ಮಲೈ ಮಹದೇಶ್ವರ ಬೆಟ್ಟ, ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಶ್ರೀ ಬಿಳಿಗಿರಿ ರಂಗನಬೆಟ್ಟ, ಶ್ರೀ ರಂಗನಾಥಸ್ವಾಮಿ ದೇವಾಲಯ ಹಾಗೂ ಶ್ರೀ ಚಾಮರಾಜೇಶ್ವರ ದೇವಾಲಯ, ಶ್ರೀ ಹುಲಗನ ಮುರಡಿ ದೇವಾಲಯಗಳಿರುತ್ತವೆ. ಮತ್ತು ಪ್ರವಾಸಿತಾಣಗಳಾದ ಭರಚುಕ್ಕಿ ಜಲಪಾತ, ಹೊಗೆನಕಲ್ ಜಲಪಾತ, ಬಂಡೀಪುರ ಅಭಯಾರಣ್ಯ, ಕೆ.ಗುಡಿ ಅಭಯಾರಣ್ಯಗಳಿಂದ ಪ್ರಾಕೃತಿಕ ಸೌಂದರ್ಯದಿಂದಕೂಡಿರುತ್ತದ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯ ರಾಜ್ಯದಲ್ಲಿಯೇ ಅತಿ ಹೆಚ್ಚು ಆನೆಗಳ ಸಂತತಿಯನ್ನು ಹೊಂದಿರುವ ಅಭಯಾರಣ್ಯವಾಗಿರುತ್ತದೆ ಹಾಗೂ ಬಿ.ಆರ್.ಟಿ. ಅಭಯಾರಣ್ಯದಲ್ಲಿ ಹುಲಿಗಳ ಸಂತತಿಯು ಹೆಚ್ಚಾಗಿರುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದು ಐದು ಯೋಜನೆಗಳನ್ನು ಜಾರಿಗೆತರಲಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು, ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆತರಲಾಗಿದೆ.
ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಭಿಯಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಕುಟುಂಬದ ಯಜಮಾನಿಗೆ 2000/- ಮಾಸಿಕ ಸಹಾಯಧನ ನೀಡುವಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆತರಲಾಗಿದೆ.
ಗೃಹಲಕ್ಷ್ಮಿಯೋಜನೆ ರಾಜ್ಯಾದ್ಯಂತ 19-07-2023 ರಂದುಜಾರಿಗೆತರಲಾಗಿದ್ದು,ಫಲಾನುಭವಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಗೆ ಪಡಿತರಚೀಟಿ ಹೊಂದಿದ ಫಲಾನುಭವಿಗಳು ತಮ್ಮ ಹತ್ತಿರದ ಪಂಚಾಯಿತಿಗ್ರಾಮ್‍ಒನ್, ಕರ್ನಾಟಕಒನ್ ಕೇಂದ್ರಗಳಲ್ಲಿ ಉಚಿತವಾಗಿಅರ್ಜಿಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಚಾಮರಾಜನಗರಜಿಲ್ಲೆಯಲ್ಲಿ 115 ಗ್ರಾಮಒನ್, 130 ಬಾಪೂಜಿ ಸೇವಾ ಕೇಂದ್ರ, 07 ಕರ್ನಾಟಕಒನ್, 18 ಸ್ಥಳೀಯ ಸಂಸ್ಥೆಗಳ ಕೇಂದ್ರಗಳು ಸೇರಿಒಟ್ಟು 270 ಕೇಂದ್ರಗಳನ್ನುಗೃಹಲಕ್ಷ್ಮಿಅರ್ಜಿ ಸಲ್ಲಿಸಲುಗುರುತಿಸಲಾಗಿದೆ.
ಜಿಲ್ಲಾಕಛೇರಿಯಲ್ಲಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ಕೇಂದ್ರಗಳುಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲು ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.
ಪ್ರತಿ ಮನೆಮನೆಗೆ ತೆರಳಿ ನೋಂದಾಯಿಸಲು ಪ್ರಜಾಪ್ರತಿನಿಧಿಗಳನ್ನು ಸಹ ಆಯ್ಕೆ ಮಾಡಿಅವರಿಗೆ ತರಬೇತಿ ನೀಡಲಾಗಿರುತ್ತದೆ. ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದ ಒಟ್ಟು 606.00 ಹೆಕ್ಟೇರ್ ಪ್ರದೇಶದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಸರ್ಕಾರದಿಂದ ಹಂತ ಹಂತವಾಗಿ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ತಂತ್ರಾಂಶದ ಮೂಲಕ ಪರಿಹಾರ ಮೊತ್ತವನ್ನು ವಿತರಿಸಲಾಗುತ್ತಿದ್ದು, ಈಗಾಗಲೇ 330.00 ಹೆಕ್ಟರ್ ಪ್ರದೇಶಕ್ಕೆ ಒಟ್ಟು 593 ರೈತರಿಗೆ 43.04 ಲಕ್ಷ ರೂಪಾಯಿಗಳಲ್ಲಿ ಪರಿಹಾರ ಮೊತ್ತವನ್ನು ಸಂದಾಯವಾಗಿರುತ್ತದೆ. ಮುಂದುವರೆದು ಉಳಿದ ರೈತರಿಗೆ ಹಂತ ಹಂತವಾಗಿ ಪರಿಹಾರ ಮೊತ್ತ ಬಿಡುಗಡೆಯಾಗುತ್ತದೆ.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೂ, ನಗರಸಭೆ ಮಾಜಿ ಅಧ್ಯಕ್ಷ ಸಿ.ಎಂ. ಆಶಾ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.