ದೇಶದ ಸಮಗ್ರ ಅಭಿವೃದ್ದಿಗೆ ಪ್ರಧಾನಿ ಮೊದಲ ಆದ್ಯತೆ

ಮುದ್ದೇಬಿಹಾಳ:ನ.11: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸಮಗ್ರ ಅಭಿವೃದ್ದಿಗೆ ಮೋದಲ ಆಧ್ಯತೆ ನೀಡುತಿದ್ದಾರೆ. ದೇಶ ಯಾವ ದೃಷ್ಟಿಕೋನದಲ್ಲಿ ಮತ್ತು ಅಭಿವೃದ್ದಿ ಎಂಬ ದಿಕ್ಸುಚಿಯನ್ನು ಯಾವ ರೀತಿಯಲ್ಲಿ ಮುನ್ನೆಡಸಬೇಕು ಎಂಬ ಸ್ಪಷ್ಟ ನೀಲುವು ಹೋಂದಿರುವ ಪ್ರಧಾನಿಯವರು ಭಾರತವನ್ನು ಸಶಕ್ತಗೋಳಿಸುವಲ್ಲಿ ಶ್ರಮೀಸುತಿದ್ದಾರೆ ಎಂದು ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಮಂಗಳವಾರ ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿ ದೇವಸ್ಥಾನದಲ್ಲಿ ನಡೆದ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಕರ್ನಾಟಕ ಮತ್ತು ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು, ಇಂದು ಭಾರತ ಒಬ್ಬ ಉತ್ತಮ ನಾಯಕನ ಮುಂದಾಳತ್ವದಲ್ಲಿ ಮುನ್ನಡೆಯುತ್ತಿರುವದಕ್ಕೆ ಎಲ್ಲರು ಹೆಮ್ಮೆಪಡಬೇಕು. ಅಭಿವೃದ್ದಿ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನ ಹೊಂದಲು ಬೆರೆಯವರಿಂದ ಹೋಂದಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪ್ರತಿ ಹಳ್ಳಿ, ಪಟ್ಟಣಗಳಲ್ಲಿ ಇದ್ದಾರೆ. ಯಾವುದೆ ಒಬ್ಬರಿಂದ ಪಕ್ಷ ಮುನ್ನಡೆಯುವದಿಲ್ಲ ಪ್ರತಿಯೋಬ್ಬ ಕಾರ್ಯಕರ್ತನು ಬಿಜೆಪಿ ಪಕ್ಷದಲ್ಲಿ ನಾಯಕ ಇದ್ದ ಹಾಗೆ ಕಾರ್ಯಕರ್ತರ ಶ್ರಮ ವ್ಯರ್ಥವಾಗದಂತೆ ಬಿಜೆಪಿ ಪಕ್ಷ ಸಂಗಟನೆ ಮಾಡುತ್ತಾ ಮುನ್ನಡೆಯುತ್ತದೆ ಎಂದು ಅವರು ಹೇಳಿದರು.
ಈ ಸಮಯದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹೇಮರೆಡ್ಡಿ ಮೇಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಅಸ್ಕಿ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಾಶಿಬಾಯಿ ರಾಂಪೂರ, ಮಲಕೇಂದ್ರಾಯಗೌಡ ಪಾಟೀಲ, ಮಂಜುನಾಥ ಶೇಟ್ಟಿ, ಮಂಡಲ ಅಧ್ಯಕ್ಷ ಪರಶುರಾಮ ಪವಾರ, ಬಾಬುಲಾಲ ಓಸ್ವಾಲ, ಬಿ.ಪಿ.ಕುಲಕರ್ಣಿ, ಪ್ರಭು ಕಡಿ, ಸಹನಾ ಬಡಿಗೇರ, ಸಂಗಮ್ಮ ದೇವರಹಳ್ಳಿ, ಗೌರಮ್ಮ ಹುನಗುಂದ, ಅಶೋಕ ವನಹಳ್ಳಿ, ಮಂಜುನಾಥ ಚಲವಾದಿ, ಮಂಜುನಾಥ ರತ್ನಾಕರ, ಅಶೋಕ ರಾಠೋಡ, ಪುನೀತ ಹಿಪ್ಪರಗಿ, ಸಂತೋಷ ಬಾದರಬಂಡಿ, ಅನಿಲ ಹಡಪದ ಸೇರಿದಂತೆ ಪಕ್ಷದ ಎಲ್ಲ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.