
ಕಲಬುರಗಿ,ಏ.27:ದೇಶದ ಸಬಲೀಕರಣಕ್ಕೆ ವಿವಿಧ ಕ್ಷೇತ್ರದಲ್ಲಿ ಸಂಶೋಧನೆಗಳು, ಅನ್ವೇಷಣೆಗಳು ಅವಶ್ಯವಾಗಿವೆ. ವಿದ್ಯಾರ್ಥಿಗಳು ಅನ್ವೇಷಣೆ ಮತ್ತು ಸಂಶೋಧನಾ ಕ್ಷೇತ್ರದತ್ತ ತಮ್ಮನ್ನು ತಾವು ತೋಡಗಿಸಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕದ ಚೆಂಬರ್ ಆಫ್ ಕಾಮರ್ಸ್‍ದ ಅಧ್ಯಕ್ಷರಾದ ಶಶಿಕಾಂತ ಬಿ ಪಾಟೀಲ ಅಭಿಪ್ರಾಯ ಪಟ್ಟರು.
ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾಮಂಟಪದಲ್ಲಿ ಶರಣಬಸವ ವಿಶ್ವವಿದ್ಯಾಲಯ ಹಾಗೂ, ನ್ಯೂ ಎಜ್ ಇನ್ನೊವೇಶನ್ ನೆಟವರ್ಕ, ಕರ್ನಾಟಕ ಇನ್ನೊವೇಶನ್ ಆಂಡ್ ಎಕ್ನಾಲೊಜಿ ಸುಸೈಟಿ, ಡಿಪಾರಟ್ಮೆಂಟ್ ಆರ್ಫ, ಬಿಟಿ ಆಂಡ್ ಎಸ್ ಆಂಡ್ ಟಿ, ಗವರ್ನಮೆಂಟ್ ಆಫ್ ಕರ್ನಾಟಕ (k-Tech Innovation Hub, New Age innovation network (NAIN center ), KITS- Karnataka innovation &Technology Society, Dept of IT, BT and S&T, Government of Karnataka ) ಸಹಯೋಗದಲ್ಲಿ ಗುರುವಾರ ನಡೆದ ಕೆ-ಟೆಕ್ ಇನ್ನೊವೇಶನ್ ಹಬ್ ಉದ್ಘಾಟನಾ ಸಮಾರಂಭದ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಅನ್ನ ದಾಸೋಹದ ಜೊತೆಗೆ ಅಕ್ಷರ ದಾಸೋಹದ ಸೇವೆ ಸಲ್ಲಿಸುತ್ತಿರುವ ಶರಣಬಸವೇಶ್ವರ ಸಂಸ್ಥಾನ ಈ ಭಾಗದ ಶ್ರೇಯಸ್ಸಿಗೆ ಶ್ರಮಿಸಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದ ಶ್ರೇಯಸ್ಸಿಗೆ ಚೆಂಬರ್ ಆಫ್ ಕಾಮರ್ಸ್‍ನ ಸೇವೆ ಅಗಣ್ಯ ಎಂದರು.
ಕಲ್ಯಾಣ ಕರ್ನಾಟಕ ಆಫ್ ಕಾಮರ್ಸ್‍ನ ಉಪಾಧ್ಯಕ್ಷರಾದ ರಾವiಕೃಷ್ಣ ವಿ. ಬೋರಲಕರ್ ಮಾತನಾಡಿ, ಕೆ-ಟೆಕ್ ಇನ್ನೊವೇಶನ್ ಹಬ್ ಎಂಬುದು ಶರಣಬಸವ ವಿಶ್ವವಿದ್ಯಾಲಯದಲ್ಲಿನ ಸಂಶೋಧನೆಯ ಮತ್ತು ಅನ್ವೆಷಣೆ ಕ್ಷೇತ್ರದ ಗರಿಯಾಗಿದೆ. ಶರಣಬಸವ ವಿಶ್ವವಿದ್ಯಾಲಯ ಮತ್ತು ಚೆಂಬರ್ ಆಫ್ ಕಾಮರ್ಸ್ ನಡುವೆ (ಎಂಓಯು) ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನೀಲಕುಮಾರ ಜಿ. ಬಿಡವೆ ಸ್ವಾಗತಿಸಿ, ಮಾತನಾಡಿ, ನಮ್ಮ ವಿಶ್ವ ವಿದ್ಯಾಲಯ ಮತ್ತು ಚೆಂಬರ್ ಆಫ್ ಕಾಮರ್ಸ್ ಈ ಭಾಗದ ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿವೆ. ನಮ್ಮ ವಿಶ್ವವಿದ್ಯಾಲಯ ಸುಮಾರು 15 ಪ್ರೋಜಕ್ಟಗಳನ್ನು ಸರ್ಕಾರದಿಂದ ಪಡೆದುಕೊಂಡಿದೆ. ಈ ಕಾರ್ಯ ಶ್ಲಾಘನೀಯವಾದದು, ವಿದ್ಯಾರ್ಥಿಗಳು ಸಂಶೋಧನಾತ್ಮಕ ಅಧ್ಯಯನಗಳನ್ನು ನಡೆಸಬೇಕೆಂದು ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ವಿ. ನಿಷ್ಠಿ ಮಾತನಾಡಿ, ಕೆ-ಟೆಕ್ ಉದ್ಘಾಟನೆಯ ಈ ಕಾರ್ಯಕ್ರಮ ತಂತ್ರಜ್ಞಾನ ಪರಿಣಿತರ ಹಾಗೂ ಉದ್ಯಮ ಪರಿಣಿತರ ಸಂಗಮವಾಗಿದೆ. ಜಗತ್ತಿನಲ್ಲಿ ಜ್ಞಾನ ಮತ್ತು ಆರ್ಥಿಕ ಕ್ಷೇತ್ರ ಮಹತ್ವದ ಸ್ಥಾನ ಪಡೆದುಕೊಂಡಿದೆ. ಶ್ರಮ ಮತ್ತು ಅಧ್ಯಯನ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಕೋಡಬಲ್ಲದು ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳಬೇಕೆಂದರು.
ವಿವಿ ಸಮಕುಲಪತಿ ಡಾ. ವಿ.ಡಿ. ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ. ಬಸವರಾಜ ಮಠಪತಿ, ವಿವಿ ಡೀನ್ ಡಾ. ಲಕ್ಷ್ಮಿ ಪಾಟೀಲ, ಮಾಕಾ, ಹಣಕಾಸು ಅಧಿಕಾರಿ ಪ್ರೊ. ಕಿರಣ ಮಾಕಾ, ಡಾ. ಶಿವಕುಮಾರ ಜವಳಗಿ ಇದ್ದರು.
ಕಲ್ಯಾಣ ಕರ್ನಾಟಕದ ಚೆಂಬರ್ ಆಫ್ ಕಾಮರ್ಸ್‍ನ ಹೊಸದಾಗಿ ಸದಸ್ಯರಾಗಿ ಆಯ್ಕೆಯಾದ ಮಂಜುನಾಥ ಜೇವರ್ಗಿ, ಸಂಗಮೇಶ ಆರ್.ಕಲ್ಯಾಣಿ, ಸಿ.ಎ.ಉತ್ತಮ ಬಜಾಜ್, ಗೀರಿಶ್ ಜಗನ್ನಥ ಅಣಕಲ್, ಮಹಾದೇವ ಎಸ್.ತಾವರಗೇರೆ, ಶರಣಬಸವಪ್ಪ ಎ.ಜಿವಣಗಿ, ಮಹಾದೇವಿ ಖೇಣಿ, ದಿನೇಶ ಅಪ್ಪಾರಾವ ಪಾಟಿಲ್, ರವಿಚಂದ್ರ ಕೆ. ಪಾಟೀಲ್, ಕೇದಾರ್ ಎಸ್.ರಘೊಜಿ, ಜಗದೀಶ ಆರ್.ಕಡಗಂಚಿ, ಸಂದೀಪ ವಿ.ಮಿಶ್ರಾ, ರವಿಶಂಕರ ಎ.ಜಮದಾರ ಖಾನಿ, ನರೆನ್ ಶಿವರಾಜ ಪಾಟೀಲ್, ಸೈಯ್ಯದ್ ನಿಜಾಮುದ್ದಿನ್ ಛೀಷ್ಠಿ, ಶಾಮರಾಯಗೌಡ ಎಸ್.ಪಾಟೀಲ್, ಸಂಪತ್ ವಿ.ಪಾಟೀಲ್, ಶರಣಬಸಪ್ಪಾ ಎಂ.ಪಪ್ಪಾ, ಅಮಿತ್ ಫಾರ್ಮರ್, ಮುಕ್ತಾ ರವಿಕುಮಾರ ಜೆಗರ್‍ಕಲ್, ಚಂದಾನನ್‍ಬಾಲಾ ಶೇಥಿಯಾ ಸನ್ಮಾನಿಸಲಾಯಿತು.
ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದಂತಹ ಪ್ರೊ.ಶಿವಕುಮಾರ ರಾಚೋಟಿ, ಪ್ರೊ.ಶರಣ ಶೆಗೆದಾರ, ಡಾ.ಪಂಕಜ್ ಆರ್.ಜಾಧವ, ಡಾ.ಆಕಾಶ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.