ದೇಶದ ಸಂಸ್ಕøತಿ-ಪರಂಪರೆ ಉಳಿಸಲು ಶ್ರಮಿಸೋಣ : ಸರಡಗಿ

ಕಲಬುರಗಿ:ಸೆ.9: ನಮ್ಮ ದೇಶ ಕೃಷಿ ಪ್ರಧಾನವಾದ ರಾಷ್ಟ್ರವಾಗಿದೆ. ಶ್ರಮ ಸಂಸ್ಕøತಿಯ ಪ್ರತೀಕವಾದ ಒಕ್ಕುಲುತನ, ಪರಂಪರೆಗಳಾದ ಹಬ್ಬಗಳು, ಉತ್ಸವ ಸೇರಿದಂತೆ ಮತ್ತಿತರ ಆಚರಣೆಗಳು ದೇಶದ ಸಂಸ್ಕøತಿ-ಪರಂಪರೆಯ ಸಂಕೇತವಾಗಿವೆ. ವಿದೇಶಿ ಸಂಸ್ಕøತಿಯ ಅನುಕರಣೆ ಮತ್ತು ಆಧುನೀಕರಣದ ಭರಾಟೆಯಿಂದಾಗಿ ಇವುಗಳಿಂದು ಮರೆಯಾಗುತ್ತಿದ್ದು, ಅದನ್ನು ಉಳಿಸಿ, ಬೆಳೆಸಲು ಎಲ್ಲರು ಶ್ರಮಿಸಬೇಕಾಗಿದೆ ಎಂದು ಜ್ಞಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗಮೇಶ್ವರ ಸರಡಗಿ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ಕೆಎಚ್‍ಬಿ ಗ್ರೀನ್ ಪಾರ್ಕನಲ್ಲಿ ಸಮಾಜ ಸೇವಕ ಧರ್ಮರಾಜ ಒಡೆಯರ ಅವರ ಮನೆಯ ಪ್ರಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ‘ಗ್ರಾಮೀಣ ಸೊಗಡು ವಿಶೇಷ ಕಾರ್ಯಕ್ರಮ : ಕೃಷಿ, ಗೃಹ ಸಲಕರಣೆ, ವಸ್ತು ಪ್ರದರ್ಶನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಜಾಪ ಉತ್ತರ ವಲಯ ಅಧ್ಯಕ್ಷ, ನ್ಯಾಯವಾದಿ ಹಣಮಂತರಾಯ ಎಸ್.ಅಟ್ಟೂರ್ ಮಾತನಾಡಿ, ಕೃಷಿ ಸಂಸ್ಕøತಿಯನ್ನು ಬಿಂಬಿಸುವ ಖಣ, ಹಂತಿ, ರಾಶಿ, ಲಕ್ಷ್ಮೀ ಪೂಜೆ, ಪಾಂಡವರ ಪೂಜೆ, ಅಂಬಲಿ ಪೂಜೆ, ಜಾನಪದ ಸಂಸ್ಕøತಿಯ ಕುಟ್ಟುವುದು, ಬೀಸುವುದು, ನೃತ್ಯ, ಕೋಲಾಟ ಸೇರಿದಂತೆ ಮುಂತಾದ ಪದ್ಧತಿಗಳಿಂದು ಯಾಂತ್ರೀಕರಣದಿಂದ ಕಣ್ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೊಮ್ಮೆ ಸಂಸ್ಕøತಿಯನ್ನು ಮರುಕಳಿಸುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಇದರಿಂದ ಗ್ರಾಮೀಣ ಪರಂಪರೆ ಮುಂದಿನ ಪೀಳಿಗೆಗೆ ಅರಿಯಲು ಸಾಧ್ಯವಾಗುತ್ತದೆ ಎಂದು ನುಡಿದರು.
ಕೃಷಿ ಮತ್ತು ಮನೆಯ ಸಲಕರಣೆಗಳನ್ನು ಪ್ರದರ್ಶಿಸಲಾಯಿತು. ನೂರಾರು ಜನರು ಮಕ್ಕಳು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಮಹಾನಂದ ಡಿ.ಒಡೆಯರ್, ಧರ್ಮರಾಜ ಒಡೆಯರ್, ಬಾಬುರಾವ ಗೋವಿನ್, ಎಚ್.ಬಿ.ಪಾಟೀಲ, ಬಾಲಕೃಷ್ಣ ಕುಲಕರ್ಣಿ, ವೀರೇಶ ಬೋಳಶೆಟ್ಟಿ ನರೋಣಾ, ಬಸವರಾಜ ಹೆಳವರ ಯಾಳಗಿ, ಮಲ್ಲಣ್ಣ ಮಲ್ಲೇದ್, ಶಿವಯೋಗಪ್ಪ ಬಿರಾದಾರ, ಮಲ್ಲಿನಾಥ ಮುನ್ನಳ್ಳಿ, ಶ್ರೀದೇವಿ ಎಚ್.ಅಟ್ಟೂರ್, ಮಂಜುಳಾ ಬುಜ್ಜಿ, ಸಂಸ್ಕøತಿ ಬುಜ್ಜಿ, ನಂದಿನಿ ಎಸ್.ಚಿಮ್ಮಾ, ಚಂದ್ರಕಲಾ ಪಾಟೀಲ್, ಲಕ್ಷ್ಮೀ ವಿ.ಬೋಳಶೆಟ್ಟಿ, ಪಲ್ಲವಿ ಮುನ್ನಳ್ಳಿ, ಸಮನ್ವಿತಾ, ಸಮೀಕ್ಷಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.