
ಲಿಂಗಸುಗೂರು,ಏ.೧೪-
ಭಾರತ ದೇಶದಲ್ಲಿ ದಲಿತರ ಮೀಸಲಾತಿ ಹಾಗೂ ಡಾ.ಅಂಬೇಡ್ಕರ್ ರವರು ರಚನೆ ಮಾಡಿದ ಸಂವಿಧಾನ ಅಪಾಯದಲ್ಲಿ ಇದೆ ಎಂದು ಕ್ರಾಂತಿಕಾರಿ, ಹೋರಾಟಗಾರ ಆರ್.ಮಾನಸಯ್ಯ ಆತಂಕದ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಬಸ್ ನಿಲ್ದಾಣದ ಎದಿರು ಕೋಟಿ ಕೋಟಿ ಕಪ್ಪು ಜನರ ಮೊದಲ ಮಾತೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ೧೩೨ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂವಿಧಾನದ ಬದಲು ಮನುಸ್ಮೃತಿ ಇರಬೇಕು ಎನ್ನುವ ಮನಸ್ಥಿತಿಯ ಪಕ್ಷಗಳು ಅಧಿಕಾರದಲ್ಲಿ ಇರುವುದರಿಂದ ದೇಶದಲ್ಲಿ ಸಂವಿಧಾನ ಬದಲಿಸಿ ದಲಿತರಿಗೆ ಅಭಿವೃದ್ಧಿ, ಉದ್ದಾರಕ್ಕೆ ಇರುವ ಮೀಸಲಾತಿ ಕಬಳಿಸಲು ಸಂಚುಗಳು ನಡೆದಿವೆ. ಇದರ ಜೊತೆಗೆ ಸಂವಿಧಾನ ಬದಲಿಸಲು ಈಗಾಗಲೆ ಲಕ್ನೋ ನಲ್ಲಿ ೪೦ ಜನರ ಸಮಿತಿ ತಂಡ ಗುಪ್ತವಾಗಿ ರಚನೆ ಮಾಡಲಾಗಿದೆ ಎಂದು ಬಹಿರಂಗಪಡಿಸಿದರು.
ಸಮಾಜದಲ್ಲಿ ಸಮಾನತೆ ಜಾರಿಯಾಗಲು ರಾಜ್ಯ ಸಮಾಜವಾದ ಬರಬೇಕು ಅದರಂತೆ ಭೂಮಿ ರಾಷ್ಟ್ರಿಕರಣ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯಲಗಟ್ಟಾದ ಗಡಿವಡಿಕೀಶನ ಮಠದ ಗುರುಸ್ವಾಮಿ ತಾತ, ಮುಖಂಡರಾದ ಸಿದ್ದರಾಮಪ್ಪ ಸಂಗೆಪಾಂಗೆ, ಅಮೀರ್ ಅಲಿ, ಲಿಂಗಪ್ಪ ಪರಂಗಿ, ಆರ್.ಹುಚ್ಚರಡ್ಡಿ, ಖಾಲಿದ್ ಚಾವುಸ್, ತಿಪ್ಪರಾಜು ಗೆಜ್ಜಲಗಟ್ಟಾ, ಅಮರಪ್ಪ ಸಾಲಿ, ಸಂಜೀವಪ್ಪ ಹುನಕುಂಟಿ, ನ್ಯಾಯವಾದಿ ಶಿವಲಿಂಗಪ್ಪ, ಪತ್ರಕರ್ತರ ಅಮರಯ್ಯ ಗಂಟಿ ಸೇರಿದಂತೆ ಇದ್ದರು.