ದೇಶದ ಸಂವಿಧಾನಕ್ಕೆ ಬದ್ದರಾಗೋಣ: ಹಾಸಿಂಪೀರ

ವಿಜಯಪುರ,ಜ.29:ದೇಶದ ಹಣೆಬರಹ ಬದಲಾಯಿಸಿದ ಈ ದೇಶದ ಸಂವಿಧಾನಕ್ಕೆ ಬದ್ದರಾಗೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ 75 ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಾವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢ ಮಾಡಬೇಕಿದೆ. ಭಾರತ ಪ್ರಗತಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ಕೆಲವು ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದ ಅಭಿವೃದ್ಧಿಯ ಹೊಂದಿದ ರಾಷ್ಟ್ರವಾಗುವಲ್ಲಿ ಸಂಶಯವಿಲ್ಲ ಎಂದರು

ಕಸಾಪ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ಮಾತನಾಡಿ, ನಮ್ಮ ದೇಶ ಲಿಖಿತ ಸಂವಿಧಾನ ಹೊಂದಿರುವದರಿಂದ ಪ್ರತಿಯೊಬ್ಬ ನಾಗರಿಕರು ಘನತೆ ಗೌರವದಿಂದ ಬದುಕುವ ಹಕ್ಕುಗಳನ್ನು ಸಂವಿಧಾನ ನೀಡಿದೆ ಎಂದರು.

ವಿಶ್ರಾಂತ ಪ್ರಾಧ್ಯಾಪಕ ಹಾಗೂ ಕಸಾಪ ಪದಾಧಿಕಾರಿ ಎಸ್.ಎಲ್. ಇಂಗಳೆಶ್ವರ ಮಾತನಾಡಿ, ಪ್ರತಿಯೊಬ್ಬರು ಮಾನವೀಯ ಹಕ್ಕುಗಳನ್ನು ಪಡೆದಿದ್ದಾರೆ. ಸಂವಿಧಾನವೇ ನಮ್ಮ ಧರ್ಮ ಎಂದು ಅರಿತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಬೇಕೆಂದರು.

ಅನ್ನಪೂರ್ಣ ಬೆಳ್ಳನವರ. ಮಹಮ್ಮದ ಗೌಸ ಹವಾಲ್ದಾg,À ಅರ್ಜುನ ಶಿರೂರ, ರಾಜೇಸಾಬ ಶಿವನಗುತ್ತಿ, ಎಸ್.ಎಸ್. ಕಟ್ಟಿ. ಎ.ಡಿ. ಮುಲ್ಲಾ. ಆಯ್.ಟಿ. ಪಡಗಣ್ಣವರ, ಎ.ಡಿ. ಯಲ್ಲಾಪೂರ, ಮೌಲಾಲಿ ಬಸಂತಪೂರ. ಶಾಂತಾ ವಿಭೂತಿ. ಆರ್ ಬಿ ಬಿರಾದಾರ. ಶಿವಕುಮಾರ ಕುದರಗೊಂಡ. ಮಹಮ್ಮದ ವಾಲೀಕಾರ. ವಿಜಯಲಕ್ಷ್ಮಿ ಹಳಕಟ್ಟಿ. ರುಕ್ಮಿಣಿ ಚವ್ಹಾಣ. ಎಲ್ ಎಲ್ ಚವ್ಹಾಣ. ಯುವರಾಜ ಚೊಳಕೆ. ಎ.ಎಲ್. ಹಳ್ಳೂರ. ಶಶಿಕಲಾ ಭುಯ್ಯಾರ. ಸುನಂದಾ ಕೋರಿ. ಆಶಾಗೌಡತಿ ಬಿರಾದಾರ. ಸುಹಾಸಿನಿ ಹೊಕ್ಕುಂಡಿ. ಡಿ.ಎಚ್. ಕೊಲ್ಹಾರ. ಎಮ್.ಎ. ಬಳಗಾನೂರ. ಕುಶುಭು ಪಾಲ್, ಪ್ರೀತಿ ಪಾಲ್ ಮುಂತಾದವರು ಉಪಸ್ಥಿತರಿದ್ದರು.