ದೇಶದ ವಿಕಾಸ ಮಾಡದ ಮೋದಿ ವಿಕಸಿತ ಭಾರತ ಎಂದರೆನು ಪ್ರಯೋಜನ ?: ಹರಿಪ್ರಸಾದ

ಬೀದರ್:ಮೇ.1: ತನ್ನ ಹತ್ತು ವರ್ಷಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಬಗ್ಗೆ ಮಾತನಾಡದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೃತಕಾಲದ ಬಗ್ಗೆ ಮಾತನಾಡುತ್ತಾರೆ. 2047ರ ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಾರೆ. ದೇಶದ ಯುವಕರಿಗೆ ಉದ್ಯೋಗ ನೀಡಲಿಲ್ಲ. ರೈತರ ಆದಾಯ ದ್ವಿಗುಣ ಮಾಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೇಸ್ ಹಿರಿಯ ಮುಖಂಡರಾದ ಬಿ.ಕೆ.ಹರಿಪ್ರಸಾದ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಜರುಗಿದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರೈತರಿಗೆ, ಹಿಸ್ಸೆದಾರರಿಗೆ, ಯುವಕರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಸೇರಿದಂತೆ ಒಟ್ಟ ಐದು ನ್ಯಾಯ ಪತ್ರಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ಹೊರಡಿಸಿದ್ದೇವೆ. ನಮ್ಮ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 30 ಲಕ್ಷ ಉದ್ಯೋಗ ಭರ್ತಿ ಮಾಡುವ ಭರವಸೆ. ಎಂಎಸ್‍ಪಿ ಜಾರಿಗೆ ತರುವುದು, ಮೀಸಲಾತಿ ಹೆಚ್ಚಿಸುವುದು ಸೇರಿದಂತೆ ಹಲವು ಜನಹಿತ ಕಾರ್ಯಗಳನ್ನು ಜಾರಿಗೆ ತರುವ ಭರವಸೆ ನೀಡಿದ್ದೇವೆ. ಎಂದರು.

  1. ಆದರೆ ಮೋದಿಯವರು ಉತ್ತಮ ಘೋಷಣೆಗಳನ್ನು ಮಾಡಿಕೊಂಡು ಪ್ರಚಾರ ಗಿಟ್ಟಿಸಿಕೊಂಡರೇ ವಿನಃ 10 ವರ್ಷಗಳಲ್ಲಿ ಅಭಿವೃದ್ಧಿ ಮಾಡಲಿಲ್ಲ. 2014 ರಿಂದ ಇದುವರೆಗೂ ಅಭಿವೃದ್ಧಿ ಮಾಡದವರು ಮುಂದೆ ಭಾರತವನ್ನು ಅಮೃತಕಾಲ ಮಾಡುತ್ತೇವೆ. ವಿಕಸಿತ ಭಾರತ ಮಾಡುತ್ತೇವೆ ಎಂದು ಹೇಳುತ್ತಾರೆ ಎಂದು ಮೋದಿಯವರ ಕಾರ್ಯಗಳನ್ನು ಹರಿಪ್ರಸಾದ ಟೀಕಿಸಿದರು.
    ಭಾರತದ ಬಂದರಿನಿಂದ ಹಿಡಿದು ಏರ್‍ಪೆÇೀಟ್ರ್ವರೆಗೆ ನರೇಂದ್ರ ಮೋದಿಯವರು ಎಲ್ಲವನ್ನೂ ಮಾರಾಟ ಮಾಡಿದ್ದನ್ನು ನೋಡಿದರೆ ಮೋದಿಯವರು ಸೇವಕರೋ ಅಥವಾ ಸೇಲ್ಸ್ ಮ್ಯಾನೋ ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರಲ್ಲದೆ ಕಳೆದ 55 ವರ್ಷಗಳಲ್ಲಿ ಕಾಂಗ್ರೇಸ್ ಪಕ್ಷ ಈ ರಾಷ್ಟ್ರಕ್ಕಾಗಿ ಎಲ್ಲವನ್ನೂ ನೀಡಿದೆ. ಆದ್ದರಿಂದ ಸಾಗರ ಖಂಡ್ರೆಗೆ ಬೆಂಬಲಿಸಿ, ಕಾಂಗ್ರೇಸ್ ಕೈ ಬಲಪಡಿಸಿ ಎಂದು ತಿಳಿಸಿದರು.
    ಇದೇ ವೇಳೆ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಸೇರಿದಂತೆ ಮತ್ತಿತರ ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.