ದೇಶದ ರಕ್ಷಣೆ ಯೋಧರ ಕೊಡುಗೆ ಅಪಾರ: ಸಿದ್ದು ಪಾಟೀಲ್

(ಸಂಜೆವಾಣಿ ವಾರ್ತೆ)
ಹುಮನಾಬಾದ :ಜ.9: ದೇಶದ ರಕ್ಷಣೆ ಯಲ್ಲಿ ಯೋಧರ ಕೋಡುಗೆ ಅಪಾರ ಯೋಧರನ್ನು ಗೌರವದಿಂದ ಕಾಣಬೇಕೆಂದು ಬಿಜೆಪಿ ಮುಂಖಡ ಸಿದ್ದು ಪಾಟೀಲ ತಾಲೂಕಿ ಚಂನದನಹಳ್ಳಿ ಗ್ರಾಮದಲ್ಲಿ ಹಮ್ಮಿ ಕೊಂಡಿದ ಯೋಧರ ಸೇವಾ ನಿವೃತ್ತಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತಾನಾಡುತ್ತಾ ನುಡಿದರು. ಭಾರತೀಯ ಸೇನೆಯಲ್ಲಿ ಸುಮಾರು 17 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತಿ ಹೊಂದಿ ಇಂದು ಸ್ವ ಗ್ರಾಮಕ್ಕೆ ಆಗಮಿಸಿದ್ದ ಚಂದನಹಳ್ಳಿ ಗ್ರಾವದ ವೀರಯೋಧ ಅನಿಲ ಬಿರಾದಾರ ಅವರಿಗೆ ಗ್ರಾಮಸ್ಥರು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು ಶ್ಲಾಘನಿಯ ಎಂದರು. ದೇಶ ರಕ್ಷಣೆಗಾಗಿ ಯುವಕರು ಸೇನೆಗೆ ಸೇರುತ್ತಾರೆ. ಮಳೆ ಗಾಳಿ ಸಿತವನ್ನು ಲೆಕ್ಕಿಸದೆ ಭಯೋತ್ಪಾದಕರೊಂದಿಗೆ ಎದೆಗುಂದದೆ ಹೋರಾಡಿ ತಮ್ಮ ಪ್ರಾಣವನ್ನೆ ಪಣಕಿಟ್ಟು ಪ್ರತಿ ಭಾರತೀಯರು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವ ಯೋಧರ ಕರ್ತವ್ಯ ಕ್ಕೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪದ್ಮಾಕರ ಪಾಟೀಲ, ಪ್ರಕಾಶ ಪಾಟೀಲ, ಅಂಕುಶ ಗೋಖಲೆ, ಗ್ರಾ. ಪಂ. ಅಧ್ಯಕ್ಷ ವಿಶ್ವನಾಥ ಕಾಡಗೊಂಡ, ಚಂದ್ರರಾವ ಬಿರಾದರ, ಶಶಿರಾವ ಬಿರಾದರ, ಚಂದ್ರಕಾತ ಮೇತ್ರೆ, ಜ್ಞಾನದೇವ ನಿರಗುಡಿ, ಬಲಭೀಮ ಬಿರಾದಾರ, ವಿರೇಶ ಪಾಟೀಲ, ವಿನಾಯಕ ಹಂದಿಕೇರಾ, ಶ್ರೀನಾಥ ದೇವಣಿ, ನಾಗಭೂಷಣ ಸಂಗಮ್, ಗಿರೀಶ ತುಂಬಾ ಮತ್ತು ಚಂದನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.