ದೇಶದ ರಕ್ಷಣೆಗೆ ಯುವಕರು ಮುಂದಾಗಲಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.04:  ರೈತ ಮತ್ತು ಯೋಧರಿಗೆ ಗೌರವ ಕೊಡುವುದನ್ನು ಈ ದೇಶದ ಜನತೆ ವಿದ್ಯಾರ್ಥಿಗಳು ಅರಿಯಬೇಕು ಈ ದೇಶದ ರಕ್ಷಣೆ ಕೇವಲ ಯೋಧರಿಗೆ ಮಾತ್ರ ಅನ್ವಯಿಸುವುದಿಲ್ಲ ಪ್ರತಿಯೊಬ್ಬರಲ್ಲೂ ಆತ್ಮಸ್ಥೈರ್ಯ ದೇಶಾಭಿಮಾನ ಕೆಚ್ಚೆದೆ ಇರಬೇಕು ನಮ್ಮ ಸುತ್ತಮುತ್ತ ಸುಳಿದಾಡುವ ನಮಗರಿವಿಲ್ಲದಂತೆ ಭಯೋತ್ಪಾದಕ ಕೃತ್ಯ ಎಸಗುವವರನ್ನು ಪತ್ತೆ ಹಚ್ಚಿ ಯಡೆಮುರಿಗಟ್ಟಿ ಈ ದೇಶವನ್ನು ರಕ್ಷಿಸಬೇಕಾಗಿದೆ ಇಂದಿನ ಮಕ್ಕಳು ಬರೀ ಮೊಬೈಲ್ ನಲ್ಲಿ ಚಾಟ್ ಮಾಡದೆ ಈ ದೇಶದ ಸಂಸ್ಕೃತಿ ಪರಂಪರೆಯನ್ನು ಗೌರವಿಸುವ ಸನ್ಮಾರ್ಗದಲ್ಲಿ ನಡೆಯುವ ವಿಚಾರಗಳನ್ನು ಅರಿಯಬೇಕಾಗಿದೆ ಎಂದು ನಿವೃತ್ತ ಸೈನಿಕ ಬಿ ಎನ್ ಪ್ರಹ್ಲಾದ್ ರೆಡ್ಡಿ ತಿಳಿಸಿದರು.
ನಗರದ ಶ್ರೀರಾಮಪುರಂ ಕಾಲೊನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಬಳ್ಳಾರಿ ಇವರು ಏರ್ಪಡಿಸಿದ ಎಪ್ಪತ್ತೈದನೇ ವರ್ಷದ ಅಮೃತ ಮಹೋತ್ಸವದ ಭಾರತಮಾತಾ ಪೂಜನ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು ಮತ್ತೋರ್ವ ಮಾಜಿ ಸೈನಿಕ ಖಾಜಾವಲಿ ಮಾತನಾಡಿ ಈ ದೇಶ ನನ್ನದು ಈ ಭಾಷೆ ನನ್ನದು ಪ್ರತಿಯೊಬ್ಬರಲ್ಲಿ ದೇಶಾಭಿಮಾನ ಇರಬೇಕು ಭಾರತದಂಥ ಪವಿತ್ರ ನೆಲದಲ್ಲಿ ಜನಿಸಿದ ಪ್ರತಿಯೊಬ್ಬರೂ ಭಾಗ್ಯವಂತರು ಈ ನೆಲದ ಋಣ ತೀರಿಸಬೇಕಾದರೆ ಭಾರತ ಮಾತೆಯ ಕೃಪೆಗೆ ಪಾತ್ರರಾಗಲು ಸೈನ್ಯ ಸೇರಬೇಕು ಅನ್ಯಾಯದ ವಿರುದ್ಧ ಹೋರಾಡಬೇಕು ಹಸಿವು ನೀರಡಿಕೆ ಎನ್ನದೆ ದೇಶದ ಉದ್ದಗಲದ ಗಡಿ ಕಾಯುವ ಸೈನಿಕರ ಹಿತ ಕಾಯಬೇಕು ಎಂದರು. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯು ರಮೇಶ್ ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ವೀರಸೇನಾನಿಗಳು ಶ್ರೀಸಾಮಾನ್ಯರು ಕ್ರಾಂತಿಕಾರಿಗಳು ಶಾಂತಿಪ್ರಿಯರು ಹೋರಾಟದ ಫಲವೇ ನಾವಿಂದುಸುಖ ಜೀವನ ನಡೆಸಲು ಸಾಧ್ಯವಾಗಿದೆ ಎಂದರು. ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ನೇಕಾರ ವಿರುಪಾಕ್ಷಪ್ಪ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಆನಂದನಾಯ್ಕ, ಶಿಕ್ಷಕಿಯರಾದ ಹೆಚ್ .ವನಿತ ಸಿ.ರಕುಮಾಬಾಯಿ ಗುತ್ತಲ ರಾಜೇಶ್ವರಿ ಜ್ಯೋತಿ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

Attachments area