ದೇಶದ ಮಹಿಳೆಯರು ಅಂಬೇಡ್ಕರ್‍ಗೆ ಋಣಿಯಾಗಿರಬೇಕು: ಕೃಷ್ಣಮೂರ್ತಿಚಮರಂ

ಗುಂಡ್ಲುಪೇಟೆ, ಜೂ.07:- ದೇಶದ ಮಹಿಳೆಯರು ಅಂಬೇಡ್ಕರ್‍ಗೆ ಋಣಿಯಾಗಿರಬೇಕು ಎಂದು ಚಿಂತಕ ಡಾ.ಕೃಷ್ಣಮೂರ್ತಿಚಮರಂ ತಿಳಿಸಿದರು.
ತಾಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಮಂಗಲ ಗ್ರಾಮದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‍ರವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಜಾತಿ, ಮತ ಬೇಧವಿಲ್ಲದೇ ಅಂಬೇಡ್ಕರ್ ಅವರು ದೇಶದ ಎಲ್ಲರಿಗೂ ಮತದಾನದ ಹಕ್ಕು ನೀಡಿದರು. ಅಲ್ಲದೇ ಮಹಿಳೆಯರಿಗೆ ಅನೇಕ ವಿಶೇಷ ಕಾನೂನುಗಳನ್ನು ರಚಿಸಿ ಮಹಿಳೆಯರ ರಕ್ಷಣೆಗೆ ಮುಂದಾದರು ಎಂದರು.
ಮಹಿಳೆಯರು ಅಂಬೇಡ್ಕರ್‍ರವರನ್ನು ಪ್ರತಿ ದಿನವೂ ಸ್ಮರಿಸಬೇಕು. ಮಹಿಳೆಯರು ಶಿಕ್ಷಣ, ಉದ್ಯೊ ೀಗ ಪಡೆಯಲು ಅವಕಾಶ ಕಲ್ಪಿಸಿದರು. ವಿಧವೆಯಾದ ಬಳಿಕ ಮರು ಮದುವೆಯಾಗಲು ಕಾನೂನು ರೂಪಿಸಿದರು. ಹೆಣ್ಣು ಮಕ್ಕಳಿಗೂ ಕೂಡ ಆಸ್ತಿ ಹಕ್ಕು ಕಲ್ಪಿಸಿದರು ಎಂದು ತಿಳಿಸಿದರು. ಪ್ರತಿ ಮಹಿಳೆಯರು ಅಂಬೇಡ್ಕರ್‍ಗೆ ಋಣಿಯಾಗಿರಬೇಕು. ಅರ್ಹರಿಗೆ ಮತ ಹಾಕಬೇಕು. ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಪ್ರಶ್ನೆ ಮಾಡು ವುದನ್ನು ರೂಢಿಸಿಕೊಳ್ಳಬೇಕು. ಸ್ವತಂತ್ರವಾಗಿಯೋಚನೆ ಮಾಡುವುದನ್ನು ಕಲಿಯಿರಿಎಂದರು.
ಬಂಡೀಪುರ ವಲಯಅರಣ್ಯಾಧಿಕಾರಿ ದೀಪಾ ಕಂಟ್ರ್ಯಾಕ್ಟರ್ ಮಾತನಾಡಿ, 1973 ವಿಶ್ವ ಪರಿಸರ ದಿನ ಆಚರಣೆ ಪ್ರಾರಂಭವಾಯಿತು. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡಬೇಕು. ಎಲ್ಲರ ಮನೆಯಲ್ಲೂ ಪ್ಲಾಸ್ಟಿಕ್ ವಸ್ತುಗಳು ಇರುತ್ತವೆ. ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆ ಮಾಡುತ್ತಾರೆ. ಪ್ಲಾಸ್ಟಿಕ್ ಹಾನಿಕಾರಕ ವಸ್ತುವಾಗಿದೆ. ಸಾವಿರಾರು ವರ್ಷಗಳಾದರೂ ಕೊಳೆಯದ ವಸ್ತು ಪ್ಲಾಸ್ಟಿಕ್. ಮನುಷ್ಯ ದೇಹದಲ್ಲಿಯೂ ಪ್ಲಾಸ್ಟಿಕ್ ಸೇರಿಕೊಂಡಿದೆ. ಆದ್ದರಿಂದ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸಂರಕ್ಷಿಸುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತಿ ಮಲ್ಕುಂಡಿ ಮಹದೇವಸ್ವಾಮಿ ಸೇರಿದಂತೆ ಯುವಕರು, ಗ್ರಾಮಸ್ಥರು ಹಾಜರಿದ್ದರು.