ದೇಶದ ಭವಿಷ್ಯ ಯುವಜನತೆ ಕೈಯಲ್ಲಿದೆ

ಹೊಸಕೋಟೆ, ಆ.೧೭-ದೇಶದ ಮುಂದಿನ ಭವಿಷ್ಯ ಇಂದಿನ ಯುವ ಸಮುದಾಯದ ಕೈಯಲ್ಲಿದ್ದು ಯುವ ಸಮುದಾಯ ಎಚ್ಚೆತ್ತುಕೊಂಡು ದೇಶ ರಕ್ಷಣೆಯ ಪಣ ತೊಡಬೇಕು ಎಂದು ರಾಜ್ಯ ರೆಡ್ಡಿ ಸಂಘದ ನಿರ್ದೇಶಕ ಎಂ.ಎ.ಕೃಷ್ಣಾರೆಡ್ಡಿ ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ಮುತ್ಸಂದ್ರ ಗ್ರಾಮದಲ್ಲಿರುವ ಕೆಎಂಆರ್ ಶಾಯಲ್ಲಿ ನಡೆದ ೭೭ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ದೇಶವು ಸ್ವಾಂತಂತ್ರ್ಯ ಗಳಿಸಿ ೭೭ ವರ್ಷ ಕಳೆದರೂ ಇಂದಿನ ಸಮಾಜದಲ್ಲಿ ಶೋಷಣೆ, ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ.
ಅಲ್ಲದೆ ದೌರ್ಜನ್ಯ ದಬ್ಬಾಳಿಕೆಗಳು ನಿರಂತರವಾಗಿದ್ದು ಇವುಗಳನ್ನು ಬೇರು ಸಮೇತ ಕಿತ್ತು ಹಾಕಿ ಭವ್ಯ ಭಾರತ ನಿರ್ಮಾಣ ಮಾಡುವ ಇಂದಿನ ಯುವ ಸಮುದಾಯದ ಮೇಲಿದೆ. ಆದ್ದರಿಂದ ಇಂದಿನ ಸಮುದಾಯ ಶಾಲಾ ಕಾಲೇಜು ಹಂತದಿಂದಲೆ ದೇಶ ರಕ್ಷಣೆಯ ಪಣ ತೊಡುವುದರ ಮೂಲಕ ಭವ್ಯ ಭಾರತ ನಿರ್ಮಾಣದ ಸಂಕಲ್ಪ ತೊಡಬೇಕಾಗಿದೆ ಎಂದರು.