ದೇಶದ ಭವಿಷ್ಯ ನಿರ್ಮಿಸುವ ಬಜೆಟ್


ನವದೆಹಲಿ,ಫೆ.೧:ಲೋಕಸಭೆಯಲ್ಲಿಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ದೇಶದ ಭವಿಷ್ಯ ನಿರ್ಮಿಸುವ ಬಜೆಟ್ ಎಂದು ಪ್ರಧಾನಿ ನರೇಂದ್ರಮೋದಿ ಬಣ್ಣಿಸಿದ್ದಾರೆ.
ಈ ಬಜೆಟ್ ಬಡವರು,ಮಧ್ಯಮ ವರ್ಗದವರಿಗೆ ನೆರವು ನೀಡುವ ಬಜೆಟ್ ಆಗಿದೆ. ನಿರ್ಮಲಾ ಸೀತಾರಾಮನ್ ಹಾಗೂ ಅವರ ತಂಡಕ್ಕೆ ಧನ್ಯವಾದ ಎಂದು ಮೋದಿ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಜೆಟ್ ವಿಶ್ವಾಸ ನಂಬಿಕೆಯನ್ನು ತೋರುವ ಬಜೆಟ್ ಆಗಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರಮೋದಿ ಅವರು ಬಜೆಟ್‌ನಲ್ಲಿ ೧ ಲಕ್ಷ ಕೋಟಿ ಮನೆಗಳಿಗೆ ಉಚಿತ ವಿದ್ಯುತ್‌ಮತ್ತು ಆಯುಷ್ಮಾನ್‌ಭವ ಯೋಜನೆಯನ್ನು ವಿಸ್ತರಿಸುವ ಮಹತ್ವದ ನಿರ್ಣಯಗಳಿವೆ ಎಂದಿದ್ದಾರೆ.
ಈ ಬಜೆಟ್ ಬಡವರು, ಮಹಿಳೆಯರ ಸಬಲೀಕರಣದ ಬಜೆಟ್ ಆಗಿದ್ದು, ವಿಕಸಿತ ಭಾರತ ನಿರ್ಮಾಣದ ಬುನಾದಿ ಬಜೆಟ್ ಎಂದು ಹೇಳಿದ್ದಾರೆ.
ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ೧ ಲಕ್ಷ ಕೋಟಿ ಒದಗಿಸುವ ಜತೆಗೆ ಸ್ಟಾರ್ಟಪ್‌ಗಳಿಗೆ ತೆರಿಗೆ ವಿನಾಯಿತಿಯನ್ನು ಈ ಬಜೆಟ್‌ನಲ್ಲಿ ನೀಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.