ದೇಶದ ಭದ್ರತೆಗೆ ಸಂವಿಧಾನ ಓದು ಅವಶ್ಯಕ:ಕಬೀರಸಿದ್ದ ಶ್ರೀ

ಯಡ್ರಾಮಿ:ಏ.15:ದೇಶದ ಭದ್ರತೆಗೆ ಸಂವಿಧಾನ ಓದು ಅವಶ್ಯಕತೆ ಇದೆ ಪ್ರತಿಯೊಬ್ಬರು ಸಂವಿಧಾನ ಓದುವದರ ಜೋತೆಗೆ ಶಿಕ್ಷಣವಂತರಾಗಬೇಕು ಎಂದು ಪೂಜ್ಯ ಕಬೀರಸಿದ್ದ ಮಹಾಸ್ವಾಮಿಗಳು ಚಿಗರಹಳ್ಳಿ ಮಠ ವ್ಯಕ್ತಪಡಿಸಿದರು.

ಒಂದು ದೇಶ ಸುಭದ್ರವಾಗಿ ನಡೆಯಬೇಕು ಅಂದ್ರೆ ಸಂವಿಧಾನ ಅವಶ್ಯಕ ಅಂತಹ ಸಂವಿಧಾನ ಪ್ರತಿಯೊಬ್ಬರು ಓದಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಳ್ಳಿ ಗ್ರಾಮದಲ್ಲಿ ಡಾ.ಬಾಬಾ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಡಾ.ಬಾಬಾ ಸಾಹೇಬ್ರು ಜಯಂತಿ ಮಾಡಬೇಕು ಆವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು.ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದು ಹೇಳಿದರು.

ಡಾ.ದಸ್ತಗಿರ ಮುಲ್ಲಾ ಅವರು ಮಾತನಾಡಿ ಪ್ರತಿಯೊಬ್ಬರು ಮೌಡ್ಯವನ್ನು ಬಿಟ್ಟು ಶಿಕ್ಷಣವಂತರಾಗಬೇಕು ಎಂದು ಮಹಿಳೆಯರಿಗೆ ಕರೆ ನೀಡಿದರು.

ಮಹಿಳೆಯರು ತಮ್ಮ ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಿದಾಗ ಮಾತ್ರ ಉತ್ತಮ ಸಾಮಾಜ ಹಾಗೂ ದೇಶ ಕಟ್ಟಲು ಸಾಧ್ಯವಾಗುವುದು ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೋಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಶಾಂತಪ್ಪ ಕುಡಲಗಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಮಾತನಾಡಿ.ಸಂವಿಧಾನದಲ್ಲಿ ದೇಶ ಆಳುವಂತಹ ಶಕ್ತಿ ಅಡಗಿದೆ ಪ್ರತಿಯೊಬ್ಬರು ಸಂವಿಧಾನ ಓದುವದರ ಜೋತೆಗೆ ಇತರರಿಗೆ ತಿಳಿಸಬೇಕು.

ವಿಶ್ವದ ಶ್ರೇಷ್ಠವಾದ ಸಂವಿಧಾನ ಭಾರತದ ಸಂವಿಧಾನ ಪ್ರತಿಯೊಬ್ಬರು ಗೌರವಿಸುವ ನೀಡಬೇಕು ಅದರಲ್ಲಿ ಅಡಗಿರುವ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಲ್ಲನಗೌಡ ಮಾಲಿಪಾಟೀಲ ಕಳಗೇರಿ,ಅರವಿಂದಗೌಡ ಪೆÇಲೀಸ್ ಪಾಟೀಲ, ದಯಾನಂದ ಹಿರೇಮಠ,ಹಯ್ಯಾಳಪ್ಪ ಗಂಗಾಕರ್, ಗೀರಿಮಲ್ಲಪ್ಪಗೌಡ ಮಾಲಿಪಾಟೀಲ, ಕಿರಣ್ ರಾಠೋಡ,ಸೀತಾರಾಮ್ ಚವ್ಹಾಣ, ಸಂತೋಷ ಯಾದಗಿರಿ,ಕಾದರಬೀ ರಾಜೇಸಾಬ್ ಗುಡಮನಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮಳ್ಳಿ,ಸುಜಾತಾ ವಾಲಿಕಾರ ಉಪಾಧ್ಯಕ್ಷರು, ಅಮರೇಶ ಸಾಹು,ಈರಣ್ಣ ಕುಂಭಾರ, ರಾಮಣ್ಣ ಪುಜಾರಿ,ನಿಂಗಣ್ಣಮಳ್ಳಿ,ಲಕ್ಷ್ಮೀಕಾಂತ ಹಳ್ಳದಕರ್ ನಿರೂಪಿಸಿದರು ಇತರರು ಉಪಸ್ಥಿತರಿದ್ದರು.