ದೇಶದ ಪ್ರಭುದ್ದತೆಗಾಗಿ ಸೃಜನ ಶೀಲ ವಿಧ್ಯಾರ್ಥಿಗಳಾಗುವಂತೆ ಕರೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜೂ.11: ದೇಶದ ಪ್ರಭುದ್ದತೆಗಾಗಿ ವಿಧ್ಯಾರ್ಥಿಗಳು ಸೃಜನ ಶೀಲ ವ್ಯಕ್ತಿಯಾಗಿ ,  ಪೋಷಕರ ಆಶಯಕ್ಕೆ ದಕ್ಕೆ ಆಗದಂತೆ ಅಭ್ಯಾಸಿಸಿ ಸಾಧನೆ ಮಾಡಿ ಎಂದು  ಜನಪ್ರೀಯ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ವಿದ್ಯಾರ್ಥಿಗಳಿಗೆ ಹೇಳಿದರು.
ಪಟ್ಟಣದ  ಹಡಗಲಿ ರಸ್ತೆಯಲ್ಲಿ ಇರುವ   ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನವತಿಯಿಂದ 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿ.ಯು ಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ  ಮಾತನಾಡಿದರು.
ಪಠ್ಯ ಪುಸ್ತಕಗಳ ಜೊತೆಗೆ ಪಠ್ಯೇತರ ಚಟುವಟಿಕೆ, ಸಾಮಾನ್ಯಜ್ಞಾನವನ್ನು ಹೊಂದಬೇಕು, ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ದಿನಪತ್ರಿಕೆಗಳನ್ನು ಪ್ರತಿ ದಿನ ಓಧಿ, ಉತ್ತಮ ಅಭಿರುಚಿ ರೂಡಿಸಿಕೊಳ್ಳಿ ಎಂದ ಅವರು ಎಲ್ಲರೂ ಇಂಜಿನಿಯರ್ ಹಾಗೂ ಮೆಡಿಕಲ್ ಗಳನ್ನೆ ಓದಬೇಕು ಎಂಬ ಗುರಿ ಇಡಬೇಡಿ, ಇತರ ಪದವಿ ಗಳನ್ನು ಪಡೆದು ಕೆಎಎಸ್, ಐಎಎಸ್ ಗಳನ್ನು ಪಾಸ್ ಮಾಡಿ ಸಾಧನೆ ಮಾಡಬಹುದು ಎಂದರು.
ಸಂಸ್ಕಾರ ಅಳವಡಿಸಿಕೊಂಡರೆ ಜೀವನ ಉತ್ತಮವಾಗಿ ರೂಪಗೊಳ್ಳುತ್ತದೆ , ತಂದೆ, ತಾಯಿ ಗುರುಗಳಿಗೆ ಗೌರವ ನೀಡಬೇಕು, ಒಟ್ಟಿನಲ್ಲಿ ದೇವರನ್ನು ಪೋಷಕರಲ್ಲಿ ಕಾಣಬೇಕು ಎಂದರು.
ಕಳೆದ ಐದು ವರ್ಷಗಳ ಹಿಂದೆ ಎಂ.ಪಿ.ರವೀಂದ್ರ ಪ್ರತಿಷ್ಟಾನ ಸ್ಥಾಪಿಸಿ ಅದರ ಮೂಲಕ ಪ್ರತಿಭಾ ಪುರಸ್ಕಾರ,ಸಂಕ್ರಾಂತಿ ಸಂಭ್ರಮ, ಸಂಸ್ಕೃತಿ ಪರಿಚಯ ಮುಂತಾದ ಸಾಹಿತ್ಯ, ಸಾಂಸ್ಕೃತಿಕ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ ಎಂದು ಅವರು ಹೇಳಿದರು.
ನಾನು ಜೀವಂತ ಇರುವವರೆಗೂ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತೇನೆ ಎಂದು ಶಾಸಕರು ಹೇಳಿದರು.
ಸಾಹಿತಿ ಇಸ್ಮಾಯಿಲ್ ಎಲಿಗಾರ ಮಾತನಾಡಿ ಯಶಸ್ವು ಸುಮ್ಮನೆ ಬರುವುದಿಲ್ಲ, ಅದಕ್ಕೊಂದು ಸಾಧನೆ ಇರುತ್ತದೆ, ಸಂವಿಧಾನ ನಿಮ್ಮ ಧರ್ಮ ಗ್ರಂಥವಾಗಲಿ ಎಂದ ಅವರು ಮಕ್ಕಳು ಎಲ್ಲಿಯವರೆಗೂ ಓದುತ್ತಾರೊ ಅಲ್ಲಿಯವರೆಗೂ ಓಧಿಸಿ ಎಂದು ಪೋಷಕರಿಗೆ ತಿಳಿಸಿದರು.ತಿಮ್ಮಣ್ಣ ಮತ್ತು ಸಂಗಡಿಗರಿಂದ ವಚನ ಗಾಯನ ಜರುಗಿತು. ಅಂದಾಜು 300 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರಾದ  ಎಂ.ವಿ.ಅಂಜಿನಪ್ಪ, ಪುರಸಭಾ ಸದಸ್ಯರುಗಳಾದ ಲಾಟಿದಾದಾಪೀರ, ಉದ್ದಾರ ಗಣೇಶ,ಮಹಿಳಾ ಕಾಂಗ್ರೆಸ್ , ಗುಂಡಗತ್ತಿ ನೇತ್ರಾವತಿ, ಕವಿತಾ ಸುರೇಶ,ಉಮಾ, ಉದಯಶಂಕರ, ಮತ್ತೂರು ಬಸವರಾಜ, ಎಲ್. ಮಂಜ್ಯಾನಾಯ್ಕ , ಶಿವರಾಜ, ಸಾಸ್ವಿಹಳ್ಳಿ ನಾಗರಾಜ,  ಇತರರು ಹಾಜರಿದ್ದರು