ದೇಶದ ಪ್ರಧಾನಿಗೆ ಕನ್ನಡ ಪತ್ರ

ಕೊಟ್ಟೂರು ನ 02 : ಮಾನ್ಯ ಪ್ರಧಾನ ಮಂತ್ರಿಗಳೆ , ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾ
ನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ .
1411 ಇಸ್ವಿಯಲ್ಲಿ ವಿಜಯನಗರದ ಪ್ರೌಢದೇವರಾಯನ ಮಂತ್ರಿ ಲಕ್ಷ್ಮೀಧರಮಾತ್ಯನ ಶಾಸನದಲ್ಲಿ ಲಕ್ಷ್ಮೀಧರಮಾತ್ಯನ ತಾಯಿ ಹಾಲನ್ನು ಕುಡಿಸುತ್ತ ಅವನಿಗೆ ಕಿವಿಯಲ್ಲಿ ಹೇಳಿದ ಮಾತುಗಳಿವು:
‘ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯಗಳನ್ನು ನಿರ್ಮಿಸು, ಬಂಧನಕ್ಕೆ ಸಿಕ್ಕ ಅನಾಥರನ್ನು ಬಿಡಿಸು, ಸ್ನೇಹಿತರಿಗೆ ಸಹಾಯಕನಾಗು, ನಂಬಿದವರಿಗೆ ಆಶ್ರಯದಾತನಾಗು, ಸತ್ಪುಷರನ್ನು ರಕ್ಷಿಸು.’
ಎನ್ನುವ ಕನ್ನಡದ ಪ್ರಮುಖ ಶಾಸನವನ್ನು ಉಲ್ಲೇಖಿಸಿ ಕೊಟ್ಟೂರಿನ ನಮ್ಮ ಕೆರೆ ನಮ್ಮ ಹಕ್ಕು ವಿನ ಅಂಚೆ ಕೊಟ್ರೇಶ್ ರವರು ದೇಶದ ಪ್ರಧಾನ ಮಂತ್ರಿ ಗಳಿಗೆ ಕನ್ನಡದಲ್ಲಿ ಪತ್ರ ಬರೆದು ತಮ್ಮ 65 ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ ,
ಒಟ್ಟು ನಾಲ್ಕು ಪತ್ರಗಳಲ್ಲಿ ಈ ರಾಜ್ಯದ ಸ್ಥಿತಿ ಗತಿ ಗಳನ್ನು ಕುರಿತು ಹಾಗೂ ಪ್ರಕೃತಿ ವಿಕೋಪದಿಂದ ಭಾರಿ ಮಳೆಯಾಗಿ ಆ ಮಳೆಯಿಂದ ನೂರಾರು
ಟಿ ಎಂ ಸಿ ಮಳೆನೀರು ಸಮುದ್ರದ ಪಾಲಾಯುತು ,
ನೆರೆ ಹಾವಳಿ ಯಿಂದ ಲಕ್ಷಾಂತರ ಜನರು ಬೀದಿ ಪಾಲಾದರು , ಹಲವಾರು ನೀರು ಪಾಲಾದರು , ಪಶು ಪಕ್ಷಿ ಪ್ರಾಣಿಗಳು ಜೀವ ಬಿಟ್ಟವು , ನೆಲೆಸುವ ಮನೆಗಳು ಮಣ್ಣು ಪಾಲಾದವು , ಮಕ್ಕಳು ಮುದುಕರು ಬಾಣಂತಿಯರು ಪಡಬಾರದ ಕಷ್ಟ ಪಟ್ಟರು , ಇದಲ್ಲಕ್ಕೂ ಪ್ರಕೃತಿ ಒಂದೇ ಕಾರಣವಲ್ಲ , ಇಲ್ಲಿ ಮನುಷ್ಯನ ಸ್ವಾರ್ಥ ತಪ್ಪುಗಳನ್ನು ಮಾಡಿದೆ ,
ನದಿ ಹರಿಯುವಿಕೆ ಪ್ರಕೃತಿ ಸಹಜವಾಗಿದೆ , ಆದರೆ ಎಲ್ಲಲ್ಲಿ ನದಿ ಪಾತ್ರವನ್ನು ಯಾವಾಗ ಮನುಷ್ಯ ಆಕ್ರಮಣ ಮಾಡಿರುವನೋ ಅಲ್ಲಲ್ಲಿ ನದಿ ತನ್ನ ಪ್ರಳಯ ರುದ್ರ ನರ್ತನವನ್ನು ತೋರಿಸುತ್ತದೆ , ಕಾರಣ ನದಿಯ ಹರಿವನ್ನು ಮನುಷ್ಯ ಕಸಿದುಕೊಂಡು ಅಲ್ಲಿ ತನ್ನ ಹೊಲ ಮನೆ ಮಾಡಿಕೊಂಡು ತನ್ನ ಶ್ರೀಮಂತಿಕೆಯನ್ನು ತೋರಿಸಿರುತ್ತಾನೆ , ಬೇಸಿಗೆಯಲ್ಲಿ ನದಿಗಳಿಗೆ ನೇರವಾಗಿ ಪಂಪ್‌ ಸೆಟ್ ಗಳಿಂದ ನೀರನ್ನು ಅಕ್ರಮವಾಗಿ ಹರಿಸಿಕೊಂಡು ಬಿತ್ತನೆ ಮಾಡುತ್ತಾನೆ ,
ಏಕಾಏಕಿ ಮಳೆ ಬಂದಾಗ ನೆರೆ ಹಾವಳಿಯಿಂದ ನರಳುತ್ತಾನೆ , ಈ ರಾಜ್ಯದಲ್ಲಿ ನೆರೆ ಹಾವಳಿಗೆ ಒಳಗಾಗಿರುವವರಿಗೆ ಪ್ರತಿ ವರ್ಷ ನೆರೆ ಪರಿಹಾರ ನೀಡಲಾಗುತ್ತದೆ , ಅದೂ ಕೂಡ ಸರಿಯಾದ ರೀತಿಯಲ್ಲಿ ನೊಂದವರಿಗೆ ಮುಟ್ಟುವುದಿಲ್ಲ , ಅಲ್ಲಿ ದಳ್ಳಾಳಿಗಳ , ಭ್ರಷ್ಟ ಅಧಿಕಾರಿಗಳ , ದುಷ್ಟ ಜನಪ್ರತಿನಿಗಳ ನಡುವೆ ಸೋರಿ ಹೋಗುತ್ತದೆ , ನೆರೆ ಸಂತ್ರಸ್ತರಿಗೆ ದಾನಿಗಳ ನೆರವು ಕೋಟಿಗಟ್ಟಲೆ ಬಂದು ಆ ಹಣದಿಂದ ಪುನರ್ವಸತಿ ಗೃಹಗಳು ದಳ್ಳಾಳಿ ಗಳ ಕೈಗೆ ಸಿಕ್ಕು ಜನ ವಾಸ ಮಾಡಲು ಯೋಗ್ಯವಾಗಿಲ್ಲ ,
ಸರ್ಕಾರ ಯೋಜನೆಯನ್ನು ಜಾರಿಗೆ ತಂದರೆ ಸಾಲದು , ಅದು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬರಬೇಕು , ಈ ನಿಟ್ಟಿನಲ್ಲಿ ಜನ ಪ್ರತಿನಿಧಿಗಳು , ಅಧಿಕಾರಿಗಳು , ತೀವ್ರ ಪ್ರಯತ್ನಗಳು ಹಾಗೂ ಪ್ರಾಮಾಣಿಕತೆ ತುಂಬಾ ಮುಖ್ಯ ಎಂದು ಅಂಚೆ ಕೊಟ್ರೇಶ್ ಪತ್ರದಲ್ಲಿ ಬರೆದಿದ್ದಾರೆ ,
ಕೆರೆ ಹಳ್ಳ ಕೊಳ್ಳ ತೊರೆಗಳನ್ನು ಸ್ವಚ್ಛ ಮಾಡಬೇಕು , ಪ್ರತಿ ಸಣ್ಣ ಹಳ್ಳಗಳನ್ನು ಕೆರೆಗಳನ್ನು ಗುರುತಿಸಿ ಅದನ್ನು ಪುನರುಜ್ಜೀವನ ಗೊಳಿಸಿ ಅದರ ಇಬ್ಬಗೆಯಲ್ಲಿ ಸಾಕಷ್ಟು ಜಾಗ ಬಿಟ್ಟು ಗಿಡಗಳನ್ನು ನೆಡಬೇಕು , ಹಳ್ಳಗಳನ್ನು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಉಳುಮೆ ಮಾಡುವ ಅಕ್ರಮ ಜನರನ್ನು ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕು , ಹಾಗೂ ನದಿ ದಂಡೆಯ ಎರೆಡೂ ಕಡೆ ಕಾನೂನಿನ ಪ್ರಕಾರ ಬೇಲಿ ಹಾಕಬೇಕು , ಯಾರೂ ಅಕ್ರಮ ಒಳ ನುಸುಳಿಕೊಂಡು ಬಾರದ ರೀತಿ ಕಾನೂನು ರೂಪಿಸಬೇಕು , ಇದೆಲ್ಲಾ ಮೀರಿ ಬಂದಲ್ಲಿ ಅವರನ್ನು ನೆರೆ ಸಂತ್ರಸ್ತರಿಂದ ದೂರ ಇಡಬೇಕು , ಇಲ್ಲಿ ತುಂಬಾ ಕೆಳಮಟ್ಟದ ಅಧಿಕಾರಿಗಳು ನಾಗರೀಕರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು , ಈ ದೇಶ ನಮ್ಮದು ರಾಜ್ಯದ ನಮ್ಮದು , ಇಲ್ಲಿನ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳು ನಮಗೊಂದೇ ಅಲ್ಲ ಮುಂದಿನ ಸಾವಿರಾರು ಪೀಳಿಗೆಯ ಹಕ್ಕು ಎಂದು ಅಂಚೆ ಕೊಟ್ರೇಶ್ ಪ್ರಧಾನಮಂತ್ರಿ ಗಳಿಗೆ ಕನ್ನಡದಲ್ಲಿ ಪತ್ರವನ್ನು ಬರೆದಿದ್ದಾರೆ ,