ದೇಶದ ಪ್ರಥಮ ಪ್ರಜೆಯಾದ ಬುಡಕಟ್ಟು ಮಹಿಳೆ

ಆನೇಕಲ್,ಜು೨೨:ಭಾರತ ದೇಶದ ರಾಷ್ಠಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಯಾದ ದ್ರೌಪದಿ ಮುರ್ಮು ರವರು ಅತಿ ಹೆಚ್ಚು ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ. ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ಹೊರಹೊಮ್ಮಿದ್ದಾರೆ
ಇನ್ನು ದ್ರೌಪದಿ ಮುರ್ಮು ರವರು ಭಾರತ ದೇಶದ ೧೫ ನೇ ರಾಷ್ಠಪತಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ವೃತ್ತದಲ್ಲಿ ಅತ್ತಿಬೆಲೆ ಬಿಜೆಪಿ ಮಂಡಲ ವತಿಯಿಂದ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ವಿಜಯೋತ್ಸವ ವನ್ನು ಆಚರಿಸಲಾಯಿತು.
ಕಾರ್ಯಕ್ರಮ ನೇತೃತ್ವವನ್ನು ಅತ್ತಿಬೆಲೆ ಬಿಜೆಪಿ ಮಂಡಲದ ಅಧ್ಯಕ್ಷ ಬನಹಳ್ಳಿ ಬಿಬಿಐ ರಾಜು (ಮುನಿರೆಡ್ಡಿ), ಪ್ರಧಾನ ಕಾರ್ಯದರ್ಶಿ ಮುರಳಿ ಮೋಹನ್ ರೆಡ್ಡಿ, ಅತ್ತಿಬೆಲೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ಎಂ. ಆರ್. ಮಂಜುನಾಥ್ ರೆಡ್ಡಿ ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಅತ್ತಿಬೆಲೆ ಬಸವರಾಜು, ನಾರಾಯಣಸ್ವಾಮಿ, ಬಿದರಗುಪ್ಪೆ ರಾಜೇಶ್, ಮುನಿರಾಜು, ಕೆ.ಪಿ.ಪ್ರಭಾಕರ್, ಶಿವಕುಮಾರ್,ತಿಮ್ಮಾರೆಡ್ಡಿ ನಾರಾಯಣ್, ಮಂಜುನಾಥ್ ರೆಡ್ಡಿ, ಧನುಂಜಯ್ಯ, ಸಂತೋಷ್ ರೆಡ್ಡಿ, ಮುರಳಿ, ಎಸ್.ಕೆ.ಕುಮಾರ್. ರಮೇಶ್, ಮೆಡಿಕಲ್ ವೆಂಕಟೇಶ್, ಶಶಿ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.