ದೇಶದ ಪ್ರತಿ ಪ್ರಜೆಗಳಿಗೆ ಸಮಾನ ನ್ಯಾಯ ವದಗಿಸಿದ ಮಹಾನ್ ನಾಯಕ ಡಾ.ಅಂಬೇಡ್ಕರ: ಪಿ.ಐ ಹೀರೆಮಠ

(ಸಂಜೆವಾಣಿ ವಾರ್ತೆ)
ಶಹಾಪುರ:ಎ.18:ಸಮಾಜದಲ್ಲಿ ಸಹೋದರತೆ, ಸಮಾನತೆ, ಸಾಮರಸ್ಯ, ಮಹಿಳೆಯರಿಗೆ ಪುರುಷ ಸಮಾನ ಹಕ್ಕುಗಳು ಸೇರಿದಂತೆ ದೇಶದ ಪ್ರತಿ ಪ್ರಜೆಗೂ ಸಮಾನ ನ್ಯಾಯ ವದಗಿಸಿದ ನಾಯಕರಲ್ಲಿ ಅಂಬೇಡ್ಕರರು ಪ್ರಮುಖರು ಎಂದು ಶಹಾಪುರ ನಗರ ಸಿ.ಪಿ.ಐ ಚನ್ನಯ್ಯ ಹೀರೆಮಠ ಹೇಳಿದರು.
ನಗರದ ಕನ್ಯಾಕೋಳುರು ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೆಟ್ರಿಕ್ ನಂತರ ವಸತಿ ನಿಲಯದಲ್ಲಿ ಆಯೋಜಿಸಿದ ಅಂಬೇಡ್ಕರರ 130ನೇ ಜಯಂತ್ಯೋತ್ಸವದ ಪ್ರಯುಕ್ತ ಚಿಂಥನಾ-ಮಂಥನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಪಿಳಿಗೆಯು ಅಂಬೇಡ್ಕರರ ಆದರ್ಶ ತತ್ವ ಸಿದ್ದಾಂತಗಳನ್ನು ಪಾಲಿಸಿ ನಿಮ್ಮ ಜೀವನವನ್ನು ಹಸನಾಗಿಸಿಕೋಂಡು ಎಲ್ಲರಿಗೂ ಮಾದರಿಯಾಗಿ ಈ ಭಾಗದ ಹೆಮ್ಮೆಯನ್ನು ಕೊಂಡಾಡುವ ವ್ಯಕ್ತಿಯಾಗಬೇಕು. ಆಗ ಮಾತ್ರ ಬಾಬಾ ಸಾಹೇಬರು ನಮಗಾಗಿ ಪಟ್ಟ ಶ್ರಮಕ್ಕೆ ನೀವು ಕೊಡುಗೆ ನೀಡಿದಂತಾಗುತ್ತದೆ. ಆ ಕುರುತಾಗಿ ನಿಮ್ಮ ಗುರಿ ಮುಟ್ಟುವತ್ತ ನಿಮ್ಮ ಚಿತ್ತವಿತ್ತವಿರಬೇಕು ಎಂದು ವಸತಿ ನಿಲಯದ ವಿಧ್ಯಾರ್ಥಿಗಳಿಗೆ ತಿಳಿಸಿದರು.
ನಂತರ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮಸರಕಲ್ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿದ್ದಣ್ಣ ಪರಮೇಶ್ವರ ಮಾತನಾಡಿ, ಇಂಗ್ಲೆಂಡಿನಲ್ಲಿ ಭಾರತಕ್ಕೆ ಸ್ವತಂತ್ಯ ಕೇಳಿದ ಮೊದಲ ಭಾರತೀಯ ಅಂಬೇಡ್ಕರ. ದೇಶಕ್ಕಾಗಿ 90 ರಷ್ಟು ದುಡಿದರೆ ದಲಿತರಿಗಾಗಿ 10 ರಷ್ಟು ದುಡಿದಿದ್ದಾರೆ ಆದರೆ ಸದ್ಯದ ಪರಿಸ್ಥಿತಿಯಲ್ಲಿ ದಲಿತರಿಗಾಗಿಯೆ 90 ರಷ್ಟು ಶ್ರಮಿಸಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದ್ದು ದುಃಖಕರ ಸಂಗತಿಯಾಗಿದೆ. ಜಗತ್ತಿನಲ್ಲಿ ನೂರಾರು ಜನ ಹೋರಾಟಗಾರರು ಒಂದೊಂದು ವಿಷಯಕ್ಕೆ ಹೋರಾಟಿದರೆ, ಬಾಬಾ ಸಾಹೇಬರು ಶಿಕ್ಷಣ, ಸಮಾನತೆ, ಸ್ವತಂತ್ರ್ಯ, ಮಹಿಳಾ ಸಮಾನತೆ, ಮೂಡನಂಬಿಕೆ, ಜಾತಿ ವಿರೋದ ಹೀಗೆ ಹಲವಾರು ಬಗೆಯಲ್ಲಿ ಶ್ರಮಿಸಿದ ಮಹಾನ್ ನಾಯಕರಾದ ಕಾರಣ ಜಗತ್ತಿನಾದ್ಯಂತ ಅವರನ್ನು ಪೂಜಿಸುತ್ತಾರೆ. ಅದಕ್ಕಾಗಿ ಅಮೇರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮರು ಮಾರ್ಟಿನ್ ಲೂಥರ್‍ಕಿಂಗ್ ಗಿಂತ 10 ರಷ್ಟು ಜ್ಞಾನಿ ಅಂಬೇಡ್ಕರಾಗಿದ್ದರು ಎಂದು ಹೇಳಿದ್ದಾರೆ ಎಂದು ವಿಧ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾಧ್ಯಕ್ಷರಾದ ಶರಣು ದೋರನಹಳ್ಳಿ ಮಾತನಾಡಿ, ವಿಧ್ಯಾರ್ಥಿ ಜೀವನದಲ್ಲಿ ದೊಡ್ಡ ಗುರಿಯನ್ನಿಟ್ಟುಕೊಂಡು ಶ್ರಮಿಸಿದ್ದಲ್ಲಿ ಮಾತ್ರ ಯಶಸ್ಸು ಸಾಧ್ಯವಿದೆ. ಆ ನಿಟ್ಟಿನಲ್ಲಿ ಎಲ್ಲರು ಮುನ್ನಡೆಯಿರಿ ಎಂದು ಅವರು ನುಡಿದರು.
ಇದೇ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಹುತಪ್ಪ ಹವಾಲ್ದಾರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾದ ಶಾಂತಪ್ಪ, ಅಲ್ಪ ಸಂಖ್ಯಾತ ಕಲ್ಯಾಣಾಧಿಕಾರಿಯಾದ ಜೆಟ್ಟೆಪ್ಪ, ಮೇಲ್ವಿಚಾರಕರಾದ ಸುರೇಶ್ ಪಾತ್ರೋಟೆ, ಶಿವರಾಜ್.ಕೆ, ಗೋಪಾಲ, ಸಾವಿತ್ರಿ ಭಾವಿಕಟ್ಟಿ, ತಿರುಪತಿ ಸೇರಿದಂತೆ ನೂರಾರು ವಿಧ್ಯಾರ್ಥಿಗಳು ಭಾಗಿಯಾಗಿದ್ದರು.
ಈ ಕಾರ್ಯಕ್ರಮವನ್ನು ಭೀಮಾಶಂಕರ ಟೊಣ್ಣುರ ನಿರೂಪಿಸಿದರು. ಶೇಖರ ಬಡಿಗೇರ ಸ್ವಾಗತಿಸಿದರು. ವೆಂಕಟೇಶ ಆಲ್ದಾಳ ವಂದಿಸಿದರು.