ದೇಶದ ಪ್ರತಿಷ್ಠೆ ಹೆಚ್ಚಳ: ಬಿರ್ಲಾ

ನವದೆಹಲಿ,ಮೇ.೨೮- ದೇಶದ ಸ್ವಾಂತ್ರೋತ್ಸವದ ಅಮೃತ್ ಕಾಲದಲ್ಲಿ ಹೊಸ ಸಂಸತ್ ಭವನ ವಿಶ್ವದಲ್ಲಿ ಭಾರತದ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಲೋಕಸಭಾಧ್ಯಕ್ಷ ಓ ಬಿರ್ಲಾ ಇಂದಿಲ್ಲಿ ಹೇಳಿದ್ದಾರೆ.
ದೇಶದ ಸಂಸತ್ತಿಗೆ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಸಾಮರ್ಥ್ಯವಿದೆ. ಪ್ರಜಾಪ್ರಭುತ್ವ ಬಲವಾದ ಭವಿಷ್ಯದ ನಮ್ಮ ಅಡಿಪಾಯವಾಗಿದೆ. ವಿವಿಧತೆಯಲ್ಲಿ ಏಕತೆ ನಮ್ಮ ಶಕ್ತಿ ಎಂದು ತಿಳಿಸಿದ್ದಾರೆ.
ನೂತನ ಸಂಸತ್ ಭವನ ಉದ್ಘಾಟನೆ ವೇಳೆ ಮಾತನಾಡಿದ ಅವರು ಹೊಸ ಸಂಸತ್ತಿನ ಹೊಸ ವಾತಾವರಣ ಹೊಸ ಆಲೋಚನೆಗಳನ್ನು ಹುಟ್ಟುಹಾಕಲಿದೆ ಎನ್ನುವ ವಿಶ್ವಾಸವಿದೆ. ಸಂಸದೀಯ ವ್ಯವಸ್ಥೆಯ ಉತ್ತಮ ತತ್ವಗಳನ್ನು ನಾವು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ ಎಂದಿದ್ದಾರೆ.
ಅಮೃತ ಕಾಲದಲ್ಲಿ ವಿಶ್ವದಲ್ಲಿ ಭಾರತದ ಘನತೆ ಹೆಚ್ಚಿದೆ. ಇದು ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ಸಂಗತಿ ಎಂದು ಗುಣಗಾನ ಮಾಡಿದ್ದಾರೆ.
ಐತಿಹಾಸಿಕ ಕ್ಷಣಕ್ಕೆ ಭಾಗಿ:
ಹೊಸ ಸಂಸತ್ ಭವನ ಉದ್ಘಾಟನೆ ಮೂಲಕ ಇಡೀ ದೇಶವೇ ಇಂದು ಈ ಕ್ಷಣಕ್ಕೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ಕೇವಲ ಎರಡೂವರೆ ವರ್ಷದ ಅವಧೀಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಹೊಸ ಸಂಸತ್ತನ್ನು ನಿರ್ಮಿಸಲಾಗಿದೆ ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.