ನವದೆಹಲಿ,,ಜೂ.2- ದೇಶದ ಪ್ರಗತಿಯಲ್ಲಿ ರೈತರ ಬೆವರು ಮತ್ತು ಶ್ರಮ ದೊಡ್ಡ ಪಾತ್ರ ವಹಿಸುತ್ತದೆ. ಇದಕ್ಕೆ ಎಂದೂ ಬೆಲೆ ಕಟ್ಟಲಾಗದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ರೈತರ ಅವಿರತ ಶ್ರಮ ಆಹಾರ ಭದ್ರತೆಯ ಬೆನ್ನೆಲುಬು ಎಂದು ಗುಣಗಾನ ಮಾಡಿದ್ದಾರೆ.
ಪ್ರಧಾನಿಯಾಗಿ 9 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಕಾರ್ಯವೈಖರಿ ಕುರಿತು ಮಾಹಿತಿ ನೀಡಿದ್ದು ರೈತರ ಶ್ರಮದ ಫಲಗಾಗಿ ದೇಶದಲ್ಲಿ ಆಹಾರ ಭದ್ರತಾ ಯೋಜನೆ ಜಾರಿ ಮಾಡಲು ನೆರವಾಗಿದೆ ಎಂದಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಾರ್ಕೆಟಿಂಗ್ ಋತುವಿನಲ್ಲಿ ದಾಖಲೆಯ 260 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹಣೆ ಮಾಡಲಾಗಿದೆ. ಪ ಕಳೆದ ವರ್ಷದ ಒಟ್ಟು ಸಂಗ್ರಹಣೆ 188 ಲಕ್ಷ ಮೆಟ್ರಿಕ್ ಟನ್‌ಗಳನ್ನು 74 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಮೀರಿಸಿದೆ ಎಂದು ಅವರು ತಿಳಿಸಿದ್ದಾರೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಈ ಕುರಿತು ಮಾಹಿತಿ ನೀಡಿದ್ದು ಸುಮಾರು 47 ಸಾವಿರ ಕೋಟಿ ರೂಪಾಯಿಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ ಗೋದಿ ಖರೀದಿಗೆ ವೆಚ್ಚ ಮಾಡಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಗೋಧಿ ಸಂಗ್ರಹಣೆ ಕಾರ್ಯಾಚರಣೆಗಳಿಂದ 21 ಲಕ್ಷಕ್ಕೂ ಹೆಚ್ಚು ರೈತರು ಈಗಾಗಲೇ ಪ್ರಯೋಜನ ಪಡೆದಿದ್ದಾರೆ. 2022-23ರ ಖಾರಿಫ್ ಮಾರ್ಕೆಟಿಂಗ್ ಸೀಸನ್‌ನಲ್ಲಿ ಕಳೆದ ತಿಂಗಳ ಅಂತ್ಯದವರೆಗೆ 385 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಸಂಗ್ರಹಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಆಹಾರ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.ಇದರ ಫಲವಾಗಿ ಹೆಚ್ಚು ಹೆಚ್ಚು ಪ್ರಯೋಜನ ಜನರಿಗೆ ಸಿಗಲು ಸಹಕಾರಿಯಾಗಿದೆ ಎಂದಿದ್ದಾರೆ.