ದೇಶದ ಪ್ರಗತಿಯಲ್ಲಿ ಯುವಕರ ಪಾತ್ರ ಹಿರಿದು

ಭಾಲ್ಕಿ:ಜ.14:ದೇಶ ಪ್ರಗತಿ ಹೊಂದಬೇಕಾದರೆ ಯುವಕರ ಪಾತ್ರ ಬಹು ಮುಖ್ಯ ಎಂದು ಗ್ರಾಮ ಪಂಚಾಯಿತಿ ಸದಸ್ಯ ಏಕನಾಥ ಮೇತ್ರೆ ಹೇಳಿದರು.
ತಾಲ್ಲೂಕಿನ ಹಲಬರ್ಗಾ ಗ್ರಾಮದ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಶಿಬಿರದಲ್ಲಿ ಅವರು ಮಾತನಾಡಿದರು.
ಯುವಕರು ಉತ್ತಮ ವಿಚಾರಗಳೊಂದಿಗೆ ದೇಶದ ಸಂಸ್ಕøತಿಗಳನ್ನು ಪಾಲನೆ ಮಾಡುತ್ತಾ ನಿಖರವಾದ ಗುರಿ ಇಟ್ಟುಕೊಂಡರೆ ಮಾತ್ರ ಯಶಸ್ವಿಯಾಗಬಹುದು. ಅದರೊಂದಿಗೆ ನಾವು ದೇಶ ಪ್ರಗತಿಗೂ ಕಾರಣವಾಗಬಹುದು ಎಂದರು.
ಸಂಘಸಿರಿ ಪ್ರಶಸ್ತಿ ಪುರಸ್ಕೃತ ದೇವೇಂದ್ರ ಕರಂಜೆ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಕರಾಗಿದ್ದಾಗ ಮಾಡಿದ ಸಾಧನೆಗಳು ಎಲ್ಲ ಪೀಳಿಗೆ ಯುವಕರಿಗೆ ಆದರ್ಶ ಪ್ರಾಯವಾಗಿದ್ದವು. ಸಿದ್ದಗಂಗಾ ಮಠದ ಹಳೇ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಮಾತನಾಡಿ, ಬರೀ ಮಾತಿನಿಂದ ಯಾವ ಕೆಲಸವೂ ಆಗಲಾರದು. ಹೃದಯವಂತಿಕೆ ಹಾಗೂ ಶ್ರಮದಿಂದ ಮಾತ್ರ ಅಂದುಕೊಂಡ ಕೆಲಸ ಕೆ?ಗೂಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಪ್ರಾಚಾರ್ಯ ಶಿವರಾಜ ಬೊರಾಳೆ ಅಧ್ಯಕ್ಷತೆ ವಹಿಸಿದ್ದರು.
ಎನ್ ಎಸ್ ಎಸ್ ಅಧಿಕಾರಿ ಭಗವಾನ ಬಿರಾದಾರ, ಸುಭಾಷ ಗೊಬರೆ, ರಾಜಕುಮಾರ, ಶಿವಲೀಲಾ ಕಾಳೆ, ನಾರಾಯಣ ವೇಳಗೆ, ಸುಹಾಸಿನಿ ದಾಮಾ, ಪ್ರೇಮಕುಮಾರ, ಗೀತಾಬಾಯಿ ಇದ್ದರು.ಮಹಾದೇವ ಸ್ವಾಗತಿಸಿದರು. ಚೇತನಾ ನಿರೂಪಿಸಿದರು.