
ಚಿಕ್ಕನಾಯಕನಹಳ್ಳಿ, ಆ. ೧೨- ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಮಾಕುವಳ್ಳಿ ಗ್ರಾಮದಲ್ಲಿ ನವೋದಯ ಪದವಿ ಕಾಲೇಜಿ ವತಿಯಿಂದ ನಡೆದ ಎನ್‌ಎಸ್‌ಎಸ್ ಶಿಬಿರವನ್ನು ಚಿಂತಕ ಎಸ್.ಗಂಗಾಧರಯ್ಯ ಉದ್ಘಾಟಿಸಿದರು.
ಮಹಾತ್ಮಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುವಲ್ಲಿ ಎನ್‌ಎಸ್‌ಎಸ್ ಚಟುವಟಿಕೆಯೂ ಸಹ ಒಂದು ಭಾಗವೆನಿಸಿದೆ. ದೇಶದ ಹಳ್ಳಿಗಳು ಎಲ್ಲ ರೀತಿಯಲ್ಲಿ ಸ್ವಾವಲಂಭನೆಯಾದಾಗ ನಿಜವಾದ ದೇಶದ ಬೆಳವಣಿಗೆ ಎನಿಸಿದೆ ಎಂಬುದು ಗಾಂಧೀಜಿಯವರ ಆಶಯವಾಗಿದೆ ಎಂದರು.
ಗ್ರಾಮಗಳು ತಮ್ಮ ಅಸ್ಮಿತತೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಶಿಬಿರಾರ್ಥಿಗಳು ಹಳ್ಳಿಗಾಡಿನ ಜನರೊಂದಿಗೆ ಹಾಗೂ ಅಲ್ಲಿನ ಪರಿಸರದೊಳಗೆ ಬೆರೆತು ತಮ್ಮ ಸೇವಾ ಕಾರ್ಯವನ್ನು ತೊಡಗಿಸಿಕೊಳ್ಳುವ ಮೂಲಕ ಹಳ್ಳಿಗಳ ಅಭಿವೃದ್ದಿಯಲ್ಲಿ ಪಾಲುದಾರರಾಗಿರಿ ಎಂದರು.
ಶಿಬಿರಾಧಿಕಾರಿ ಪ್ರೊ.ಸದಾನಂದಸ್ವಾಮಿ ಮಾತನಾಡಿ, ಹಳ್ಳಿಯ ಜನರ ಭಾವನೆಗಳಿಗೆ ಸ್ಪಂದಿಸಿ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
ಪ್ರಭಾರ ಪ್ರಾಂಶುಪಾಲರಾದ ಡಾ. ಸಿ. ರವಿಕುಮಾರ್ ಮಾತನಾಡಿ, ನಾಯಕತ್ವ ಬೆಳೆಸಿಕೊಳ್ಳುವಲ್ಲಿ ಯುವ ವರ್ಗಕ್ಕೆ ಈ ಶಿಬಿರ ಉಪಯುಕ್ತವೆನಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯ ಲಿಂಗರಾಜು, ಹಾಲು ಉತ್ಪದಾಕರ ಸಂಘದ ಅಧ್ಯಕ್ಷ ಗಂಗಾಧರಾಚಾರ್, ಉಪನ್ಯಾಸಕರಾದ ಅನಿತಾಲಕ್ಷ್ಮಿ, ಶಿವಕುಮಾರ್, ಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.