ದೇಶದ ಪ್ರಗತಿಗೆ ಶಿಕ್ಷಕ ಆಧಾರ ಸ್ತಂಭ

ಆಲಮೇಲ್:ಜ.12:ಏನು ಅರಿಯದ ಮಕ್ಕಳಿಗೆ ಜ್ಞಾನ ತುಂಬಿ ರಾಷ್ಟ್ರದ ಉತ್ತಮ ಪ್ರಜೆಯಾಗಿ ರೂಪಿಸುತ್ತಾನೆ, ಗುರು ಶಿಷ್ಯರ ಸಂಬಂಧದಲ್ಲಿ ಇಂದಿನ ಹಾಗೂ ಹಿಂದಿನ ದಿನಗಳಲ್ಲಿ ವ್ಯತ್ಯಾಸವಾದರು ಶಿಕ್ಷಕರು ಮಾತ್ರ ತನ್ನ ವೃತ್ತಿಯ ಬಗ್ಗೆ ಪೂಜ್ಯತೆ ಭಾವದಿಂದ ಕಾಯಕ ಮಾಡುವುದುರೊಂದಿಗೆ ಉತ್ತಮ ಸಮಾಜ ನಿರ್ಮಾಣ ಮಾಡುವುದೇ ತನ್ನ ಕರ್ತವ್ಯವೆಂದು ಭಾವಿಸಿ ಸೇವೆಗೈಯುತ್ತಿದ್ದಾರೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು.

ಪಟ್ಟಣದ ಇಂಡಿ ರಸ್ತೆಯಲ್ಲಿರುವ ಸರಕಾರಿ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದಾರಿ ಸುಂದರವಾಗಿದ್ದಾಗ ಅದು ತಲುಪುವ ಗುರಿಯ ಬಗ್ಗೆ ತಿಳಿದುಕೊಳ್ಳಬೇಕು ಆದರೆ ಭವಿಷ್ಯ ರೂಪಿಸುವ ಗುರಿಯಿದ್ದಾಗ ದಾರಿಯ ಬಗ್ಗೆ ಯೋಚಿಸದೆ ಮುನ್ನಡೆಯಬೇಕು ಇಂತಹ ಸಂದರ್ಭದಲ್ಲಿ ಕೈ ಹಿಡಿದು ಗುರಿ ಮುಟ್ಟಿಸಿ ಸಾಧನೆ ಶಿಖರವೇರಿಸುವವನೆ ನಿಜವಾದ ಗುರು ಎಂದು ನುಡಿದರು.

ಉರ್ದು ಮಾಧ್ಯಮ ಶಿಕ್ಷಣ ಸಂಯೋಜಕ ನವಾಜಖಾನ ಪಠಾಣ ಮಾತನಾಡಿ ಇಂದಿನ ಶಿಕ್ಷಣ ಕ್ರಾಂತಿಯ ಯುಗದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ, ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಇಂದು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಕಲಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳಸಬೇಕು, ನಮಗೆ ವಿದ್ಯೆ ಎಂಬ ಸಂಪತ್ತನ್ನು ನೀಡಿ ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿ ಎಂದು ಗುರುತಿಸಿದ ನಿವೃತ್ತ ಗುರುಗಳಿಗೆ ವೇದಿಕೆಯ ಮುಖಾಂತರ ಗೌರವಿಸುತ್ತಿರುವದು ಅಭಿನಂದನೀಯ ಕಾರ್ಯವಾಗಿದೆ ಎಂದರು.

ನಿವೃತ್ತ ಶಿಕ್ಷಕ ಆಯ್.ಬಿ.ಮುಲ್ಲಾ ಮಾತನಾಡಿ ವಿದ್ಯಾರ್ಥಿಗಳು ಗುರುಗಳನ್ನು ಮೀರಿ ಸಾಧನೆ ಮಾಡಿದಾಗ ಗುರುವಿನ ಜೀವನ ಸಾರ್ಥಕವಾಗುತ್ತದೆ ಹಾಗೂ ಶಿಕ್ಷಣದಿಂದ ಮಕ್ಕಳ ವಂಚಿತರಾದಲ್ಲಿ ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ ದೇಶದ ಪ್ರಗತಿಗೆ ಶಿಕ್ಷಣ ಆಧಾರ ಸ್ತಂಭವಾಗಿದ್ದು ಅಕ್ಷರ ಕಲಿಸಿದ ಗುರುಗಳನ್ನು ನಿತ್ಯವೂ ಸ್ಮರಿಸಿದರೆ ಬದುಕು ಧನ್ಯವಾಗುತ್ತದೆ ಎಂದರು.

ಪಟ್ಟಣ ಪಂಚಾಯತ ಅಧ್ಯಕ್ಷ ಹಣಮಂತ ಹೂಗಾರ, ಎಸ್.ಕೆ.ಗುಗ್ಗರಿ, ಉರ್ದು ಮಾಧ್ಯಮ ಶಿಕ್ಷಣ ಸಂಯೋಜಕ ನವಾಜಖಾನ ಪಠಾಣ, ಎಸ್.ಎ.ಕನ್ನಳ್ಳಿ, ಅಶೋಕ ಭೂಸನೂರ, ರಿಯಾಜ್ ಬಿಳವಾರ, ರಾಜಅಹ್ಮದ ಬೆಣ್ಣಿಶಿರೂರ, ಫಾರೂಕ ಮೇಲಿನಮನಿ, ಎಂ.ಎಸ್.ಚೌಧರಿ, ರಿಯಾಜ್ ಸುಂಬಡ, ಸೈಯದ್ ದೇವರಮನಿ, ಮು.ಗು.ಕುದರತಅಲಿ ಭೂಸನೂರ, ಎ.ಡಿ.ಭೂಸನೂರ, ಎ.ಹೆಚ್.ಕೆಂಭಾವಿ, ಅಲ್ತಾಫ ಸಾಲೋಟಗಿ, ಅಯೂಬ್ ಪಟೇದ್, ಮೌಲಾಲಿ ಮೇಲಿನಮನಿ, ಗಾಲೀಬ ಮಸಳಿ, ಮುತ್ತು ಗುಂದಗಿ, ಎಂ.ಎಂ.ಮುಲ್ಲಾ, ಅಲ್ತಾಫ ಕಮಲಾಪೂರ, ನೂರಲ್ಲಹುನದ್, ಆಬೀದ್ ಮರತೂರ್, ಲಾಯಕಲಿ ಭೂಸನೂರ್, ಇಲಿಯಾಸ ನಿವಾಳಕೊಡಿ, ಮುರತುಜ್ ಎಲಗಾರ, ಆರೀಫ್ ಮೇಲಿನಮನಿ ಹಾಗೂ ಮತ್ತಿತರರಿದ್ದರು.