ದೇಶದ ಪ್ರಗತಿಗೆ ಯುವಕರ ಪಾತ್ರ ಮುಖ್ಯ

ರಾಯಚೂರು.ಜ.೧೨-ಪ್ರತಿಯೊಬ್ಬ ಯುವಕರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅನುಸರಿಸಿದಾಗ ಮಿಂಚಿನಂತೆ ಮಿನಗುವುದರಲ್ಲಿ ಮತ್ತು ದೇಶದ ಪ್ರಗತಿಗೆ ಯುವಕರ ಪಾತ್ರ ಬಹುಮುಖ್ಯ ವಾಗಿದೆ ಎಂದು ಶಿಕ್ಷಕ ಅಶೋಕ ಪಾಟೀಲ್ ಹೇಳಿದರು.
ಅವರಿಂದು ದಿನ್ನಿ ಸಕಾ೯ರಿ ಮಾದರಿ ಹಿರಿಯ ಪ್ರಾಥಮಿಕಯಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ೧೫೮ನೇ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾಯ೯ಕ್ರಮದ ಮುಖ್ಯ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು. ಹೇಡಿಗಳು, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು, ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲುನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ, ಸಹಾನುಭೂತಿ ಯುಳ್ಳವರಾಗಿರಬೇಕೆಂದರು.
ಈ ಸಂದಭ೯ದಲ್ಲಿ ಶಾಲೆಯ ಮುಖ್ಯಗುರುಗಳು, ಶಿಕ್ಷಕರು ಹಾಗೂ ವಿದ್ಯಾಥಿ೯ಗಳು ಉಪಸ್ಥಿತರಿದ್ದರು.