ದೇಶದ ಪ್ರಗತಿಗೆ ಬುನಾದಿ ಹಾಕಿದ ಕಾಂಗ್ರೆಸ್ ಪಕ್ಷ

ಜಗಳೂರು.ಡಿ.೨೯; ಭಾರತ ದೇಶದ ಸ್ವಾಭಿಮಾನ ಸಂಕೇತ ಸರ್ವ ಧರ್ಮದ ಹಿತ ಕಾಯುವ ಮೂಲಕ ದೇಶಕ್ಕೆ ಸ್ವತಂತ್ರ ಕೊಟ್ಟಂತ ಏಕೈಕ ಪಕ್ಷವೇ ಕಾಂಗ್ರೆಸ್ ಪಕ್ಷ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಹೇಳಿದರು  ಪಟ್ಟಣದ ಸುದೀರ್ ರೆಡ್ಡಿ ನಿವಾಸದ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ 136 ನೇ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು ಶತಮಾನಗಳ ಕಾಲ ಬ್ರಿಟೀಷರ ವಿರುದ್ದ ಹೋರಾಡಿ ತಾಯ್ನಾಡಿಗೆ ಸ್ವತಂತ್ರ ತಂದು ಕೊಟ್ಟಿದ್ದಲ್ಲದೆ ಸುಮಾರು 60 ವರ್ಷಗಳ ಕಾಲ ದೇಶವನ್ನಾಳಿ ಬಡತನ ನಿರ್ಮೂಲನೆಗೆ ನಾಂದಿ ಹಾಡಿದೆ ದೀನ ದಲಿತರ ಶೋಷಿತರ ರೈತರ ಮಹಿಳೆಯರ ಜನಸಾಮಾನ್ಯರ ಅಬಿವೃದ್ದಿಗೆ ತನ್ನದೇ ಕೊಡುಗೆ ನೀಡಿದೆ ಎಂದರು. ಕೃಷಿ.ಕೈಗಾರಿಕೆ.ತಂತ್ರಜ್ಞಾನ..ಶಿಕ್ಷಣ. ಸೇರಿದಂತೆ ಹಲವು ಕ್ಷೇತ್ರಮಾಡಿದ ಸಾಧನೆ ಇಂದಿಗೂ ಕಾಣುತ್ತಿದೆ ದೇಶಕ್ಕಾಾಗಿ ಪ್ರಾಣವನ್ನ ತ್ಯಾಗ ಮಾಡಿದಂತಹ ಪಕ್ಷದಲ್ಲಿ 136 ವರ್ಷದ ಇತಿಹಾಸ ವಿಶ್ವಕ್ಕೆ ಮಾದರಿಯಾಗಿದೆ ಆದರೆ ಏನು ಸಾಧನೆ ಮಾಡದ ಬಿಜೆಪಿ ಅಪಪ್ರಚಾರ.ಸುಳ್ಳು ಆಶ್ವಾಸನೆ ಧಾರ್ಮಿಕ ಭಾವನೆ ಧರ್ಮದ ಹೆಸರಿನಲ್ಲಿ ಅದಿಕಾರಕ್ಕೆ ಬಂದು ಇಡೀ ದೇಶವನ್ನ ಖಾಸಗೀ ವಲಯಕ್ಕೆ ಮಾರಲು ಹೊಟಿದೆ ಯುವ ಜನಾಂಗಕ್ಕೆ ಉದ್ಯೋಗ ಭರವಸೆ ನೀಡಿ ವಂಚಿಸಿದ ಪ್ರಧಾನ ಮಂತ್ರಿಗಳು ಜನರಿಂದ ಅಂತರ ಕಾಪಾಡುಕೊಳ್ಳುವ ಮೂಲಕ ಮಾಧ್ಯಮಗಳನ್ನ ವಿರೋಧ ಪಕ್ಷಗಳನ್ನ ಎದುರಿಸಲಾಗದೆ ತೆರೆಮರೆಯಲ್ಲಿ ಮನ್ ಕಿಭಾತ್ ನಲ್ಲೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರುಕೆಪಿಸಿಸಿ ಎಸ್ಟಿ ಘಟಕ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸವಾಗಿದೆ ಇದನ್ನ ಸಹಿಸದ ಬಿಜೆಪಿ ಕೋಮುವಾದ .ರಾಷ್ಟೀಯ ವಾದ ಮೂಲಕ ಜನರ ಭಾವನೆ ಜೊತೆ ಆಟ ಆಡುತಿದೆ ಆದರೆ ಕಾಂಗ್ರೆಸ್ ಪಕ್ಷ ಜ್ಯಾತ್ಯಾತೀತ ತತ್ವದ ಅಡಿಯಲ್ಲಿ ಸರ್ವರಿಗೂ ಸಮಪಾಲು ಸಮಬಾಳು ಎಂಬಂತೆ ಎಲ್ಲಾ ವರ್ಗದ ಜನರ ಹಿತ ಕಾಪಾಡಲಿದ್ದು ಮುಂದಿನ ದಿನಗಳಲ್ಲಿ ಮತ್ತೆ ಅದಿಕಾರಕ್ಕೆ ಬರುವುದು ಶತ ಸಿದ್ದ ಅದಕ್ಕಾಗಿ ಕಾರ್ಯಕರ್ತರು ಈಗಿನಿಂದಲೇ ಶ್ರಮ ವಹಿಸಿ ದುಡಿಯಬೇಕು ಎಂದರು. ಈ ವೇಳೆ ಕಾಂಗ್ರೆಸ್ ಪಕ್ಷದ ಕ್ಷೇತ್ರ ಸಂಯೋಜಕ ಕಲ್ಲೇಶ್ ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ .ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ ರಾಜ್ಯ ಕಾಂಗ್ರೆಸ್ ಎಸ್ಸಿ ವಿಭಾಗ ಸದಸ್ಯ ಸಿ.ತಿಪ್ಪೇಸ್ವಾಮಿ   ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ ಜಿಲ್ಲಾ ಎಸ್ಸಿ ಘಟಕ ಉಪಾಧ್ಯಕ್ಷ ಜಿ.ಎಚ್.ಶಂಭುಲಿಂಗಪ್ಪ  ತಾಲ್ಲುಕ್ ಎಸ್ಟಿ  ಘಟಕ ಅಧ್ಯಕ್ಷ .ಬಿ.ಲೋಕೇಶ್ ಎಸ್ಸಿ ಘಟಕ ವೆಂಕಟೇಶ್ .ಒಬಿಸಿ ಘಟಕ ಗಿಡ್ಡನಕಟ್ಟೆ ತಿಪ್ಪೇಸ್ವಾಮಿ.ಮಹಿಳಾ ಘಟಕ ಅಧ್ಯಕ್ಷೆ ಕೆಂಚಮ್ಮ  ಕಾರ್ಯದರ್ಶಿ ಸಾವಿತ್ರಮ್ಮ ಸೇರಿದಂತೆ ವಿವಿದ ಮುಂಚೂಣಿ ಘಟಕ ಅಧ್ಯಕ್ಷರು ಮುಖಂಡರು ಕಾರ್ಯಕರ್ತರು ಇದ್ದರು