ದೇಶದ ದುಸ್ಥಿತಿಗೆ ಕೇಂದ್ರ ಸರ್ಕಾರ ಹೊಣೆ

ಹರಪನಹಳ್ಳಿ.ಜೂ.೧; ದೇಶ ಇವತ್ತು ಸಂಕಷ್ಟ ಪರಿಸ್ಥಿತಿಯಲ್ಲಿದೆ ಜನರ ಜೀವ ಮತ್ತು ಜೀವನ ಭಯಾನಕ ಪರಿಸ್ಥಿತಿಯಲ್ಲಿದೆ, ಜನ ಆತಂಕದಲ್ಲಿದ್ದಾರೆ, ಭಯಕ್ಕೆ ಒಳಗಾಗಿದಾರೆ, ಜನರ ಪ್ರಾಣಗಳ ರಕ್ಷಣೆ ಮಾಡುವಂತ ಸರ್ಕಾರಗಳಿಗೆ ಸರಿಯಾದ ಜ್ಞಾನ ಇಲ್ಲ ಆ ಕಾರಣಕ್ಕಾಗಿ ಇವತ್ತಿನ ಸಣ್ಣದಾದಂತ ಕರೋನಾ ಕಾಯಿಲೆ ದೊಡ್ಡ ಅವಘಡವನ್ನೇ ಸೃಷ್ಟಿಸಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂ.ಪಿ ಲತಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.ಹರಪನಹಳ್ಳಿ ತಾಲೂಕಿನ ಕೆ. ಕಲ್ಲಹಳ್ಳಿ ಗ್ರಾಮದಲ್ಲಿ ಕೋವಿಡ್ ಸಾಂಕ್ರಾಮಿಕ ಕಾಯಿಲೆಯ ಲಸಿಕಾ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ದೇಶ ಮತ್ತು ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರ್ಕಾರ, ಪರಿಸ್ಥಿತಿ ನಿಭಾಯಿಸಲು ವಿಫಲವಾಗಿರುವುದರಿಂದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮಾನ್ಯ ರಾಹುಲ್ ಗಾಂಧಿಯವರ ಮಾರ್ಗದರ್ಶನದ ಮೇರೆಗೆ, ಮಾನ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶಿವಕುಮಾರ್ ನಿರ್ದೇಶನದ ಮೇರೆಗೆ ಇಡೀ ದೇಶದಲ್ಲಿ ಲಸಿಕಾ ನೋಂದಣಿ ಅಭಿಯಾನವನ್ನ ಕೈಗೊಂಡಿದೆ ಎಂದು ತಿಳಿಸಿದರು.ಲಸಿಕಾ ನೋಂದಣಿ ಅಭಿಯಾನದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮತ್ತೂರು ಬಸವರಾಜ್ ಮತ್ತು ಕೆ. ಕಲ್ಲಹಳ್ಳಿ ಗ್ರಾಮದ ಮುಖಂಡರು ಭಾಗವಹಿಸಿದ್ದರು.