ದೇಶದ ಜೊತೆ ಧರ್ಮ ರಕ್ಷಣೆ ಸಂಕಲ್ಪವೂ ಬೇಕು-ಸಿ.ಟಿ.ರವಿ

ಲಿಂಗಸುಗೂರು.ಅ.೧೭- ಪಟ್ಟಣದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಎರಡನೇ ದಿನದ ಸಮಾರಂಭದಲ್ಲಿ ಶಿವಮೊಗ್ಗದ ಶಾಂತಾ ಆನಂದ ಸಂಗ್ರಹಿಸಿ ಸಂಪಾದಿಸಿದ ‘ಅರಿವಿನ ದೀವಿಗೆ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಮತ್ತು ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ-ಶಾಂತಿ ಸಮೃದ್ದಿ ಸರ್ವರಿಗಾಗಲಿ ಎಂದು ಸಾರಿರುವ ಶ್ರೀ ರಂಭಾಪುರಿ ಪೀಠ ನಡೆಸಿಕೊಂಡು ಬರುತ್ತಿರುವ ಬಹುತೇಕ ದಸರಾಗಳಲ್ಲಿ ಪಾಲ್ಗೊಂಡಿದ್ದೇನೆ. ದಸರೆಯ ಸಂದರ್ಭದಲ್ಲಿ ನಮ್ಮ ಚಿಂತನ ಮಂಥನಗಳನ್ನು ಪರಾಮರ್ಶಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.ಇತ್ತೀಚಿಗೆ ತಮಿಳುನಾಡಿನ ರಾಜಕೀಯ ಮುಖಂಡರೊಬ್ಬರಿಗೆ ಅರಿವಿನ ಕೊರತೆಯಿಂದ ಸನಾತನ ಧರ್ಮ ನಾಶವಾಗಲಿ ಎಂದು ಹೇಳಿಕೆ
ನೀಡಿದ್ದಾರೆ. ಯಾರೋನ್ನು ಓಲೈಕೆ ಮಾಡಲು ಹಿಂದೂ ಧರ್ಮದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಧರ್ಮ ನಾಶವಾದರೆ ಉಳಿಯುವುದು ಅಧರ್ಮ, ನಾಶವಾಗಬೇಕಾಗಿರುವುದು ಧರ್ಮವಲ್ಲ ಅಧರ್ಮ ಇದನ್ನು ಅರಿತುಕೊಳ್ಳಬೇಕು. ಧರ್ಮವೆಚಿದರೆ ಜಾತಿ ಸೂಚಕವಲ್ಲ ಬದುಕಿನ ಸಾರ್ಥಕತೆಯನ್ನು ತೋರಿಸುವುದು ಧರ್ಮ. ಸರ್ವ ಜೀವಿಗಳ ಕಲ್ಯಾಣ ಬಯಸುವುದು ಧರ್ಮ. ಸನಾತನ ಧರ್ಮಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಈ ಧರ್ಮ ನಾಶವಾದರೆ ಜಗತ್ತು ಉಳಿಯಲು ಸಾಧ್ಯವಿಲ್ಲ. ಜಗತ್ತಿನ ಕಲ್ಯಾಣ ಬಯಸಿದ ನಾಡಲ್ಲಿ ಧರ್ಮ ವಿನಾಶದ ಮಾತು ಬರಬಾರದು. ರಾಷ್ಟ್ರ ರಕ್ಷಣೆಗೆ ಶಾಸ್ತ್ರ ಮತ್ತು ಶಸ್ತ್ರದ ಅವಶ್ಯಕತೆ ಇದೆ. ದೇಶದ ಮೇಲೆ ಅತಿಕ್ರಮಣಕಾರರು ದಾಳಿ ಮಾಡಿದರೂ ದೇಶ ನಾಶವಾಗದೇ ಉಳಿದಿರುವುದು ಶಾಸ್ತ್ರ ಹಾಗೂ ಶಸ್ತ್ರದಿಂದ ಎಂದರು.
ಈ ವೇಳೆ ರಂಭಾಪುರಿ ಜಗದ್ಗುರುಗಳಾದ ಡಾ.ವೀರ ಸೋಮೇಶ್ವರ ಶಿವಾಚಾರ್ಯ ಹಾಗೂ ಹರಗುರು ಚರಮೂರ್ತಿಗಳು ಭಾಗವಹಿಸಿದ್ದರು.