ದೇಶದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಸಿದ್ದ

ಜಗಳೂರು.ಜು.೨೦; ದೇಶದಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತಚಲಾಯಿಸಲು ಸಿದ್ದರಾಗಿದ್ದು.ಕೇಂದ್ರ ಮತ್ತು ರಾಜ್ಯದಲ್ಲಿನ ಭ್ರಷ್ಟ ಆಡಳಿತ ಬಿಜೆಪಿ ಪಕ್ಷಕ್ಕೆ ಮುಕ್ತಿ ದೊರೆಯಲಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವೇಣುಗೋಪಾಲ್ ಭವಿಷ್ಯ ನುಡಿದರು.ಪಟ್ಟಣದ ವಾಲ್ಮಿಕಿ ಭವನದಲ್ಲಿ  ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ನವಸಂಕಲ್ಪ ಚಿಂತನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾಂಗ್ರೆಸ್ ಪಕ್ಷ ಜನಸಾಮಾನ್ಯರ ಬಿ.ಜೆ.ಪಿ ಸೊನಿಯಾಗಾಂಧಿ ರಾಹುಲ್ ಗಾಂಧಿ ಇ.ಡಿ ಮೂಲಕ ನೋಟಿಸ್ ಕೊಟ್ಟು  ಹತ್ತಿಕ್ಕುವ ಹುನ್ನಾರ ನಡೆಸುತ್ತಿದೆ.ಮೋದಿ ಅವರು ದೇಶದ ಜನತೆಗೆ ಮೋಡಿ ಮಾಡಿ ಗೆಲುವು ಸಾಧಿಸಿ ಇದೀಗ ಜನ ವಿರೋಧಿಯಾಗಿದ್ದಾರೆ‌.ಬಿ.ಜೆ.ಪಿ.ಗೆ ಮುಂದಿನ ದಿನಗಳಲ್ಲಿ ರಾಜ್ಯದ ಜನರೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ,ಬಿ.ಜೆ.ಪಿ ನೇತೃತ್ವದ ಪ್ರಧಾನಿ ಮೋದಿ ಅವರು ಸುಳ್ಳು ಪ್ರಣಾಳಿಕೆಗಳ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದ್ದು.ಪ್ರತಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ ಹುಸಿ ಯಾಗಿದೆ.ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆರೈತರು ಸಂಕಷ್ಟದಲ್ಲಿದ್ದಾರೆ. ಅಲ್ಲದೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅರಿತು ಯುವಕರು ಜಾಗೃತರಾಗ ಬೇಕು.ಕಾಂಗ್ರೆಸ್ ಪಕ್ಷದಿಂದ ದೇಶದ ಎಲ್ಲಾ ವರ್ಗದ ಜನತೆಗೆ ಸಮಬಾಳು ಸಮಪಾಲು ಸಾಧ್ಯ ಎಂದರು.ಎ.ಐ.ಸಿ.ಸಿ ಜಿಲ್ಲಾ ಉಸ್ತುವಾರಿ ಮಾಜಿ ಶಾಸಕ ಶಿವಮೂರ್ತಿ ನಾಯ್ಕ ಮಾತನಾಡಿ,ದೇಶದಲ್ಲಿ ಯು.ಪಿ.ಎ ಪಕ್ಷ ಬೆಂಬಲಿಸುವ ಮಾಜಿ ಪ್ರಧಾನಿ ದೇವೇಗೌಡ್ರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಾತ್ಯಾತೀತ ಪಕ್ಷ  ಸಮುದಾಯದ ಪಕ್ಷ ಎಂಬುದಾಗಿ ಬದಲಾಯಿಸಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.ಬಿ.ಜೆ.ಪಿ ಪಕ್ಷ ಸುಳ್ಳಿನ ಕಾರ್ಖಾನೆಯಾಗಿದೆ ದೇಶದ ರಾಜೀವ್ ಗಾಂಧಿ ಅವರನ್ನು ಕೈಹಿಡಿದ ಸೊನಿಯಾಗಾಂಧಿ ಅವರನ್ನು ಅಪರಾಧಿಪಟ್ಟಿಗೆ ಸೇರಿಸಿದ್ದಾರೆ.ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರುಗಳನ್ನು ಅವರನ್ನು ಬಂಧಿಸಿ ಅವಮಾನಿಸಿದ್ದಾರೆ.ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಆರ್ಥಿಕ ತಜ್ಞರಾಗಿದ್ದರು.ಕಾಂಗ್ರೆಸ್ ಗೆ ಸತ್ಯಾಗ್ರಹಗಳ ಮೂಲಕ ತ್ಯಾಗ ಬಲಿದಾನದ  ಇತಿಹಾಸವಿದೆ ಎಂದರು.ಆಪರೇಷನ್ ಕಮಲಕ್ಕೆ ಹಣ ಭರಿಸುವುದು ಈಡಿ ಮುಖಾಂತರ ತನಿಖೆಯಾಗಲಿ ಬಿ.ಜೆ.ಪಿ ಪಕ್ಷ ಆಡಳಿತವೇ ತಿಳಿದಿಲ್ಲ,ದೇಶದಲ್ಲಿ ಇಂದಿನ ಬಿಜೆಪಿ  ಯುಗ ಕತ್ತಲೆಯುಗ ಜಾತ್ಯಾತೀತವಾಗಿರುವ ದೇಶದಲ್ಲಿ ದುರಾಡಳಿತದ ಪರಮಾವಧಿ ಎಂದು ಕಿಡಿಕಾರಿದರು.ಜಗಳೂರು ವಿಧಾನಸಭಾ ಕ್ಷೇತ್ರದ ಮಾಜಿ.ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು165 ಕಾರ್ಯಕ್ರಮಗಳನ್ನಹ ರೂಪಿಸಿ ಅನುಷ್ಠಾನಗೊಳಿಸಿದ ಏಕೈಕ ಪಕ್ಷವಾಗಿದೆ.ಬೂತ್ ಮಟ್ಟದಿಂದ  ಎಲ್ಲಾ ಸಮಾಜದವರನ್ನು ವಿಶ್ವಾಸಗಳಿಸಿ ಕಾಂಗ್ರೆಸ್  ಕಾರ್ಯಕರ್ತರು ಪಕ್ಷ ಸಂಘಟಿಸ ಬೇಕಿದೆ ಎಂದು ಸಲಹೆ ನೀಡಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತನಾಡಿ,ಬಿಜೆಪಿ ಪಕ್ಷದ ಆಡಳಿತ ವ್ಯವಸ್ಥೆಯಿಂದ ದೇಶದ ಜನತೆ ಬೇಸತ್ತು ಹೋಗಿದ್ದಾರೆ‌ ರಾಜ್ಯದಲ್ಲಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ದಿ ಕಾರ್ಯಗಳು ಡಿ.ಕೆ ಶಿವಕುಮಾರ್ ಅವರ ಸಂಘಟನಾ ಚತುರತೆಯಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಖಚಿತ ಬಿ.ಜೆ.ಪಿ ತೊಲಗಿಸಲು ಸನ್ನದ್ಧರಾಗಿರಿ ಎಂದು ಕರೆ ನೀಡಿದರು.ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಿ.ಬಸವರಾಜ್ ಮಾತನಾಡಿ ತಿರಂಗದ ವಾರಸುದಾರರು ಕಾಂಗ್ರೆಸ್ ನವರು ಬಿ.ಜೆ.ಪಿ ಆರ್ ಎಸ್ ಎಸ್ ಇತಿಹಾಸ ತಿರುಚುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕೆ.ಪಿ.ಸಿ.ಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಸ್ವಾಗತಿಸಿದರು.ಈ ಸಂದರ್ಭದಲ್ಲಿ,ಕೆ.ಪಿ.ಸಿ.ಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ. ಮುಖಂಡರಾದ ಚಿಕ್ಕಮ್ಮನಟ್ಟಿ ದೇವೇಂದ್ರಪ್ಪ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್,ಮುಖಂಡರಾದ ಪುಷ್ಪ ಲಕ್ಷ್ಮಣಸ್ವಾಮಿ.ಮಂಜುನಾಥ್,ಮಹೇಶ್ವರಪ್ಪ,ಬೈರೇಶ್, ಪಲ್ಲಾಗಟ್ಟೆ ಶೇಖರಪ್ಪ, ಲೋಕೇಶ್ ತಿಮ್ಮಾರೆಡ್ಡಿ,ವಿರೇಶ್,ತಿಪ್ಪೇಸ್ವಾಮಿಗೌಡ,ಯರಬಳ್ಳಿ ಉಮಾಪತಿ,ಮರಿಯಪ್ಪ,ಸಿ.ತಿಪ್ಪೇಸ್ವಾಮಿ ಕಬ್ಬಳ್ಳಿ ಬಸವರಾಜ್ ಕೆಂಚಮ್ಮಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.