ದೇಶದ ಜನತೆ ಈ ಬಾರಿ ನಿರೀಕ್ಷೆ ಮೀರಿ ಕಾಂಗ್ರೆಸ್ ಮಿತ್ರ ಪಕ್ಷಗಳನ್ನು ಬೆಂಬಲಿಸಿದ್ದಾರೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.08-ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು. ದೇಶದ ಜನತೆ ಈ ಬಾರಿ ನಿರೀಕ್ಷೆ ಮೀರಿ ಕಾಂಗ್ರೆಸ್ ಮಿತ್ರ ಪಕ್ಷಗಳನ್ನು ಬೆಂಬಲಿಸಿದ್ದಾರೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.
ಅವರು ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮಿತ್ರಪಕ್ಷಗಳು 400 ಸ್ಥಾನ ಪಡೆಯುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಬಿಜೆಪಿಗೆ 240 ಸ್ಥಾನ ಪಡೆದಿದ್ದು, ಕಳೆದ ಸಲಕ್ಕಿಂತಲೂ 60 ಸ್ಥಾನ ಕಡಿಮೆ ಪಡೆಯಲμÉ್ಟೀ ಸಾಧ್ಯವಾಗಿದೆ ಎಂದರು.
ಆದರೆ ಕಳೆದ ಸಲಕ್ಕಿಂತ ಈಬಾರಿ ಶೇಕಡವಾರು ಮತ ಕಾಂಗ್ರೆಸ್‍ಗೆ ಏರಿಕೆಯಾಗಿದೆ. ಒಟ್ಟಾರೆ ಎನ್‍ಡಿಎ 23 ಕೋಟಿ, ಕಾಂಗ್ರೆಸ್ 13 ಕೋಟಿ ಮತಗಳನ್ನು ಪಡೆದಿವೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.
ಮಲ್ಲಿಕಾರ್ಜುನಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಸಮರ್ಥವಾಗಿ ಪಕ್ಷ ಸಂಘಟಿಸಿದ್ದಾರೆ. ಪ್ರತಿ ಪಕ್ಷದ ನಾಯಕರಾಗಿಯೂ ಅವರು ಸಮರ್ಥರು. ಲೋಕಸಭೆ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗೆಲ್ಲವ ನಿರೀಕ್ಷೆ ಇತ್ತು. ಆದರೆ ಬರಲಿಲ್ಲ. ಹೀಗಿದ್ದರೂ ಕಾಂಗ್ರೆಸ್ ಕಳೆದ ಸಲಕ್ಕಿಂತ ಹೆಚ್ಷಿನ ಸಾಧನೆ ಮಾಡಿದ್ದು, ಜನತೆ ಕೈ ಹಿಡಿದಿದ್ದಾರೆ ರಾಜ್ಯದ ಜನತೆಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಸುನಿಲ್‍ಬೋಸ್‍ರವರು ಚಾಮರಾಜನಗರ ಲೋಕಸಭೆ ಕ್ಷೇತ್ರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಮುನ್ನಡೆ ಕಾಯ್ಸುಕೊಂಡಿದ್ದಾರೆ. ಹೊಸ ಅಭ್ಯರ್ಥಿಯಾದರೂ ಸರಕಾರದ ಸಾಧನೆ, ಕಾರ್ಯಕ್ರಮಗಳಿಂದ ಅತ್ಯಂತ ಹೆಚ್ಚಿನ ಅಂತರದಿಂದ ಗೆದ್ದಿದ್ದಾರೆ.
ಜನತೆ ಮನಸ್ಸಿನಲ್ಲಿ ಕಾಂಗ್ರೆಸ್ ಬಗ್ಗೆ ಸಕಾರಾತ್ಮಕ ಭಾವನೆ ಇದ್ದು, ಒಲವು ಹೊಂದಿದ್ದಾರೆ. ಅಹಿಂದ ವರ್ಗದವರು ಹೆಚ್ಷಿನದಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ 95 ಸಾವಿರ, ಬಿಜೆಪಿ 67 ಸಾವಿರ ಮತಗಳಿಸಿದ್ದು, ನಮ್ಮ ಪಕ್ಷಕ್ಕೆ 33 ಸಾವಿರ ಮಗಳ ಅಂತರ ನೀಡಿದ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ.
ಮುಖ್ಯಮಂತ್ರಿಗಳು ನಮ್ಮ ಕ್ಷೇತ್ರಕ್ಕೆ 150 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಆ ಮಂಜೂರಾಗಿರುವ ಅನುದಾನದ ಕಾಮಗಾರಿಗಳಿಗೆ ನೀತಿ ಸಂಹಿತೆ ಮುಗಿದ ನಂತರ ಮುಂದಿನ ವಾರದಲ್ಲಿ ಚಾಲನೆ ದೊರೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಮರವಾಡಿ ರೇವಣ್ಣ, ಅಕ್ಮಲ್ ಪಾμÁ, ಯೋಗೀಶ್, ಗೌಡಹಳ್ಳಿ ರಾಜೇಶ್ ಹಾಜರಿದ್ದರು.