
ಅಫಜಲಪುರ: ಆ.16:ತ್ಯಾಗ ಬಲಿದಾನಗಳ ಸಂಕೇತವಾಗಿರುವ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುವ ಮೂಲಕ ದೇಶದ ಘನತೆಗೆ ಹಾಗೂ ನಮ್ಮ ಸಂವಿಧಾನಕ್ಕೆ ಗೌರವ ತರುವ ಕೆಲಸ ಮಾಡೋಣ ಎಂದು ಕ.ಸಾ.ಪ ಮಹಿಳಾ ಪ್ರತಿನಿಧಿ ಪ್ರೇಮಾವತಿ ರಾಜಾನವರ್ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಭಾರತ ವಿಶ್ವದಲ್ಲೇ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದ್ದರೂ ಕೂಡ ಜಾಗತೀಕರಣ ಮಟ್ಟದಲ್ಲಿ ವಿಶ್ವ ಗುರುವಾಗಿ ಬೆಳೆದು ನಿಂತಿದೆ. ಏಕೆಂದರೆ ಇಲ್ಲಿನ ಸಂವಿಧಾನ, ತಂತ್ರಜ್ಞಾನ, ವಿಜ್ಞಾನ, ಆವಿಷ್ಕಾರ, ಶಿಕ್ಷಣ, ಸಂಸ್ಕøತಿ ಹೀಗೆ ಏಕತೆಯಲ್ಲಿ ವಿವಿಧತೆಯನ್ನು ಹೊಂದಿದ ರಾಷ್ಟ್ರವಾಗಿದೆ. ಬಾಹ್ಯಾಕಾಶದಿಂದ ಹಿಡಿದು ಸಬ್ ಮರಿನ್ ವರೆಗೆ ಹೊಸ ಹೊಸ ಅನ್ವೇಷಣೆಗಳನ್ನು ಕೈಗೊಳ್ಳುವ ಮೂಲಕ ಇಂದು ವಿಶ್ವದ ಗಮನ ಸೆಳೆದು ನಿಂತಿದೆ. ಹೀಗಾಗಿ ಭವ್ಯ ಭಾರತದ ಸತ್ಪ್ರಜೆಗಳಾಗಿರುವ ನಾವು ಈ ದೇಶದ ಸವಾರ್ಂಗೀಣ ಅಭಿವೃದ್ಧಿಗೆ ಕೈ ಜೋಡಿಸೋಣ ಹಾಗೂ ನಮ್ಮ ನಾಡು, ನುಡಿ, ಜಲ, ಗಡಿ, ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ನಿರಂತರ ಮಾಡೋಣ ಎಂದು ತಿಳಿಸಿದರು.
ಈ ವೇಳೆ ಕ.ಸಾ.ಪ ಪದಾಧಿಕಾರಿಗಳಾದ ಚಂದು ಬನ್ನಟ್ಟಿ, ಸಿದ್ದು ಶಿವಣಗಿ, ರೂಪಾ ಸಾಲೋಟಗಿ, ಶೋಭಾ, ಅರುಣಕುಮಾರ ಹೂಗಾರ ಇತರರು ಇದ್ದರು.