ಅಥಣಿ :ಜು.28: ದೇಶದ ಇತಿಹಾಸದಲ್ಲಿ ಜು.26 ಯಾರು ಮರೆಯದ ದಿನ. ಪಾಕಿಸ್ತಾನ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ವೀರಯೋಧರು ವಿಜಯಗಳಿಸಿದ ದಿನವಾಗಿದೆ. ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ಇಂದು ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕರ ದೇಶ ಸೇವೆಯನ್ನು ಸ್ಮರಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರಾಚಾರ್ಯ ಕೃತಿಕಾ ಘೋಶ್ ಹೇಳಿದರು.
ಅವರು ಇಲ್ಲಿನ ಕೆಎಲ್ ಇ ಸಂಸ್ಥೆಯ ಶ್ರೀಮತಿ ರಣಮೋಡಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ಗಡಿಯಲ್ಲಿ ಹಗಲಿರುಳು ಕಾಯುತ್ತಿರುವ ಸೈನಿಕರ ಶ್ರಮದಿಂದಲೇ ದೇಶದ ವಾಸಿಗಳು ನೆಮ್ಮದಿಯಿಂದ ಇದ್ದಾರೆ. ನಮ್ಮ ಸೈನಿಕರೇ ನಮಗೆ ಹೀರೋಗಳು, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ದೇಶ ಸೇವೆ ಮಾಡುವ ಮನೋಭಾವ ಬೆಳೆಯಬೇಕು ಎಂದರು.
ಭಾರತ ಶಾಂತಿಪ್ರಿಯ ದೇಶವಾಗಿದ್ದು, ಯಾವುದೇ ದೇಶದವರ ತಂಟೆಗೆ ನಾವು ಹೋಗುವುದಿಲ್ಲ. ನಮ್ಮ ತಂಟೆಗೆ ಬಂದರೆ ನಾವು ಬಿಡುವುದಿಲ್ಲ ಎಂಬಂತೆ ನಮ್ಮ ಸೈನಿಕರು ಕಾರ್ಗಿಲ್ ಯುದ್ಧದಲ್ಲಿ 500ಕ್ಕೂ ಅಧಿಕ ಸೈನಿಕರು ಪ್ರಾಣ ತ್ಯಾಗ ಮಾಡಿ ದೇಶಕ್ಕೆ ವಿಜಯವನ್ನು ತಂದುಕೊಟ್ಟರು. ಈ ದಿನವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಸೈನಿಕ ಶ್ರೀಶೈಲ ಐಹೊಳೆ ಮಾತನಾಡಿ 24 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ವಿಜಯೋತ್ಸವವನ್ನು ಪ್ರತಿವರ್ಷ ದೇಶದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಚೀನಾ, ಇಂಡೋ- ಪಾಕ್? ಹಾಗೂ ಕಾಗಿರ್ಲ್? ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿ ದೇಶಕ್ಕೆ ಗೆಲುವು ತಂದುಕೊಡುವಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮತ್ತು ದೇಶದಲ್ಲಿ ಗಡಿ ಕಾಯುತ್ತಿರುವ ಸೈನಿಕರ ಸೇವೆಯನ್ನು ಸ್ಮರಿಸಿ ಗೌರವಿಸುವ ಸಿ ಬಿ ರಣಮೋಡೆ ಶಾಲೆಯ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದಿಸಿದ ಅವರು
ಪಾಕ್? ಸೈನಿಕರನ್ನು ಹಿಮ್ಮೆಟ್ಟಿಸಿ ಜಗತ್ತಿಗೆ ಶಕ್ತಿ ಪ್ರದರ್ಶನ ಮೂಲಕ ಭಾರತದ ಸಂದೇಶವನ್ನು ನೀಡಿದ ದಿನವಾಗಿದೆ. ಕಾರ್ಗಿಲ್ ಯುದ್ಧವು ಕಠಿಣವಾಗಿತ್ತು. 18 ಸಾವಿರ ಅಡಿ ಎತ್ತರದ ಶಿಖರದ ಮೇಲಿಂದ ಪಾಕ ಸೈನಿಕರು ದಾಳಿ ಮಾಡುತ್ತಿದ್ದರೂ ನಮ್ಮ ಸೈನಿಕರು ಧೃತಿಗೆಡದೆ 83 ದಿನಗಳವರೆಗೆ ಹೋರಾಟದಲ್ಲಿ 500 ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿ ಜಯವನ್ನು ತಂದುಕೊಟ್ಟಿದ್ದಾರೆ. ಅವರ ಪ್ರಾಣ ತ್ಯಾಗ ಬಲಿದಾನವನ್ನು ಸ್ಮರಿಸುವುದರ ಜೊತೆಗೆ ಇಂದಿನ ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ರಾಷ್ಟ್ರಪ್ರೇಮ ಮೂಡಿಸಲು ಇಂತಹ ಕಾರ್ಯಕ್ರಮಗಳು ಸ್ಪೂರ್ತಿ ದಾಯಕವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ರಾಜು ಶಿರಗುಪ್ಪಿ, ಸತ್ಯಪ್ಪ ಮೆಂಡಿಗೇರಿ ಮತ್ತು ಅಪ್ಪಾಸಾಬ ಕವಾಲಿ ಕಾರ್ಗಿಲ್ ವಿಜಯೋತ್ಸವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಮಾಜಿ ಸೈನಿಕರಿಗೆ ರಕ್ಷಾ ಬಂಧನ ಕಟ್ಟಿ ಹೂಗುಚ್ಛ ನೀಡಿ ಅಭಿನಂದಿಸಿದರು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ಕಾರ್ಗಿಲ್ ಯುದ್ಧದಲ್ಲಿ ಸೈನಿಕರು ಪಾಕಿಸ್ತಾನದೊಂದಿಗೆ ಹೋರಾಡಿ ವಿಜಯ ಸಾಧಿಸಿದ ಸವಿನೆನಪಿಗೆ ಯುದ್ಧ ಅಣುಕ ಪ್ರದರ್ಶನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಕು. ಋಷಾಲಿ ಬುರ್ಲಿ ಸ್ವಾಗತಿಸಿದರು. ಕು. ಸಿಂಚನಾ ಸೂರ್ಯವಂಶಿ ಪರಿಚಯಿಸಿದರು. ಕು. ಸ್ವರೂಪ ಗಸ್ತಿ ನಿರೂಪಿಸಿದರು. ಕು. ವಿಜಯಲಕ್ಷ್ಮಿ ಕಡಲಗಿ ವಂದಿಸಿದರು.