ದೇಶದ ಕ್ರಾಂತಿಕಾರಿಗಳ ಕನಸು ನನಸು ಮಾಡಲು ಎಐಡಿಎಸ್‍ಓ ಸ್ಥಾಪನೆ

ಕಲಬುರಗಿ,ಜೂ.8-ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ಸ್ಥಾಪನೆಯಾಗಿರುವುದು ದೇಶದ ಕ್ರಾಂತಿಕಾರಿಗಳ ಕನಸು ನನಸು ಮಾಡಲು ಎಂದು ಆರ್ಗನೈಸೇಷನ್ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದರು.
ನಗರದ ಈಶ್ವರಚಂದ್ರ ವಿದ್ಯಾಸಾಗರ ಭವನದಲ್ಲಿ ಹಮ್ಮಿಕೊಂಡಿದ್ದ ಎಐಡಿಎಸ್‍ಓ ಸ್ಥಾಪನಗೆ ಸ್ಪೂರ್ತಿಯಾದ ವiಹಾನ್ ಕ್ರಾಂತಿಕಾರಿ ಹಾಗೂ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೇಡ್ ಶಿವದಾಸ್ ಘೋಸ್ ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತಾಡಿದರು.
ಕಾಮ್ರೇಡ್ ಘೋಷ್ ರವರು ಅನುಶಿಲನ್ ಸಮಿತಿಯಲ್ಲಿದ್ದು ಬ್ರೀಟಿಷ್ ವಿರುದ್ದ ಹಲವಾರ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದರು. ಸ್ವತಂತ್ರ ನಂತರ, ದೇಶದಲ್ಲಿ ಶಿಕ್ಷಣದ ವ್ಯಾಪಾರಿಕರಣ, ನಿರುದ್ಯೋಗ, ಬಡತನ, ಅಸಮಾನತೆ ವಿರುದ್ದ ಹೋರಾಟ ಕಟ್ಟಲು ಮತ್ತು ನೇತಾಜಿ ಭಗತ್ ಸಿಂಗ್ ರವರ ಕನಸಿನ ಭಾರತವಾದ ಸಮಾಜವಾದ ಭಾರತ ನಿರ್ಮಿಸಲು ಒಂದು ನೈಜ ಸಂಘಟನೆಯಾದ ಎಐಡಿಎಸ್‍ಓ ಸ್ಥಾಪನೆಗೆ ಸ್ಪೂರ್ತಿಯಾದರು. ಕಾಮ್ರೇಡ್ ಶಿವದಾಸ್ ಘೋಸ್ ರವರ ವಿಚಾರಾದ ಆಧಾರದ ಮೇಲೆ ಸಂಘಟನೆಯು ಬಲಿಷ್ಠವಾಗಿ ಬೇಳೆಯುತ್ತಿದೆ. ಕಾಮ್ರೇಡ್ ಶಿವದಾಸ್ ಘೋಷ್ ವಿಚಾರದಿಂದ ಸ್ಪೂರ್ತಿ ಪಡೆದು ದೇಶದಲ್ಲಿ ಕಾಡುತ್ತಿರುವ ಶೈಕ್ಷಣಿಕ ಸಮಸ್ಯಗಳ ವಿರುದ್ದ ಹಾಗೂ ಹೊಸ ಶಿಕ್ಷಣ ನೀತಿ ವಿರುದ್ದ ಬಲಿಷ್ಠ ಹೋರಾಟ ಕಟ್ಟಲು ಕರೆ ನೀಡಿದರು.
ಎಐಡಿಎಸ್‍ಓ ಜಿಲ್ಲಾ ಅಧ್ಯಕ್ಷರಾದ ಹಣಮಂತ ಎಸ್ ಹೆಚ್ ರವರು ಮತನಾಡುತ್ತ ವಿದ್ಯಾರ್ಥಿಗಳಿಂದು ಒಗ್ಗಾಟ್ಟಾಗಿ ಅನ್ಯಾಯದ ವಿರುದ್ದ ಹೋರಾಟ ಕಟ್ಟಲು ಮುಂದಾಗಬೇಕೆಂದು ಕರೆ ನೀಡಿದರು.
ಈ ಕ್ರಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿಗಳಾದ ತುಳಜರಾಮ ಎನ್.ಕೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಐಡಿಎಸ್‍ಓ ಜಿಲ್ಲಾ ಸಮಿತಿ ಸದಸ್ಯರಾದ ವೆಂಕಟೇಶ್ ದೇವದುರ್ಗ, ಪ್ರೀತಿ ದೋಡ್ಡಮನಿ, ಗೋವಿಂದ ಯಳವಾರ, ನಾಗರಾಜ್ ರಾವೂರ್,ಅಜಯ್, ಸಿದ್ದಾರ್ಥ, ಯುವರಾಜ್, ಸ್ಪೂರ್ತಿ,ಬಾಬೂ, ಸಾಬಣ್ಣ, ಸೇರಿ ಹಲವಾರು ವಿದ್ಯಾರ್ಥಿಗಳು ಭಾಗವಿಸಿದ್ದರು.