ದೇಶದ ಕೈಗಾರಿಕಾ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ

ಕಲಬುರಗಿ:ಸೆ.17:ಭಾರತದ ಕೈಗಾರಿಕಾ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ. ಪರಿಶ್ರಮ, ಶ್ರದ್ಧೆ, ಶಿಸ್ತು, ಸಮಯ ಪಾಲನೆ ,ಪ್ರಾಮಾಣಿಕತೆ, ದೃಢ ನಿರ್ಧಾರ, ಆತ್ಮವಿಶ್ವಾಸ, ಮುಂದಾಲೋಚನೆ ಎಂತಹ ಅವರು ಪಾಲಿಸಿರುವ ಮೌಲ್ಯಗಳನ್ನು ನಾವು ಇಂಜಿನಿಯರ ಗಳು ಪಾಲಿಸಿದರೆ ಭಾರತ ಅಗ್ರ ರಾಷ್ಟ್ರವಾಗುವದು ನಿಶ್ಚಿತ. ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಂಸ್ಥೆಯು ನುರಿತ ನಿವೃತ್ತ ಹಿರಿಯ ಇಂಜಿನಿಯರ್ ಗಳ ತಾಂತ್ರಿಕ ಸಮಿತಿ ರಚಿಸಿ ಸರ್ಕಾರಕ್ಕೆ ತಾಂತ್ರಿಕ ಸಮಸ್ಯೆಗಳ ಸುಧಾರಣೆಗೆ ಸಲಹೆ ನೀಡಬಹುದು ಎಂದು ನಿವೃತ್ತ ಚೀಫ್ ಇಂಜಿನಿಯರ್ ರಾದ ಶ್ರೀ ಆರ್ ಚೆಲುವರಾಜ್ ರವರು ನುಡಿದರು. ಅವರು ಕಲಬುರ್ಗಿಯ ಕೋರ್ಟ್ ರಸ್ತೆಯ ವಿಶ್ವೇಶ್ವರಯ್ಯ ಭವನದಲ್ಲಿ ಡಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಇಂಡಿಯಾ ಕಲಬುರ್ಗಿ ಲೋಕಲ್ ಸೆಂಟರ್ ಆಯೋಜಿಸಿರುವ 55 ನೆಯ ಇಂಜಿನಿಯರ್ಸ್ ಡೇ ಮತ್ತು ಸರ್ ಎಂ ವಿಶ್ವೇಶ್ವರಯ್ಯನವರ 162 ಜಯಂತಿ ನಿಮಿತ್ತ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಗೌರವತಿ ಅತಿಥಿಗಳಾಗಿ ಕೆ ಬಿ ಜೆ ಎನ್ ಎಲ್ ಭೀಮರಾಯನ ಗುಡಿ ಚೀಫ್ ಇಂಜಿನಿಯರ್ ಶ್ರೀ ಪ್ರೇಮ್ ಸಿಂಗ್ ಮತ್ತು ಕಲಬುರ್ಗಿ ಮುನ್ಸಿಪಾಲಿಟಿಯ ಸೂಪರ್ ಇಂಟೆಂಟ ಇಂಜಿನರಾದ ಶ್ರೀ ಆರ್ ಪಿ ಜಾದವ್ ಆಗಮಿಸಿದ್ದರು. ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ನ ಅಧ್ಯಕ್ಷರಾದ ಶ್ರೀ ಸುಗುರು ಸುಭಾಷ್ ರವರು ಅಧ್ಯಕ್ಷತೆ ವಹಿಸಿದ್ದರು. ಡಾ. ನಾಗೇಂದ್ರ ಹೆಚ್ ಅವರು ಸರ್ ಎಂ ವಿಶ್ವೇಶ್ವರಯ್ಯನವರ ಕುರಿತು ಜೀವನ ಸಾಧನೆ ಬಗ್ಗೆ ಮಾತನಾಡಿದರು. ಬಾಲ್ಕೀಯ ಭೀಮಣ್ಣ ಕಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಧ್ಯಾಪಕರಾದ ಡಾ. ರಾಜ್ಶೇಖರ್ ಮಠಪತಿ ಅವರು ಉಪನ್ಯಾಸ ನೀಡಿದರು.ಇದೇ ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಇಂಜಿನಿಯರ ಗಳಾದ ರಾಜ ಕುಮಾರ ಜೇವರ್ಗಿ, ಬಿ ಎಸ್ ಮಾಲಿ ಬಿರಾದರ್, ನಾರಾಯಣ್ ಎಂ ಭಗವತಿ, ಚಂದ್ರಶೇಖರ್ ಬಿ ಬಿಜಾಪುರ್ , ಉಷಾರಾಣಿ ಪಾಟೀಲ್, ಡಾ. ರಾಜಶೇಖರ ಮಠಪತಿ ,ಹಣಮಂತ್ ಬಿ ಪ್ರಭು, ಪ್ರಕೀರಣ ನಾನ್ಚಂದ್ ಶಹ ,ಸಿಎಂ ಪಡಶೆಟ್ಟಿ ,ಡಾ. ಶಶಿಧರ್ ಎಸ್ ಕಲ ಶೆಟ್ಟಿ ,ಡಾ.ರಾಧಾಬಾಯಿ ಕಳಸ್ಕರ್ ,ರವರನ್ನು ಸನ್ಮಾನಿಸಲಾಯಿತು. ಡಾ. ಬಾಬು ರಾವ್ ಸೇರಿಕಾರ್ ಸ್ವಾಗತಿಸಿದರು ಡಿ ಇನ್ಸ್ಟಿಟ್ಯೂಷನ್ ಇಂಜಿನಿಯರ್ಸ್ ನಾ ಗೌರವ ಕಾರ್ಯ ದರ್ಶಿಗಳಾದ ಶ್ರೀ ಹನುಮಯ್ಯ ಬೇಲೂರೇ ವಂದಿಸಿದರು

ಡಾ. ಶ್ರೀಧರ್ ಪಾಂಡೆ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ನ ಸಮಿತಿ ಸದಸ್ಯರಾದ ಬಿಎಸ್ ಮೊರೆ , ಜಿ ಆರ್ ಮುತ್ತಗಿ, ಚಂದ್ರಶೇಖರ್ ಕಕ್ಕೇರಿ ,ಡಾ. ಪ್ರಭುದೇವ್ ಮಾದೇವಪ್ಪ, ಡಾ. ಪ್ರಶಾಂತ್ ಕಾಂಬಳೆ ಪೆÇ್ರಫೆಸರ್ ಉದಯ್ ಬಳ್ಳಾರಿ, ಚನ್ನವೀರಯ್ಯ ಮಠಪತಿ, ಸೀತಾರಾಮ ಮಣ್ಣೂರ್ ಸುವರ್ಣ ದಡೇದ್, ಚಂದ್ರಕಲಾ ಪೂಜಾರಿ ಡಾ ಬಸವರಾಜ ಕೋರಿ ಉಪಸ್ಥಿತರಿದ್ದರು