ದೇಶದ ಐಕ್ಯತೆಗೆ ಭಾಷಾ ಸೌಹಾರ್ದತೆ ಸಹಕಾರಿ : ಡಾ.ತಿಪ್ಪೇರುದ್ರ

ಬಳ್ಳಾರಿ ನ.22, ನಮ್ಮ ದೇಶದಲ್ಲಿ ನೂರಾರು ಭಾಷೆಗಳಿವೆ. ಇಂತಹ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಭಾಷೆಯು ಸೌಹಾರ್ದತೆಗೆ ಸಹಕಾರಿಯಾಗಿದೆ ಎಂದು ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ತಿಪ್ಪೇರುದ್ರ ಸಂಡೂರು ತಿಳಿಸಿದರು.
ನಗರದ ಸರಳಾದೇವಿ ಕಾಲೇಜಿನಲ್ಲಿ ನಿನ್ನೆ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಭಾಷಾ ಸೌಹಾರ್ದತೆಯ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಬಹುಭಾಷೆ ಮತ್ತು ಬಹುಸಂಸ್ಕøತಿಯ ಅರಿವನ್ನು ಮೂಡಿಸುವ ಕಾರಣದಿಂದ ಪ್ರತಿವರ್ಷ ನವೆಂಬರ್ 21ರಂದು ಭಾಷಾ ಸೌಹಾರ್ದತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಭಾರತದ ವಿವಿಧತೆಯ ಸಂಸ್ಕøತಿಯನ್ನು ಬೆಸೆಯುವ ಸಾಧನವಾಗಿ ಭಾಷೆ ಕಾರ್ಯನಿರ್ವಹಿಸುತ್ತದೆ. ಪ್ರತಿಯೊಬ್ಬರೂ ಭಾಷೆಯ ಬಗ್ಗೆ ಸಂಕುಚಿತ ಮನೋಭಾವನೆಯನ್ನು ಬಿಟ್ಟು ವಿಶಾಲ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಹೇಮಣ್ಣ ಅವರು ಅಧ್ಯಕ್ಷತೆವಹಿಸಿ ಮಾತನಾಡಿ ದೇಶದ ಐಕ್ಯತೆಗೆ ಕಾರಣವಾಗುವ ಸಂಗತಿಗಳಲ್ಲಿ ಭಾಷೆಯೂ ಒಂದಾಗಿದ್ದು, ಇದು ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಭಾಷೆಗಳಲ್ಲಿ ಪರಸ್ಪರ ಕೊಳುಕೊಡುಗೆಯ ಮೂಲಕ ವೈವಿಧ್ಯಮಯ ಸಂಸ್ಕøತಿ ಬೆಳೆಯುತ್ತದೆಂದರು.
ಉರ್ದುವಿಭಾಗದ ಮುಖ್ಯಸ್ಥೆ ಡಾ. ಸಬಿಹಾ ಷಾಹೀನ್, ಕನ್ನಡ ವಿಭಾಗದ ಡಾ.ಬಿ.ಜಿ.ಕಲಾವತಿ, ಇಂಗ್ಲಿಷ್ ವಿಭಾಗದ ಶಾಂತಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಧ್ಯಾಪಕ ವೃಂದ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಧ್ಯಾಪಕರಾದ ಹೆಚ್.ಎಂ.ಚೆನ್ನಬಸಯ್ಯ ನಿರೂಪಿಸಿದರು. ಸಿ.ಕಾವಲ್ಲಯ್ಯ ಸ್ವಾಗತಿಸಿದರು. ಎಸ್.ಗುರುಬಸಪ್ಪ ವಂದಿಸಿದರು.