ದೇಶದ ಐಕ್ಯತೆಗೆ ಭಂಗ ತರುವ ಕೆಲಸಗಳನ್ನು ಮಾಡಬೇಡಿ

ಮೈಸೂರು:ಏ:18: ನಮ್ಮ ದೇಶದ ಜನಸಂಖ್ಯೆ ಹಾಲಿ 136 ಕೋಟಿ ಇದ್ದು, ಇದರಲ್ಲಿ 35% ಮಂದಿ ಮಾತ್ರ ಕಾನೂನುಗಳನ್ನು ಗೌರವಿಸುತ್ತಿದ್ದು, ಇನ್ನುಳಿದವರು ಕಾನೂನುಗಳನ್ನು ಗೌರವಿಸದಿರುವುದು ತೀವ್ರ ವಿಶಾದದ ಸಂಗತಿ ಎಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಶೋಕ್.ಜಿ.ನಿಜಗಣ್ಣನವರ್ ಬೇಸರ ವ್ಯಕ್ತಪಡಿಸಿದರು.
ಅವರು ಇಂದು ಬೆಳಿಗ್ಗೆ ನಗರದ ರಾಮಕೃಷ್ಣನಗರ ಇ ಮತ್ತು ಎಫ್ ಬ್ಲಾಕ್‍ನಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಮೈಸೂರಿನ ಅಲ್ಲಮ್ಮ ರೀಸರ್ಚ್ ಅಂಡ್ ಕಲ್ಚರಲ್‍ಫೌಂಡೇಶನ್ ಸಂಸ್ಥೆಯ ಉದ್ಘಾಟನೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ದೇಶದ ಪ್ರಜೆಗಳು ಬಲಾಡ್ಯ ರಾಷ್ಟ್ರವನ್ನಾಗಿ ನಿರ್ಮಿಸುವ ಚಿಂತನೆ ನಡೆಸಬೇಕೇ ಹೊರತು ದೇಶದ ಐಕ್ಯತೆಗೆ ಭಂಗ ತರುವ ಕೆಲಸಗಳನ್ನು ಮಾಡಬಾರದೆಂದು ಕಿವಿ ಮಾತು ಹೇಳಿದರು.
ಇತಿಹಾಸದಲ್ಲಿ ದಾಖಲಾಗಿರುವಂತೆ ಜಗತ್ತಿನಲ್ಲಿ ಹೆಣ್ಣು-ಹೊನ್ನು-ಮಣ್ಣಿಗಾಗಿ ಹೋರಾಡಿ ಜೀವನವನ್ನೇ ತೆತ್ತಿರುವ ಪ್ರಖರಣಗಳ ಸಂಖ್ಯೆಗೇನೂ ಕಡಿಮೆ ಇಲ್ಲ. ಶ್ರೇಷ್ಠ ವಚನಕಾರ ಅಲ್ಲಮ್ಮಪ್ರಭು ಹೆಣ್ಣು-ಹೊನ್ನು-ಮಣ್ಣಿಗಾಗಿ ಕೋಟಿ ಕೋಟಿ ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆಂದು ಕೆಲವು ಶತಮಾನಗಳ ಹಿಂದಯೇ ವಚನದ ಮೂಲಕ ಸಾರಿ ಹೇಳಿದ್ದರು ಎಂಬುದನ್ನು ನೆನಪು ಮಾಡಿಕೊಂಡು ನ್ಯಾಯಮೂರ್ತಿಗಳು, ನಮ್ಮಲ್ಲಿನ ಯುವ ಜನತೆ ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಸಮಾಜದ ಏಳಿಗೆಗಾಗಿ ಕಾರ್ಯೋನ್ಮುಖರಾದಲ್ಲಿ ನ್ಯಾಯಾಲಯದಲ್ಲಿ 70%ಕ್ಕಿಂತ ಹೆಚ್ಚು ವ್ಯಾಜ್ಯಗಳೇ ಇರುವುದಿಲ್ಲ ಎಂದರು.
ನಮ್ಮ ದೇಶದಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಮತ್ತು ಮಾಧ್ಯಮ ಅಂಗಗಳು ಒಂದು ಖುರ್ಚಿ-ಮಂಚದ ನಾಲ್ಕು ಕಾಲುಗಳಿದ್ದಂತೆ ಇವುಗಳಲ್ಲಿ ಯಾವುದಾದರು ಒಂದ ಅಂಗ ತಮ್ಮ ಪಾಲಿನ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಈ ನಾಲ್ಕು ಅಂಗಗಳನ್ನು ಸಮಾನವಾಗಿ ಕಾಣಬೇಕೆಂದು ಹೇಳಿದರು.
ಹಲಬಾರು ಕಾರಣಗಳಿಂದಾಗಿ ನ್ಯಾಯಾಂಗದಲ್ಲಿ ನಿಗಧಿತ ಕಾಲದಲ್ಲಿ ತೀರ್ಪುಗಳು ಹೊರ ಬರುವುದಿಲ್ಲ. ವಿಚಾರಣೆಯನ್ನು ಎದುರಿಸುತ್ತಿರುವವರಲ್ಲಿ ಕೆಲವರು ಹಣ ಮತ್ತು ಉನ್ನತ ಶಿಫಾರಸ್ಸುಗಳನ್ನು ಬಳಸಿಕೊಂಡು ಮೊಕದಮ್ಮೆಯಿಂದ ಹೊರ ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು, ಇದರಿಂದಾಗಿ ನ್ಯಾಯಾಂಗದ ಮೇಲೆ ಜನತೆ ಇಟ್ಟಿರುವ ನಂಬಿಕೆ ಕುಂಠಿತವಾಗುತ್ತಿದೆ ಎಂದು ಹೇಳಿದ ಅವರು. ಇಂದು ಅಲ್ಲಮ್ಮರ ಹೆಸರಿನಲ್ಲಿ ಉದ್ಘಾಟನೆಗೊಂಡಿರುವ ಸಂಸ್ಥೆಯು ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅಲ್ಲಮ ರಿಸರ್ಚ್‍ಮೆಂಟ್ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಚಿನ್ನಸ್ವಾಮಿ ವಡ್ಡಗೆರೆ, ಸಂಚಾಲಕ ಎಸ್.ಪಿ. ಮಧು, ಕಾರ್ಯದರ್ಶಿ ಬಿ. ರಾಜೇಶ್, ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.