ದೇಶದ ಎಲ್ಲಾ ಸಮುದಾಯದವರಿಗೂ ಸೌಲಭ್ಯಗಳನ್ನು ಕಲ್ಪಿಸಿದವರು ಡಾ.ಬಾಬಾಸಾಹೇಬ ಅಂಬೇಡ್ಕರ

ಆಳಂದ:ಮೇ.13:ಈ ದೇಶದಲ್ಲಿಎಲ್ಲಾ ಸಮುದಾಯದವರಿಗೂ ಸಂವಿಧಾನದ ಅಡಿಯಲ್ಲಿ ಸೌಲಭ್ಯ ವನ್ನು ಒದಗಿಸಿಕೊಟ್ಟವರು ಡಾ.ಬಿ.ಆರ್. ಅಂಬೇಡ್ಕರವರು ವಿಶೇಷವಾಗಿ ಮಹಿಳೆಯರಿಗೆ, ದಿನ ದಲಿತರು ,ಹಿಂದುಳಿದ ವರ್ಗದವರು. ಮುಸ್ಲಿಂರಿಗೆ ಆದಿವಾಸಿ ಜನಾಂಗದವರಿಗೆ ಸಂವಿಧಾನದ ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಯನ್ನು ನೀಡವುದರ ಮೂಲಕ ಸರ್ವರ ಕಲ್ಯಾಣವನ್ನು ಮಾಡಿದವರು ಡಾ. ಬಿ ಆರ್ ಅಂಬೇಡ್ಕರ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾದ ಡಾ ಜಯದೇವಿ ಗಾಯಕವಾಡ ಅವರು ಅಭಿಪ್ರಾಯಪಟ್ಟರು.
ಆಳಂದ ತಾಲೂಕಿನ ಗುಂಜಬಬಲಾದ ನಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರರವರ 133ನೇ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು ಮುಂದುವರೆದು ಈ ದೇಶದಲ್ಲಿಮಹಿಳೆಯರಿಗೆ ಆಸ್ತಿ ಹಕ್ಕನ್ನು ನೀಡಿದರು ಪ್ರತಿಯೊಬ್ಬರಿಗೂ ಉದ್ಯೋಗ ಓಟಿನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವುದರ ಜೊತೆಗೆ ಬದುಕುವ ಹಕ್ಕನ್ನು ಕೊಟ್ಟವರು ಡಾ.ಬಿ.ಆರ್ ಅಂಬೇಡ್ಕರ ಎಂದು ಹೇಳಿದರು.

  • ಮುಖ್ಯ ಅತಿಥಿಗಳಾಗಿ ನಾಗಪ್ಪ ಕೋರೆ, ಬಾಬು ಕೊರೆ, ಮಂಗಲಾ ತುಕಾರಾಮ ಮೇಲಿನಕೇರಿ ಗ್ರಾ.ಪಂ.ಅಧ್ಯಕ್ಷರು ಬೋಧನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಸ್ಥಿತಿ ಸುಷ್ಮಾ ನವಲೆ, ಜಗದೇವಪ್ಪ ಏಕಂಚಿ, ಶಿವಪ್ಪ ಮೇಲಿನಕೇರಿ,ಈ ಮಹಾಂತೇಶ ಸಿಂಗೆ, ನಾಮದೇವ ಎಸ್ ಬಬಲಾದಕರ್, ನಾಮದೇವ ನವಲೆ,
    ಡಾ. ಶಿವಕುಮಾರ ಸಿಂಗೆ ಸ್ವಾಗತಿಸಿದರು. ಪರಮೇಶ್ವರ ಸಿಂಗೆ ನಿರೂಪಿಸಿದರು. ಗೌತಮ ಸಿಂಗೆ ವಂದಿಸಿದರು ಜಯಂತ್ಯೋತ್ಸವದ ಅಧ್ಯಕ್ಷ ಪರಮೇಶ್ವರ ಡಿ ಮದನಕರ ಉಪಾಧ್ಯಕ್ಷ ಶರಣು ಮೇಲಿನಕೇರಿಯವರ ನೇತೃತ್ವದಲ್ಲಿ ಬಹಿರಂಗ ಸಭೆ ಮತ್ತು ಮೆರವಣಿಗೆ ವೈಭವದಿಂದ ಸಾಗಿತು. ಜಯಂತಿಯಲ್ಲಿ ಜೈಭೀಮ ತರುಣ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಊರಿನ ಹಿರಿಯರು ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ಅಭಿಮಾನಿಗಳು ಭಾಗವಹಿಸಿದ್ದರು